ಜ್ಞಾನ ಸಂಪಾದನೆಗೆ ಪುಸಕ್ತ ಓದು

ಪುಸ್ತಕ ಓದುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಬಹಳ ಮುಖ್ಯ ಹವ್ಯಾಸವಾಗಿರುವ ಪುಸ್ತಕ ಓದಿನ ಬಗ್ಗೆ ಇವತ್ತು ಒಂದಷ್ಟು ತಿಳಿಸಬೇಕೆನಿಸುತ್ತಿದೆ. ಹುಟ್ಟಿದಂದಿನಿಂದಲೂ ಸಾಯುವವರೆಗೂ ಒಬ್ಬ ಮನುಷ್ಯ ದಿನವೂ ಕಲಿಯುತ್ತಲೇ ಇರುತ್ತಾನೆ. ಪುಸಕ್ತ ಗಳನ್ನ ಓದುವುದು ನಮ್ಮ ಕಲಿಕೆಗೆ ಪ್ರಮುಖ ಮಾರ್ಗಗಳಲ್ಲಿ ಒಂದು. ನಾವು ಪುಸ್ತಕ ಓದುವಾಗ ಬಹಳ ಸಕ್ರಿಯವಾಗಿರುತ್ತೇವೆ. ಜ್ಞಾನ ಭಂಡಾರ ಸ್ವೀಕರಿಸಿದಾಗ ನಮ್ಮ ಕಲಿಕೆಯ ವೇಗ ಹೆಚ್ಚಾಗುತ್ತದೆ. ಇತಿಹಾಸದ ಪುಸ್ತಕ ಓದಿ ಆ ಮೂಲಕ ನಮ್ಮ ಭವಿಷ್ಯವೇನಿರಬಹುದೆಂದು ಅಂದಾಜು ಮಾಡಿಕೊಳ್ಳಬಹುದು. ಭವಿಷ್ಯದ ದಿನಗಳ ಬಗ್ಗೆ ಬೆಳಕು ಚೆಲ್ಲುವ ಪುಸ್ತಕಗಳು ನಮಗೆ ಮುಂದಿನ ದಾರಿಗೆ ಬೆಳಕು ಚೆಲ್ಲಬಹುದು. ಹಾಗಾಗಿ ಸೆ 6 ರಂದು ಪುಸ್ತಕ ಓದುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪುಸ್ತಕ ಓದುವುದರಿಂದ ಪಡೆಯುವ ಜ್ಞಾನ ಭಂಡಾರವು ಅವರ ಕಲಿಕೆಗೆ ಪುಷ್ಟಿ ನೀಡಿರುತ್ತದೆ. ನ ಸಂಪಾದನೆಗೆ ಪುಸ್ತಕ ಓದುವುದೇ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ನಮಗಿಂತ ಶತಮಾನಗಳ ಮುಂಚೆ ಇದ್ದ ಜನರ ಜ್ಞಾನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳುವ ಅವಕಾಶ ಪುಸ್ತಕ ನಮಗೆ ಒದಗಿಸುತ್ತದೆ. ಒಂದು ಒಳ್ಳೆಯ ಪುಸ್ತಕವು ಇಡೀ ನಾಗರಿಕತೆಯನ್ನು ಯಥಾವತ್ತಾಗಿ ನಮಗೆ ತೆರೆದಿಡಬಹುದು. ನಾವು ಅಲೆಕ್ಸಾಂಡರ್ ದೊರೆಯ ಸಾಮ್ರಾಜ್ಯ ವಿಸ್ತರಣೆ, ಐರೋಪ್ಯ ಖಂಡದ ಘನಘೋರ ಯುದ್ಧಗಳು, ಪುರಾತನ ಭಾರತದ ಗತವೈಭವ, ನಮ್ಮ ಆಳರಸರ ಆಡಳಿತ ಚಾತುರ್ಯ ಇತ್ಯಾದಿಗಳನ್ನ ಪುಸ್ತಕ ಓದಿಯೇ ತಿಳಿದುಕೊಳ್ಳಬಹುದು.

