ಜ್ಞಾನ ಪಡೆಯಲು ಮಾತೃಭಾಷೆ ಕಲಿಕೆ ಮುಖ್ಯ: ಪೆÇ್ರ.ಕೆ.ಎಸ್.ರಂಗಪ್ಪ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.19:- ಜ್ಞಾನ ಪಡೆಯಲು ಮಾತೃಭಾಷೆ ಕಲಿಕೆ ಮುಖ್ಯ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್. ರಂಗಪ್ಪ ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಇನೋವೇಟಿವ್ ವತಿಯಿಂದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ವಿಜ್ಞಾನ ಲೇಖಕ ