ಜ್ಯೋತಿ ಗಿರೀಶ ಬೀಳ್ಕೊಡುಗೆ

ಬಾದಾಮಿ, ಮೇ30: ಹಾಲಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಜ್ಯೋತಿ ಗಿರೀಶ ಇವರು ಜಮಖಂಡಿ ನಗರಸಭೆಗೆ ಪೌರಾಯುಕ್ತರಾಗಿ ವರ್ಗಾವಣೆಗೊಂಡ ಅವರನ್ನು ಪುರಸಭೆ ವತಿಯಿಂದ ಬೀಳ್ಕೊಡುಗೆ ಮಾಡಲಾಯಿತು. ಮತ್ತು ನೂತನ ಮುಖ್ಯಾಧಿಕಾರಿಗಳಾಗಿ ಕರ್ತವ್ಯಕ್ಕೆ ಹಾಜರಾದ ಗೋಪಾಲ ಕಾಶೆ ಇವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಎ.ಎಚ್.ಮುದ್ದೇಬಿಹಾಳ, ಸಿ.ಬಿ.ಮಲಕನ್ನವರ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.