ಜ್ಯೋತಿರ್ಗಮಯ ಸಂಸ್ಥೆಯಡಿಯಲ್ಲಿ ಗುಂಡಹಳ್ಳಿಯವರ ಸಾಮಾಜಿಕ ನಾಟಕಕೃತಿ ಬಿಡುಗಡೆ

ಶಹಾಪುರ:ಎ.22:ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ನಾಟಕ ಪ್ರಕಾರದ ಸಾಹಿತ್ಯಕ್ಕೆ ತನ್ನದೇಯಾದ ಮಹತ್ವ ಮತ್ತು ಹಳೆಯ ಪರಂಪರೆ ಇದೆ. ಅದನ್ನು ಮೈಗೂಡಿಸಿಗೊಂಡಿರುವ ಯುವ ಪ್ರತಿಭಾವಂತ ನಾಟಕಕಾರ ಮಾಳಪ್ಪ.ಎನ್. ಗುಂಡಳ್ಳಿಯವರ ನಾಟಕ ಸಾಹಿತ್ಯದ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದುಎಂದು ಹಿರಿಯ ಸಾಹಿತಿ ಡಾ.ಗಾಳೇಪ್ಪ ಪೂಜಾರಿಯವರು ಹೇಳಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ಜ್ಯೋತಿರ್ಗಮಯ ಸೇವಾ ಸಂಸ್ಥೆ (ರಿ) ದೋರನಹಳ್ಳಿ ಇವರ ಅಡಿಯಲ್ಲಿ ನಡೆದ ಮಾಳಪ್ಪ.ಎನ್.ಗುಂಡಳ್ಳಿಯವರ ಸ್ವರಚಿತ”ತಂಗಿಯ ಶೀಲಹರಣ ಅಣ್ಣನ ಮಾನಹರಣ ಪ್ರೇಯಸಿ ಕಟ್ಟಿದರಕ್ಷಾ ಬಂಧನ ಇವರ ಎರಡು ಸಾಮಾಜಿಕ ನಾಟಕಗಳ ಕಲಾ ಕೃತಿಗಳ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ನಾಟಕ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ನಾಟಕ ಸಾಹಿತ್ಯದ ಬರಹಕ್ಕೆ ಸಾಹಿತ್ಯಕ್ಕಿಂತ ಹೆಚ್ಚು ಕಾಲ್ಪನಿಕ ಶಕ್ತಿ ಮತ್ತು ಪ್ರತಿಭೆ ಬೇಕಾಗುತ್ತದೆ. ನಾಟಕಕಾರತನ್ನ ವರ್ತಮಾನದ ಚರಿತ್ರೆಯನ್ನೆ ನಾಟಕದಲ್ಲಿ ಹಿಡಿದಿಟ್ಟುಕೊಂಡಿರುತ್ತಾನೆ. ಅಲ್ಲಿ ನವರಸಗಳು ಕೂಡಾ ಸಂಯೋಜನೆಗೊಂಡಿರುತ್ತದೆ. ನಾಟಕಗಳ ಹಿಂದೆ ಆರ್ಥಿಕ ಚಟುವಟಿಕೆ ಇದೆ. ಕಾರ್ಮಿಕನಿರ ಕಲಾವಿದನವರೆಗೂ ಅನೇಕ ಜನರಿಗೆ ಹೊಟ್ಟೆತುಂಬಿಸುವಂತ ಕೆಲಸ ನಡೆಯುತ್ತಿದೆ. ನಾಟಕದ ಮೇಲೆ ಅವಲಂಬನೆ ಮಾಡಿ ಬದುಕುವ ಅನೇಕರು ನಮ್ಮ ಭಾಗದಲ್ಲಿದ್ದಾರೆ. ಇಂದಿನ ಸಿನಿಮಾ,ಧಾರವಾಹಿ ಮತ್ತಿತರ ಕಲಾ ಪ್ರಕಾರಗಳಿಗೆ ನಾಟಕಗಳು ಮೂಲಬೇರಾಗಿದೆಎಂದರು.
ಸಾಹಿತಿ ಡಾ.ಮರೆಯಪ್ಪ ನಾಟೇಕಾರ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ನಾಟಕ ಪ್ರದರ್ಶನಗಳಿರಲಿ ಅಲ್ಲಿ ಮಾಗುಂಡಳ್ಳಿಯವರು ಹಾಜರಿ ಇರುತ್ತಾರೆ. ಹೀಗೆ ನೂರಾರು ನಾಟಕಗಳು ನೋಡಿದ ಶ್ರೇಯಸ್ಸು ಇವರಗಿದೆ.
