ಜ್ಯೋತಿಗೆ ಜಾತಿ-ಧರ್ಮ ಇಲ್ಲ, ಎಲ್ಲರಿರೂ ಬೆಳಕು ನೀಡುತ್ತಿದೆ

ಕುರುಗೋಡು, ಜ.02: ಜ್ಯೋತಿಗೆ ಯಾವುದೇ ಜಾತಿ-ಧರ್ಮ ಇಲ್ಲ. ಅದು ಭೂಮಂಡಲದಲ್ಲಿರುವ ಸಕಲ ಜಲಾಚರ ವಸ್ತು, ಜೀವ, ಪ್ರಾಣಿಗಳಿಗೆ ಸಮಾನವಾಗಿ ಬೆಳಕು ನೀಡುತ್ತಿದೆ ಎಂದು ಜಗದ್ಗುರು ಡಾ.ಸಂಗನಬಸವಮಹಾಸ್ವಾಮಿಗಳು ಅಭಿಮತವ್ಯಕ್ತಪಡಿಸಿದರು.
ಅವರು ಗುರುವಾರ ರಾತ್ರಿ ಪಟ್ಟಣದ ಕೊಟ್ಟೂರುಸ್ವಾಮಿಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕಮಂಗಲೋತ್ಸವ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಗರಿಕರು ಸಹ ಜ್ಯೋತಿಯಂತೆ ಎಲ್ಲಾ ಸಮಾಜದ ಬಂದು-ಭಾಂದವರನ್ನು ಪ್ರೀತಿ-ವಿಶ್ವಾಸದಿಂದ ಕಂಡು, ಸಮಾನವಾಗಿ ಸಹೋದರರಂತೆ ಬಾಳಬೇಕೆಂದು ನೆರೆದ ಭಕ್ತರಿಗೆ ಸಲಹೆ ನೀಡಿದರು. ಕೊಟ್ಟೂರುಸ್ವಾಮಿಗಳ ಮಠ ಭಕ್ತರ ಮಠ. ಮಠದ ಬೆಳೆವಣಿಗೆಗೆ ಎಲ್ಲಾ ಸಮಾಜದ ಬಂದುಗಳು ಸಹಕಾರನೀಡಬೇಕೆಂದು ನುಡಿದರು. ಕೊರೋನಾ ಬಗ್ಗೆ ಯಾರಿಗೂ ಭಯಬೇಡ, ಎಲ್ಲರೂ ಎಚ್ಚರದಿಂದ ಇರಬೇಕು. ಭಾರತೀಯ ಸಂಸ್ಕುತಿಯಲ್ಲಿ ಗುರುಪರಂಪರೆ ದೊಡ್ಡದು, ಎಲ್ಲರೂ ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಆ ಕೊಟ್ಟೂರೇಶನ ಕ್ರುಪೆ ಎಲ್ಲರ ಮೇಲಿರಲಿ ಎಂದು ಹಾರೈಸಿದರು.
ವಿದಾನಪರಿಷತ್ ಸದಸ್ಯ ಅಲ್ಲಂವೀರಭದ್ರಪ್ಪ, ಕೆಸಿ.ಕೊಂಡಯ್ಯ, ಕಂಪ್ಲಿಕ್ಷೇತ್ರದ ಶಾಸಕ ಜೆಎನ್.ಗಣೇಶ್ ರವರು ಮಾತನಾಡಿ, ಮಠದ ಅಭಿವ್ರುದ್ದಿಗೆ ಎಲ್ಲರೂ ಸಹಕಾರನೀಡಿರಿ ಎಂದು ನುಡಿದರು.
ಬಳ್ಳಾರಿಯ ಶ್ರೀಕಲ್ಯಾಣಮಹಾಸ್ವಾಮಿ, ಮರಿಮಹಾಂತಸ್ವಾಮಿ, ಮುಪ್ಪಿನ ಬಸವಲಿಂಗದೇವರು, ಕೊಟ್ಟೂರುದೇಶಿಕರು, ಕೆಎಂ.ಪೂರ್ಣಿಮಾ, ಕೆಎಂ.ಉಮಾಪತಿಗೌಡ, ಶಿವರುದ್ರಯ್ಯಸ್ವಾಮಿ, ಎಸ್‍ಟಿಎಂ. ಸದಾಶಿವಯ್ಯಸ್ವಾಮಿ, ಚೇಗೂರುಷಣ್ಮುಖಪ್ಪ, ಎ.ಬಸವರಾಜ, ಹೊನ್ನೂರುಸಾಬ್,ತಂಗಿಮಲ್ಲೇಶಪ್ಪ, ಸಿಂದಿಗಿಗವಿಸಿದ್ದಪ್ಪ, ಎರ್ರೆಪ್ಪಗೌಡ, ಚಾನಾಳುಅಂಬರೇಷ್, ನಾಗಪ್ಪ, ಶೀನಪ್ಪ, ಮಠದವ್ಯವಸ್ಥಾಪಕ ಬಸವರಾಜ, ಜಂಭಯ್ಯ, ವಿಜಯಕುಮಾರಶಾಸ್ತಿ, ಶ್ರೀನಿವಾಸರೆಡ್ಡಿ, ಶರಣಪ್ಪಮಾಸ್ತರ್, ಕುಬೇರಪ್ಪ, ಈಶ್ವರಗೌಡ ಸೇರಿದಂತೆ ಇತರೆ ಸಹಸ್ರಾರು ಭಕ್ತರು ಭಾಗವಹಿಸಿ, ಪ್ರಸಾದಸ್ವೀಕರಿಸಿದರು. ಪ್ರಾರಂಭದಲ್ಲಿ ಶ್ರೀಕೊಟ್ಟೂರುಮಠದ ಆವರಣದಲ್ಲಿ ಮಹಿಳೆಯು ಸಾಲು-ಸಾಲಾಗಿ ದೀಪಗಳನ್ನು ಹಚ್ಚಿಕಾರ್ತಿಕೋತ್ಸವವನ್ನು ಆಚರಿಸಿದರು.