ಜ್ಞಾನ ವಿಕಾಸ ಯೋಜನೆ ಕಾರ್ಯಕ್ರಮ

ವಿಜಯಪುರ.ಮೇ೨೧:ಹೋಬಳಿಯ ಬೀರಸಂದ್ರ ಗ್ರಾಮದಲ್ಲಿ ಶ್ರೀ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆ ಯ ರವರ ಆಶ್ರಯದಲ್ಲಿ *ಮಾಸಿಕ ಮಹಿಳಾ ಜ್ಞಾನ ವಿಕಾಸ ಯೋಜನೆ * ಕಾರ್ಯಕ್ರಮವನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಅಧ್ಯಕ್ಷರು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ . ಎಂ ಶಿವಕುಮಾರ್ ರವರು ಮಹಿಳೆಯರು ಮತ್ತು ರೈತರಿಗಾಗಿ ಸರ್ಕಾರ ಲಭ್ಯವಿರುವ ಯೋಜನೆಗಳ ಅರಿವು ಮೂಡಿಸುವ ಬಗ್ಗೆ ಮಾತನಾಡುತ್ತಾ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಉದ್ಯಮಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯವಾದದ್ದು.
ಮಹಿಳೆಯರಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮಹಿಳೆಯರಿಗಾಗಿ ಸ್ತ್ರೀ ಶಕ್ತಿ ಸಾಲ ಯೋಜನೆ, ಸಣ್ಣ ಕೈಗಾರಿಕೆಗಳಿಗೆ ಸಾಲ ಯೋಜನೆ, ಭಾರತೀಯ ಮಹಿಳಾ ಬ್ಯಾಂಕುಗಳಿಗೆ ಉನ್ನತವಾಗಿ ಸಾಲ ಯೋಜನೆ, ಮಹಿಳಾ ಉದ್ಯಮಿಗಳಿಗೆ ಸಾಲ ಯೋಜನೆ, ಲೈಂಗಿಕ ಕಾರ್ಯಕರ್ತರಿಗೆ ಪುನಶ್ಚೇತನ ಯೋಜನೆ, ಬೀದಿ ವ್ಯಾಪಾರಿಗಳಿಗೆ ಸಾಲ ಯೋಜನೆ, ಮಹಿಳಾ ಸಬಲೀಕರಣ ಯೋಜನೆ ಗಳನ್ನು ಹಮ್ಮಿಕೊಂಡಿದೆ. ಮಹಿಳೆಯರು ಮಹಿಳಾ ಕಲ್ಯಾಣ ಇಲಾಖೆ ಕಚೇರಿಗೆ ಬೇಟಿ ಕೊಟ್ಟು ಸರ್ಕಾರದಿಂದ ಬರುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕೆಂದು ಕರೆ ನೀಡಿದರು.
ರೈತರು ನಮ್ಮ ದೇಶದ ಬೆನ್ನೆಲುಬು ಎಂದು ತಿಳಿಯಪಡಿಸುತ್ತಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬೇಕೆಂದು ಸಲಹೆ ನೀಡುತ್ತಾ, ಮಾನವರು ಮತ್ತು ಪ್ರಾಣಿಗಳು ಯಾವುದಾದರೂ ರೀತಿ ತೊಂದರೆಯಾದಲ್ಲಿ ಅವರುಗಳನ್ನು ವೈದ್ಯರ ಕಡೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಬಹುದು ಆದರೆ ರೈತರು ತಮ್ಮ ಬೆಳೆಗಳಿಗೆ ಬರುವ ರೋಗಗಳಿಗೆ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ ಎಂದು ತಿಳಿಸುತ್ತಾ, ಆ ಸಂಬಂಧ ಪಟ್ಟ ವೈದ್ಯರಿಗೆ ದೂರವಾಣಿ ಕರೆ ಮಾಡಿ ತಮ್ಮ ಬೆಳೆಗಳಿಗೆ ಬಂದ ರೋಗಗಳನ್ನು ದೂರ ಮಾಡಿಕೊಳ್ಳಬೇಕೆಂದು ಕರೆ ನೀಡುತ್ತಾ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಕೊಟ್ಟು, ಮಣ್ಣಿನ ಪರೀಕ್ಷೆ ಮಾಡಿಸಿ ಅವರ ಸಲಹೆಯನ್ನು ಪಡೆದ್ದು ಉತ್ತಮ ರೈತರಾಗಿ ಬಾಳಬೇಕೆಂದು ಕರೆ ನೀಡಿದರು.
ನೋಡಲ್ ಅಧಿಕಾರಿಗಳಾದ ವಿಜಯಲಕ್ಷ್ಮಿ ಯೋಜನೆ ನಿರ್ದೇಶಕರಾದ ಗೀತಾ ರವರು ಉಪಸ್ಥಿತರಿದ್ದರು