ಜ್ಞಾನ ಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗೆ 31ನೇ ರ್ಯಾಂಕ್: ಜಿಲ್ಲಾ ಉಪನಿರ್ದೇಶಕರಿಂದ ಸನ್ಮಾನ

ಬೀದರ:ಮೇ.3:ಇತ್ತೀಚೆಗೆ ಪ್ರಕಟಗೊಂಡ ಎಇಇ ಒಚಿiಟಿs – 2023 ರ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರಿಯೋಗ್ ಧೋಂಡಿಬಾ ಅಖಿಲ ಭಾರತ ಮಟ್ಟದಲ್ಲಿ 31ನೇ ???ಯಾಂಕ್ ಗಳಿಸುವುದರೊಂದಿಗೆ ಕಾಲೇಜಿಗೆ ಮತ್ತು ಬೀದರ್ ಜಿಲ್ಲೆಗೆ ಗೌರವ ತಂದು ಕೊಟ್ಟಿದ್ದಾನೆ. ಈ ಸಾಧನೆ ಮೆಚ್ಚಿ ಶ್ರೀ ಚಂದ್ರಕಾಂತ್ ಶಾಬದ್ಕರ್, ಜಿಲ್ಲಾ ಉಪನಿರ್ದಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೀದರ್ ಇವರು ಶ್ರಿಯೋಗ್ ಧೋಂಡಿಬಾ ರನ್ನು ಸನ್ಮಾನಿಸಿದರು. ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜು ಉತ್ತಮ ಫಲಿತಾಂಶ ನೀಡುತ್ತಿದ್ದು, ಎಲ್ಲಾ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಪನಿರ್ದಶಕರು ನುಡಿದರು. ಈ ಸಂದರ್ಭದಲ್ಲಿ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಸುಜಾತಾ ಬೊಮ್ಮರೆಡ್ಡಿ ಹಾಗೂ ಶ್ರೀಕಾಂತ್ ರೆಡ್ಡಿ ಉಸ್ಥಿತರಿದ್ದರು.

ಈ ಸಾಧನೆಗೆ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್, ಜ್ಞಾನ ಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಕ್ಕ ಹಾಗೂ ಜ್ಞಾನ ಸುಧಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಅದ್ಭುತ ಫಲಿತಾಂಶದಿಂದ ಶ್ರಿಯೋಗ್ ಧೋಂಡಿಬಾ ಭಾರತದ ಯಾವುದೇ 5 ಅಗ್ರ ಶ್ರೇಣಿಯ ಎ???ಟಿ (ಓIಖಿ) ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿದ್ದಾನೆ. ಶ್ರಿಯೋಗ್ ಜೊತೆಗೆ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು ಭಾರತದ ಪ್ರತಿಷ್ಠಿತ ಎ???ಟಿ (ಓIಖಿ) ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.