ಜ್ಯೂನಿಯರ್ ವಿಷ್ಣುವರ್ಧನ್‍ರವರಿಂದ ಬೈಕ್ ಜಾಥಾದ ಮೂಲಕ ಕರೋನಾ ಜಾಗೃತಿ

ಸಿರುಗುಪ್ಪ ನ 03 : ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲೀಮಠ ಎನ್ನುವರು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯು ಬೆಂಗಳೂರಿನಿಂದ ಜೆವರ್ಗಿ ತಾಲೂಕಿನ ಗಡಿಭಾಗವದವರೆಗೂ ತಮ್ಮ ದ್ವಿಚಕ್ರವಾಹನವನ್ನು ಕನ್ನಡ ರಥದಂತೆ ಸಿಂಗರಿಸಿ ವಿವಿಧ ಕನ್ನಡದ ವಾಕ್ಯಗಳನ್ನು ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಅವರ ಭಾವಚಿತ್ರದಿಂದ ಸಿಂಗರಿಸಿಕೊಂಡು ಕರೋನಾ ಜಾಗೃತಿ ಅಭಿಯಾನವನ್ನು ರಾಜ್ಯದ ಉದ್ದಗಲಕ್ಕೂ ಸಂಚರಿಸುವಾಗ ಸಿರುಗುಪ್ಪ ನಗರದಲ್ಲಿ ಜಾಗೃತಿ ಮೂಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದಿಂದ ಪ್ರಾರಂಭಿಸಿ ರಾಜ್ಯಧಾನಿ ಬೆಂಗಳೂರನಿಂದ ತುಮಕೂರು ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ಹರಪನಹಳ್ಳಿ ತಾಲೂಕು, ಗದಗ ಜಿಲ್ಲೆ, ಗಜೇಂದ್ರಗಡ ತಾಲೂಕು, ಬಿಜಾಪುರ ಜಿಲ್ಲೆಯ ಮುದ್ದೆಬಿಹಾಳ್, ಸಿಂದಗಿ ಮಾರ್ಗವಾಗಿ ಜೆವರ್ಗಿ ತಲುಪಿ ನಂತರ ಜೆವರ್ಗಿನಿಂದ ಶಹಪುರ, ಸುರಪುರ, ಲಿಂಗಸೂಗೂರು, ಸಿಂಧನೂರು ಮಾರ್ಗವಾಗಿ ಸಿರುಗುಪ್ಪ ನಗರಕ್ಕೆ ಆಗಮಿಸಿ ಕನ್ನಡ ಉಳಿಸಿ ಕನ್ನಡ ಬೆಳಿಸಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ, ಸಂಚಾರಿ ನಿಯಮವನ್ನು ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ, ಸಾಮಾಜಿಕ ಅಂತರವನ್ನು ಪಾಲಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ, ಇದೆ ರೀತಿಯಲ್ಲಿ ಮುಂದಿನ ಗ್ರಾಮ, ಪಟ್ಟಣ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಜಾಗೃತಿ ಮೂಡಿಸುತ್ತಾ ರಾಜಧಾನಿ ಬೆಂಗಳೂರಿಗೆ ತಲುಪುತ್ತೇನೆ.
ಸಂಚಾರ ಮಾಡುವ ಮಾರ್ಗಮಧ್ಯದಲ್ಲಿ ಅಭಿಮಾನಿಗಳು ನಮ್ಮೊಂದಿಗೆ ಸೆಲ್ಫಿ ಪೋಟೋಗಳನ್ನು ತೆಗೆಸಿಕೊಂಡು ಸಂತೋಷವನ್ನು ಹಂಚಿಕೊಂಡರು. ಇನ್ನೂ ಕೆಲವು ಗ್ರಾಮಗಳಲ್ಲಿ ಕನ್ನಡ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಿ ನಮ್ಮನ್ನು ಸಂತೋಷ ಪಡಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.