ಇಂತಹಅನುಭವದಿಂದಲೇಇವರು ಸಾಮಾಜಿಕ ನಾಟಕರಚನೆಯಲ್ಲಿತೊಡಗಿಅದರಲ್ಲಿಯಶಸ್ಸುಕಂಡಿದ್ದಾರೆ.ಇವರ ರಚಿಸಿದ ಎರಡು ನಾಟಕ ಕೃತಿಗಳ “ತಂಗಿಯ ಶೀಲಹರಣಅಣ್ಣನ ಮಾನಹರಣ”ಅರ್ಥಾತ್ ಸೇಡಿಗಾಗಿ ಸಿಡಿದೆದ್ದ ಸಹೋದರರು ಮತ್ತು”ಪ್ರೇಯಸಿ ಕಟ್ಟಿದರಕ್ಷಾ ಬಂಧನ”ಅರ್ಥಾತ್‍ಯಾರ ಹೂವು ಯಾರ ಮುಡಿಗೆ? ಇವು ಕೈಬರಹದಲ್ಲೆಎರಡೆರಡು ಪ್ರಯೋಗಗಳಾಗಿ ಜನ ಮೆಚ್ಚುಗೆಗೆ ಪಾತ್ರವಾಗಿವೆಎಂದು ಹೇಳಲು ಹೆಮ್ಮೆಯಾಗುತ್ತದೆ ಅನಿಸುತ್ತಿದೆ ಎಂದು ಅವರು ಹರ್ಷಿಸಿದರು.

ಸಾಧಕರಿಗೆ ವಿಶೇಷಗೌರವ ಸತ್ಕಾರ :
ಪೆÇಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದಕ ಪಡೆದಗಣೇಶ ಬಡಿಗೇರ, ಇಂಗ್ಲಿಷ್ ವಿಭಾಗದಲ್ಲಿ ಪಿ.ಎಚ್.ಡಿ.ಪದವಿ ಪಡೆದ ಡಾ.ಗುತ್ತಪ್ಪ ಬಡಿಗೇರ, ರಂಗಭೂಮಿಕ್ಷೇತ್ರದಲ್ಲಿ ಸೇವೆ ಮಾಡಿದ ಮಹಾಂತಯ್ಯ ಸ್ವಾಮಿ ಹಿರೇಮಠ, ದೇವಿಂದ್ರಪ್ಪ ಭಾವೂರು, ದಾವುಲ್ ಸಾಬ್ ನದಾಪ್, ಮರೆಪ್ಪ ನಾಟೇಕಾರ, ಮಲ್ಲಿಕಾರ್ಜುನ ಮೇಟಿ, ಸಿನಿಮಾ ಕ್ಷೇತ್ರದಲ್ಲಿ ಗೌಡಪ್ಪಗೌಡ ಹುಲಕಲ್, ಶಿಕ್ಷಣ ಕ್ಷೇತ್ರದಲ್ಲಿ ಮಹಾದೇವಿ ಶಹಾಪುರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪೂಜ್ಯ ಶರಣು.ಬಿ.ಗದ್ದುಗೆ, ಮರಿಗೌಡ ಪಾಟೀಲ್ ಹುಲ್ಕಲ್, ಗೋವಿಂದರಾಜ ಆಲ್ದಾಳ, ರಾಘವೇಂದ್ರ ಹಾರಣಗೇರಾ, ದೇವಿಂದ್ರಪ್ಪ ಮುನಮುಟಗಿ, ರವೀಂದ್ರನಾಥ್ ಹೊಸಮನಿ, ಭಾಗ್ಯದೊರೆ, ಚಂದ್ರಾಯಗೌಡಪ್ಪನವರ್, ಅಶೋಕ್ ಸರ್ಕಿಲ್, ಶಿವರಾಜ್ ಯಾದಗಿರಿ, ಸೋಮಸಿಂಗ ದಾವೊಜಿ ಚವ್ಹಾಣ, ದಾವುದಸಾಬ್‍ಖಾದ್ರಿ, ನರಸಪ್ಪ ದಳಪತಿ, ಗುರುಪಾದಯ್ಯಸ್ವಾಮಿ ಹಿರೇಮಠ, ಮರಲಿಂಗಪ್ಪ,
ಸೈಫಾನ್ ಕೆಂಭಾವಿ, ರಾಜುಗಣೇರ, ಸುರೇಶ ತಡಿಬಿಡಿ, ಶಿವಲಿಂಗಣ್ಣ ಸಾಹು ಹಾಗೂ ಜ್ಯೋತಿರ್ಗಮಯ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ ಪತ್ತಾರ ಮುಂತಾದವರುಇದ್ದರು.
ಬೂದಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ, ಗಣೇಶ್ ಪತ್ತಾರ, ಡಾ.ನಾಗರಾಜ, ಸಂಜೀವಕುಮಾರ ಬೊಮ್ಮಣಿ, ಮಲ್ಲಿಕಾರ್ಜುನ್ ಶಹಪುರ, ಕವಿತಾ ಪತ್ತಾರ ನೀಲಪ್ಪ ಚೌದರಿ, ಬಸವರಾಜ ಹೈಯಾಳ, ಶ್ರೀನಿವಾಸಶೆಟ್ಟಿ, ಸ್ವಾತಿ ಭಕ್ತಪ್ರಹ್ಲಾದ ಮುಂತಾದ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮ ಉಣಬಡಿಸಿದರು. ಸಾಂಸ್ಕೃತಿಕ ಸಂಘಟಕ ಮಹೇಶ ಪತ್ತಾರ ದೋರನಹಳ್ಳಿಯವರು ನಿರೂಪಿಸಿದರು, ಶ್ವೇತಾ ಹುಲಕಲ್ ವಂದಿಸಿದರು.