ಪುಸ್ತಕಗಳು ಜ್ಞಾನ ದೀವಿಗೆಯಿದ್ದಂತೆ. ಅದನ್ನು ನಾವು ಹೆಚ್ಚು ಹೆಚ್ಚು ಓದಿದಷ್ಟು ನಮ್ಮ ಜ್ಞಾನ ವಿಸ್ತಾರಗೊಳ್ಳುತ್ತದೆ ಮತ್ತು ಅರಿವಿನ ವ್ಯಾಪ್ತಿ ಹೆಚ್ಚುತ್ತದೆ. ಪುಸ್ತಕದಿಂದ ಸಿಗುವ ಜ್ಞಾನಕ್ಕೆ ಯಾವುದೂ ಸಮಾನವಲ್ಲ. ಈಗ ಎಷ್ಟೇ ಆಧುನಿಕ ತಂತ್ರಜ್ಞಾನಗಳು ಬಂದಿದ್ದರೂ ಪುಸ್ತಕಗಳಿಗೆ ಇರುವ ಮಹತ್ವವೇನು ಕಡಿಮೆಯಾಗಿಲ್ಲ.

ಓದುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಪುಸ್ತಕಗಳಿಗೆ ಈ ಮೊದಲಿನಂತೆಯೇ ಬೇಡಿಕೆಗಳಿವೆ. ಉತ್ತಮ ಲೇಖಕರ ಪುಸ್ತಕಗಳು ಬಂದರೆ ಜನರು ಈಗಲೂ ಕೊಂಡು ಓದುತ್ತಾರೆ. ಅಲ್ಲದೆ ಒಂದು ಕಾಲಘಟ್ಟದ ಮಾಹಿತಿಗಳು ಮುಂದಿನ ಪೀಳಿಗೆಗೆ ಸಿಗುವಲ್ಲಿಯೂ ಈ ಪುಸ್ತಕಗಳ ಪಾತ್ರ ಮಹತ್ವದ್ದು. ಈ ಮೂಲಕ ನಾವು ಹಲವಾರು ವರ್ಷಗಳ ಕಾಲದ ವಿಷಯಗಳನ್ನು ಈಗಲೂ ತಿಳಿಯಲು ಸಾಧ್ಯವಾಗಿದೆ.

ನ್ಯಾಷನಲ್ ರೀಡ್ ಎ ಬುಕ್ ಡೇ ಯುಎಸ್ ನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದ್ದರೂ, ದಿನದ ಇತಿಹಾಸದ ಇತರ ವಿವರಗಳು ಅಸ್ಪಷ್ಟವಾಗಿವೆ. ಅಮೆರಿಕನ್ನರ ಪುಸ್ತಕಗಳ ಮೇಲಿನ ಪ್ರೀತಿ ಈ ದಿನ ಹುಟ್ಟಿಕೊಳ್ಳುವಂತೆ ಮಾಡಿದೆ. ಳೆದ 12 ತಿಂಗಳಲ್ಲಿ 74% ಅಮೆರಿಕನ್ನರು ಕನಿಷ್ಠ ಒಂದು ಪುಸ್ತಕವನ್ನು ಓದಿದ್ದಾರೆ. ಸುಮಾರು 20% ಪುಸ್ತಕಗಳನ್ನು ಈಗ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬಳಸಲಾಗಿದೆ. ಒಟ್ಟಿನಲ್ಲಿ ಪುಸಕ್ತಗಳನ್ನು ಹೆಚ್ಚು ಓದುವಂತೆ ಮಾಡುವುದು ಉದ್ದೇಶವಾಗಿದೆ.

