ಜ್ಯೂನಿಯರ್‌ ರೆಡ್‌ ಕ್ರಾಸ್‌ ಶಿಬಿರ

ಕಲಬುರಗಿ: ಆ. 27 : ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಮುಖ್ಯ ಉದೇಶ ಮಕ್ಕಳಲ್ಲಿ ಸೇವಾ ಮನೋಭಾವನೆ ಬೇಳಿಸುವದಾಗಿದ್ದು, ಕಿರಿಯ ರೆಡ್‌ ಕ್ರಾಸಿನ ಈ ಕಲಬುರಗಿ ವಿಭಾಗ ಮಟ್ಟದ ತರಬೇತಿ ಶಿಬಿರ ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಚೆರಮೆನ್‌ ಶ್ರೀ ವಿಜಯಕುಮಾರ ಪಾಟೀಲ್‌ ಶಾವಂತಗೇರಾ ನುಡಿದರು.
ಪಾಟೀಲ್‌ರು ಆಗಸ್ಟ್ 25 ರಿಂದ 27 ರ ವರೆಗೆ ಕಲಬುರಗಿ ನಗರದ ಶ್ರೀ ಗುರು ವಿದ್ಯಾ ಪೀಠದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಜ್ಯೂನಿಯರ್‌ ರೆಡ್‌ ಕ್ರಾಸ್‌ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಗುರು ವಿದ್ಯಾ ಪೀಠದ ಮುಖ್ಯಸ್ಥೆ ಶ್ರೀಮತಿ ಪೂಜಾ ಬಸವರಾಜ ದಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ವಿಜಯಕುಮಾರ ಪಾಟೀಲರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಮತ್ತು ಬಹುಮಾನಗಳನ್ನು ವಿತರಿಸಿದರು. ಶಿಕ್ಷಕರು ರವೀಂದ್ರ (ಬೀದರ), ಮಲ್ಲಿಕಾರ್ಜುನ (ಕೊಪ್ಪಳ) ಮತ್ತು ವಿದ್ಯಾರ್ಥಿಗಳು ಕುಮಾರಿ ಗೌರಿ ಹಾಗೂ ಕುಮಾರ ಸೇವಾಲಾಲ ಅವರು “ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ನಮಗೆಲ್ಲಾ ಉಪಯುಕ್ತವಾಗಿದೆ” ಎಂದು ನುಡಿದರು. ಕಲಬುರಗಿ ಶಾಖೆ ನಮಗೆ ಎಲ್ಲಾ ಸೌಕರ್ಯಾಗಳನ್ನು ಅಚ್ಚು ಕಟ್ಟಾಗಿ ಒದಗಿಸಿದ್ದು ಅವರೆಲ್ಲರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು. ಕಲಬುರಗಿ ರೆಡ್‌ ಕ್ರಾಸ್‌ ಜಿಲ್ಲಾ ಶಾಖೆಯ ಸಭಾಪತಿ ಅಪ್ಪಾರಾವ ಅಕ್ಕೋಣೆ ಅವರು ಸ್ವಾಗತ ಕೋರಿದರು. ಶ್ರೀ ಅರುಣಕುಮಾರ ಲೋಯಾ, ಬೀದರಿನ ವೈಜನಾಥ ಕಮಟಾಣೆ ಮಾತನಾಡಿದರು. ಧನರಾಜ ಭಾಸಗಿ ಒಂದಿಸಿದರು. ಶಿಕ್ಷಕ ದೇವೇಂದ್ರಪ್ಪನವರು ಸ್ವರಚಿತ ರೆಡ್‌ ಕ್ರಾಸ್‌ ಕುರಿತಾದ ಕವನ ಓದಿದ್ದರು. ಆಡಳಿತ ಮಂಡಳಿ ಸದಸ್ಯರಾದ ಡಾ. ಎಸ್.ಎಸ್. ಹತ್ತಿ, ನಾಗಣ್ಣ ಗಣಜಲಖೇಡ ಹಾಜರಿದ್ದರು.
ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಾರ್ಯಕ್ರಮವನ್ನು ನಿರುಪಿಸಿದರು. ಈ ಮೂರು ದಿನಗಳ ಶಿಬಿರದಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಮತ್ತು ಬೀದರ ಜಿಲ್ಲೆಗಳಿಂದ ಒಟ್ಟು 105 ವಿದಾರ್ಥಿಗಳು ಮತ್ತು 10 ಜನ ಶಿಕ್ಷಕರು ಭಾಗವಹಿಸಿದರು.