ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್ ವಿತರಣಾ ಕಾರ್ಯಕ್ರಮ

ಗುರುಮಠಕಲ್:ಜ.14: ಕಲ್ಯಾಣ ಕರ್ನಾಟಕ ಶಿಕ್ಷಕರ ಹಾಗೂ ಪದವಿಧರ ಕಲ್ಯಾಣ ಅಭಿವೃದ್ಧಿ ಸಂಘ (ರಿ) ಯಾದಗಿರಿ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಘಟಕ ಗುರುಮಠಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಜ್ಯೋತಿ ಸಂಜೀವಿನಿ ಆರೋಗ ಭಾಗ್ಯ ಡಿಜಿಟಲ್ ಕಾರ್ಡ್ ವಿತರಣಾ ಕಾರ್ಯಕ್ರಮ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಮಠ ಗುರುಮಠಕಲ್ ಇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶಿಕ್ಷಣ ಪ್ರೇಮಿಗಳು ಡಿ ಸಿ ಸಿ ಬ್ಯಾಂಕ್ ಕಲಬುರ್ಗಿ ಹಾಗೂ ಯಾದಗಿರಿ ಡಾಕ್ಟರ್ ಶ್ರೀ ಸುರೇಶ್ ಸಜ್ಜನ್ ಅವರ ನೇತೃತ್ವದಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವು ಸಂಕ್ಷಿಪ್ತ ವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಯಾದಗಿರಿ ಅಧ್ಯಕ್ಷ ರು ರಾಘವೇಂದ್ರ ಅಳ್ಳಳ್ಳಿ. ಸಂಘಟನಾ ಕಾರ್ಯದರ್ಶಿ ಗಳು ಜಿಲ್ಲಾ ಘಟಕ ಯಾದಗಿರಿ ಶ್ರೀ ಮೂರ್ತಿ ಜೀ.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗುರುಮಠಕಲ್ ಅಧ್ಯಕ್ಷ ರಾದ ಸಂತೋಷ ನೀರೆಟಿ. ಶಾಲಾ ಶಿಕ್ಷಕರ ಸಂಘದ ಗುರುಮಠಕಲ್ ಅಧ್ಯಕ್ಷ ರಾದ ನಾರಾಯಣ ರೆಡ್ಡಿ ಪೆÇ.ಪಾಟೀಲ್. ವಿಭಾಗಿಯ ಉಪಾಧ್ಯಕ್ಷ ರು ಹಾಗೂ ಸದಸ್ಯರು ಗುರುಮಠಕಲ್ ಅನಿಲ್ ಕುಮಾರ್.ಪ್ರಧಾನ ಕಾರ್ಯದರ್ಶಿ ಗಳು ವಿಜಯಕುಮಾರ ವಾರದ ಗುರುಮಠಕಲ್. ಗುರುಮಠಕಲ್ ನೌಕರರ ಸಂಘದಘ ಕ್ರೀಡಾ ಕಾರ್ಯದರ್ಶಿ ಗಳು ನಾಗೇಶ್. ಹಾಗೂ ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.ಇ ಸಂದರ್ಭದಲ್ಲಿ ಡಿಜೀಟಲ್ ಕಾರ್ಡ್ ಗಳನ್ನು ತಯಾರಿಸಿದ ನಾಗರಾಜ ಗೌಡ.ಮದುಕುಮಾರ್.ಪರಮೇಶ ಮತ್ತು ವೆಂಕಟೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.