ಬೀದರ್: ಸೆ.28:ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮದಲ್ಲಿ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಗ್ರಾಮ ಶಾಖೆಯನ್ನು ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಉದ್ಘಾಟಿಸಿದರು.
ಯುವಕರು ಜನನಿ ಹಾಗೂ ಜನ್ಮ ಭೂಮಿ ಸೇವೆಗೆ ಸದಾ ಸಿದ್ಧರಿರಬೇಕು. ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.
ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಅವರು, ಸಮಿತಿಯು ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ದೇಶದಾದ್ಯಂತ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿದೆ. ಯುವಕರಲ್ಲಿ ದೇಶ ಪ್ರೇಮ, ದೇಶಾಭಿಮಾನ ಬೆಳೆಸುತ್ತಿದೆ ಎಂದು ಹೇಳಿದರು.
ಗ್ರಾಮ ಘಟಕದ ಪದಾಧಿಕಾರಿಗಳು:
ಶರಣು ಮಾನಕಾರ (ಗೌರವಾಧ್ಯಕ್ಷ), ನಾಗೇಶ ಬಿಲಗುಂದೆ (ಅಧ್ಯಕ್ಷ), ಶಿವಕುಮಾರ ಬಿರಾದಾರ (ಉಪಾಧ್ಯಕ್ಷ), ಉಮೇಶ ಹೊಸದೊಡ್ಡಿ (ಖಜಾಂಚಿ), ಸಚಿನ್, ಪ್ರಶಾಂತ, ಆಕಾಶ, ಸೋಮನಾಥ, ರಬ್ಬಾನಿ, ಕಿರಣ, ವಿಜಯಕುಮಾರ, ಅಶೋಕ (ಕಾರ್ಯಕಾರಿಣಿ ಸದಸ್ಯರು).
ರಥದಲ್ಲಿ ಮೆರವಣಿಗೆ: ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ಹವಾ ಮಲ್ಲಿನಾಥ ಮಹಾರಾಜರ ಮೆರವಣಿಗೆ ನಡೆಯಿತು. ಬ್ಯಾಂಡ್ ಬಾಜಾ, ಕೋಲಾಟ, ದೇಶ ಭಕ್ತಿ ಗೀತೆ, ಯುವಕರ ನರ್ತನ, ಪಟಾಕಿಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು.
ಗ್ರಾಮಸ್ಥರು ಕಲ್ಲು ಸಕ್ಕರೆಯಿಂದ ಹವಾ ಮಲ್ಲಿನಾಥ ಮಹಾರಾಜರ ತುಲಾಭಾರ ಮಾಡಿದರು. ಗುರುವಿಗೆ ಭಕ್ತಿ ಸಮರ್ಪಿಸಿದರು.
ಜ್ಯಾಂತಿ ಮಠದ ಪರಮೇಶ್ವರ ಸ್ವಾಮೀಜಿ, ಗ್ರಾಮ, ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು, ಯುವಕರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.