ಕಾಫಿ ಐಸ್‌ ಕ್ರೀಮ್‌ ಡೇ

ಐಸ್​ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ತಂಪನೆ, ಸಿಹಿಯಾದ ಐಸ್ ಕ್ರೀಮ್ ಎಂದು ಹೇಳಿದರೆ ಸಾಕು ಹಲವರ ಬಾಯಲ್ಲಿ ನೀರುತ್ತದೆ. ಅದರಲ್ಲೂ ಕಾಫಿ ಐಸ್‌ ಕ್ರೀಮ್‌ ಅಂದರೆ ಸವಿಯಲು ಏನೋ ಒಂದು ಖುಷಿ. ಇದು ಬೇರೆ ಎಲ್ಲಾ ಐಸ್‌ ಕ್ರೀಮ್‌ ಗಿಂತ ಭಿನ್ನ ರುಚಿ ಹೊಂದಿದೆ. ಕೆಫೀನ್ ಮತ್ತು ಐಸ್ ಕ್ರೀಮ್ ಪ್ರಿಯರಿಗಾಗಿ ಸೆ. 6 ರಂದು
ರಾಷ್ಟ್ರೀಯ ಕಾಫಿ ಐಸ್ ಕ್ರೀಮ್ ದಿನವನ್ನಾಗಿ ಆಚರಿಸುವುದು ರೂಡಿಯಲ್ಲಿದೆ.

ಕಾಫಿಯ ಚರಿತ್ರೆ 9 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಇತಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ, ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು. “ಕಾಫಿ” ಎಂಬ ಪದ ಇತಿಯೋಪಿಯದ “ಕಾಫ” ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ. ಕಾಫಿ 15 ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕ ಮತ್ತು ತಾರ್ಕಿ ಗಳನ್ನು ತಲುಪಿತು. 1475 ರಲ್ಲಿ ಈಸ್ತಾನ್ ಬುಲ್ ನಗರದಲ್ಲಿ ಮೊದಲ “ಕಾಫಿ ಹೋಟಲು” ಆರಂಭವಾಯಿತು.

ಇನ್ನು ರೋಮನ್ ಚಕ್ರವರ್ತಿ ನೀರೋನ ಕೋರಿಕೆಯ ಮೇರೆಗೆ ಮೊದಲ ರುಚಿಯ ಐಸ್ ಕ್ರೀಮ್ ಅನ್ನು ಕಂಡುಹಿಡಿಯಲಾಯಿತು. ಅವನ ಸೇವಕರು ಪರ್ವತಗಳಿಗೆ ಹೋಗಿ
ಜೇನುತುಪ್ಪ, ಬೀಜಗಳು ಮತ್ತು ಹಣ್ಣಿನ ಮೇಲೋಗರಗಳಿಂದ ರುಚಿಕರವಾದ ಸಿಹಿಭಕ್ಷ್ಯವನ್ನು ತಯಾರಿಸಲು ಹಿಮವನ್ನು ಸಂಗ್ರಹಿಸಿದರು. ಜೆಲಾಟೊದ ಆವಿಷ್ಕಾರವು ಹೆಚ್ಚಾಗಿ 16 ನೇ ಶತಮಾನದ ಫ್ಲಾರೆನ್ಸ್ ಮೂಲದ ಬರ್ನಾರ್ಡೊ ಬ್ಯುಂಟಲೆಂಟಿಗೆ ಸಲ್ಲುತ್ತದೆ, 1770 ರ ಹೊತ್ತಿಗೆ, ಜಿಯೊವಾನಿ ಬಾಸಿಯೊಲೊ ನ್ಯೂಯಾರ್ಕ್‌ನಲ್ಲಿ ಅರೆ ಹೆಪ್ಪುಗಟ್ಟಿದ ಕಾಫಿ ಮತ್ತು ಜಿನೋವಾದಲ್ಲಿ ಜನಪ್ರಿಯವಾಗಿರುವ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿ ಯಶಸ್ವಿಯಾದರು. ಅಂತಿಮವಾಗಿ, 1869 ರಲ್ಲಿ, ಕಾಫಿ ಐಸ್ ಕ್ರೀಮ್ ಅನ್ನು ಮೊದಲು ಪಾರ್ಫೈಟ್ ನಲ್ಲಿ ಬಳಸಲಾಯಿತು ಮತ್ತು ನಂತರ 1919 ರಲ್ಲಿ ಮತ್ತೆ ಅಡುಗೆ ಪುಸ್ತಕದಲ್ಲಿ ಕಾಣಿಸಿಕೊಂಡತ್ತು. ಇಂದು ಎಲ್ಲೆಡೆ ಕಾಫಿ ಐಸ್‌ ಕ್ರೀಮ್‌ ಬಹಳ ಜನಪ್ರಿಯವಾಗಿದೆ.

ಪುಸ್ತಕ ಓದುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಬಹಳ ಮುಖ್ಯ ಹವ್ಯಾಸವಾಗಿರುವ ಪುಸ್ತಕ ಓದಿನ ಬಗ್ಗೆ ಇವತ್ತು ಒಂದಷ್ಟು ತಿಳಿಸಬೇಕೆನಿಸುತ್ತಿದೆ. ಹುಟ್ಟಿದಂದಿನಿಂದಲೂ ಸಾಯುವವರೆಗೂ ಒಬ್ಬ ಮನುಷ್ಯ ದಿನವೂ ಕಲಿಯುತ್ತಲೇ ಇರುತ್ತಾನೆ. ಪುಸಕ್ತ ಗಳನ್ನ ಓದುವುದು ನಮ್ಮ ಕಲಿಕೆಗೆ ಪ್ರಮುಖ ಮಾರ್ಗಗಳಲ್ಲಿ ಒಂದು. ನಾವು ಪುಸ್ತಕ ಓದುವಾಗ ಬಹಳ ಸಕ್ರಿಯವಾಗಿರುತ್ತೇವೆ. ಜ್ಞಾನ ಭಂಡಾರ ಸ್ವೀಕರಿಸಿದಾಗ ನಮ್ಮ ಕಲಿಕೆಯ ವೇಗ ಹೆಚ್ಚಾಗುತ್ತದೆ. ಇತಿಹಾಸದ ಪುಸ್ತಕ ಓದಿ ಆ ಮೂಲಕ ನಮ್ಮ ಭವಿಷ್ಯವೇನಿರಬಹುದೆಂದು ಅಂದಾಜು ಮಾಡಿಕೊಳ್ಳಬಹುದು. ಭವಿಷ್ಯದ ದಿನಗಳ ಬಗ್ಗೆ ಬೆಳಕು ಚೆಲ್ಲುವ ಪುಸ್ತಕಗಳು ನಮಗೆ ಮುಂದಿನ ದಾರಿಗೆ ಬೆಳಕು ಚೆಲ್ಲಬಹುದು. ಹಾಗಾಗಿ ಸೆ 6 ರಂದು ಪುಸ್ತಕ ಓದುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪುಸ್ತಕ ಓದುವುದರಿಂದ ಪಡೆಯುವ ಜ್ಞಾನ ಭಂಡಾರವು ಅವರ ಕಲಿಕೆಗೆ ಪುಷ್ಟಿ ನೀಡಿರುತ್ತದೆ. ನ ಸಂಪಾದನೆಗೆ ಪುಸ್ತಕ ಓದುವುದೇ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ನಮಗಿಂತ ಶತಮಾನಗಳ ಮುಂಚೆ ಇದ್ದ ಜನರ ಜ್ಞಾನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳುವ ಅವಕಾಶ ಪುಸ್ತಕ ನಮಗೆ ಒದಗಿಸುತ್ತದೆ. ಒಂದು ಒಳ್ಳೆಯ ಪುಸ್ತಕವು ಇಡೀ ನಾಗರಿಕತೆಯನ್ನು ಯಥಾವತ್ತಾಗಿ ನಮಗೆ ತೆರೆದಿಡಬಹುದು. ನಾವು ಅಲೆಕ್ಸಾಂಡರ್ ದೊರೆಯ ಸಾಮ್ರಾಜ್ಯ ವಿಸ್ತರಣೆ, ಐರೋಪ್ಯ ಖಂಡದ ಘನಘೋರ ಯುದ್ಧಗಳು, ಪುರಾತನ ಭಾರತದ ಗತವೈಭವ, ನಮ್ಮ ಆಳರಸರ ಆಡಳಿತ ಚಾತುರ್ಯ ಇತ್ಯಾದಿಗಳನ್ನ ಪುಸ್ತಕ ಓದಿಯೇ ತಿಳಿದುಕೊಳ್ಳಬಹುದು.

ಪುಸ್ತಕಗಳು ಜ್ಞಾನ ದೀವಿಗೆಯಿದ್ದಂತೆ. ಅದನ್ನು ನಾವು ಹೆಚ್ಚು ಹೆಚ್ಚು ಓದಿದಷ್ಟು ನಮ್ಮ ಜ್ಞಾನ ವಿಸ್ತಾರಗೊಳ್ಳುತ್ತದೆ ಮತ್ತು ಅರಿವಿನ ವ್ಯಾಪ್ತಿ ಹೆಚ್ಚುತ್ತದೆ. ಪುಸ್ತಕದಿಂದ ಸಿಗುವ ಜ್ಞಾನಕ್ಕೆ ಯಾವುದೂ ಸಮಾನವಲ್ಲ. ಈಗ ಎಷ್ಟೇ ಆಧುನಿಕ ತಂತ್ರಜ್ಞಾನಗಳು ಬಂದಿದ್ದರೂ ಪುಸ್ತಕಗಳಿಗೆ ಇರುವ ಮಹತ್ವವೇನು ಕಡಿಮೆಯಾಗಿಲ್ಲ.

ಓದುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಪುಸ್ತಕಗಳಿಗೆ ಈ ಮೊದಲಿನಂತೆಯೇ ಬೇಡಿಕೆಗಳಿವೆ. ಉತ್ತಮ ಲೇಖಕರ ಪುಸ್ತಕಗಳು ಬಂದರೆ ಜನರು ಈಗಲೂ ಕೊಂಡು ಓದುತ್ತಾರೆ. ಅಲ್ಲದೆ ಒಂದು ಕಾಲಘಟ್ಟದ ಮಾಹಿತಿಗಳು ಮುಂದಿನ ಪೀಳಿಗೆಗೆ ಸಿಗುವಲ್ಲಿಯೂ ಈ ಪುಸ್ತಕಗಳ ಪಾತ್ರ ಮಹತ್ವದ್ದು. ಈ ಮೂಲಕ ನಾವು ಹಲವಾರು ವರ್ಷಗಳ ಕಾಲದ ವಿಷಯಗಳನ್ನು ಈಗಲೂ ತಿಳಿಯಲು ಸಾಧ್ಯವಾಗಿದೆ.

ನ್ಯಾಷನಲ್ ರೀಡ್ ಎ ಬುಕ್ ಡೇ ಯುಎಸ್ ನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದ್ದರೂ, ದಿನದ ಇತಿಹಾಸದ ಇತರ ವಿವರಗಳು ಅಸ್ಪಷ್ಟವಾಗಿವೆ. ಅಮೆರಿಕನ್ನರ ಪುಸ್ತಕಗಳ ಮೇಲಿನ ಪ್ರೀತಿ ಈ ದಿನ ಹುಟ್ಟಿಕೊಳ್ಳುವಂತೆ ಮಾಡಿದೆ. ಳೆದ 12 ತಿಂಗಳಲ್ಲಿ 74% ಅಮೆರಿಕನ್ನರು ಕನಿಷ್ಠ ಒಂದು ಪುಸ್ತಕವನ್ನು ಓದಿದ್ದಾರೆ. ಸುಮಾರು 20% ಪುಸ್ತಕಗಳನ್ನು ಈಗ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬಳಸಲಾಗಿದೆ. ಒಟ್ಟಿನಲ್ಲಿ ಪುಸಕ್ತಗಳನ್ನು ಹೆಚ್ಚು ಓದುವಂತೆ ಮಾಡುವುದು ಉದ್ದೇಶವಾಗಿದೆ.

ಕಾಫಿ ಐಸ್‌ ಕ್ರೀಮ್‌ ಡೇ

ಐಸ್​ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ತಂಪನೆ, ಸಿಹಿಯಾದ ಐಸ್ ಕ್ರೀಮ್ ಎಂದು ಹೇಳಿದರೆ ಸಾಕು ಹಲವರ ಬಾಯಲ್ಲಿ ನೀರುತ್ತದೆ. ಅದರಲ್ಲೂ ಕಾಫಿ ಐಸ್‌ ಕ್ರೀಮ್‌ ಅಂದರೆ ಸವಿಯಲು ಏನೋ ಒಂದು ಖುಷಿ. ಇದು ಬೇರೆ ಎಲ್ಲಾ ಐಸ್‌ ಕ್ರೀಮ್‌ ಗಿಂತ ಭಿನ್ನ ರುಚಿ ಹೊಂದಿದೆ. ಕೆಫೀನ್ ಮತ್ತು ಐಸ್ ಕ್ರೀಮ್ ಪ್ರಿಯರಿಗಾಗಿ ಸೆ. 6 ರಂದು
ರಾಷ್ಟ್ರೀಯ ಕಾಫಿ ಐಸ್ ಕ್ರೀಮ್ ದಿನವನ್ನಾಗಿ ಆಚರಿಸುವುದು ರೂಡಿಯಲ್ಲಿದೆ.

ಕಾಫಿಯ ಚರಿತ್ರೆ 9 ನೇ ಶತಮಾನದಲ್ಲಿ ಆರಂಭವಾಗುತ್ತದೆ. ಇತಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ, ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು. “ಕಾಫಿ” ಎಂಬ ಪದ ಇತಿಯೋಪಿಯದ “ಕಾಫ” ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ. ಕಾಫಿ 15 ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕ ಮತ್ತು ತಾರ್ಕಿ ಗಳನ್ನು ತಲುಪಿತು. 1475 ರಲ್ಲಿ ಈಸ್ತಾನ್ ಬುಲ್ ನಗರದಲ್ಲಿ ಮೊದಲ “ಕಾಫಿ ಹೋಟಲು” ಆರಂಭವಾಯಿತು.

ಇನ್ನು ರೋಮನ್ ಚಕ್ರವರ್ತಿ ನೀರೋನ ಕೋರಿಕೆಯ ಮೇರೆಗೆ ಮೊದಲ ರುಚಿಯ ಐಸ್ ಕ್ರೀಮ್ ಅನ್ನು ಕಂಡುಹಿಡಿಯಲಾಯಿತು. ಅವನ ಸೇವಕರು ಪರ್ವತಗಳಿಗೆ ಹೋಗಿ
ಜೇನುತುಪ್ಪ, ಬೀಜಗಳು ಮತ್ತು ಹಣ್ಣಿನ ಮೇಲೋಗರಗಳಿಂದ ರುಚಿಕರವಾದ ಸಿಹಿಭಕ್ಷ್ಯವನ್ನು ತಯಾರಿಸಲು ಹಿಮವನ್ನು ಸಂಗ್ರಹಿಸಿದರು. ಜೆಲಾಟೊದ ಆವಿಷ್ಕಾರವು ಹೆಚ್ಚಾಗಿ 16 ನೇ ಶತಮಾನದ ಫ್ಲಾರೆನ್ಸ್ ಮೂಲದ ಬರ್ನಾರ್ಡೊ ಬ್ಯುಂಟಲೆಂಟಿಗೆ ಸಲ್ಲುತ್ತದೆ, 1770 ರ ಹೊತ್ತಿಗೆ, ಜಿಯೊವಾನಿ ಬಾಸಿಯೊಲೊ ನ್ಯೂಯಾರ್ಕ್‌ನಲ್ಲಿ ಅರೆ ಹೆಪ್ಪುಗಟ್ಟಿದ ಕಾಫಿ ಮತ್ತು ಜಿನೋವಾದಲ್ಲಿ ಜನಪ್ರಿಯವಾಗಿರುವ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿ ಯಶಸ್ವಿಯಾದರು. ಅಂತಿಮವಾಗಿ, 1869 ರಲ್ಲಿ, ಕಾಫಿ ಐಸ್ ಕ್ರೀಮ್ ಅನ್ನು ಮೊದಲು ಪಾರ್ಫೈಟ್ ನಲ್ಲಿ ಬಳಸಲಾಯಿತು ಮತ್ತು ನಂತರ 1919 ರಲ್ಲಿ ಮತ್ತೆ ಅಡುಗೆ ಪುಸ್ತಕದಲ್ಲಿ ಕಾಣಿಸಿಕೊಂಡತ್ತು. ಇಂದು ಎಲ್ಲೆಡೆ ಕಾಫಿ ಐಸ್‌ ಕ್ರೀಮ್‌ ಬಹಳ ಜನಪ್ರಿಯವಾಗಿದೆ.‌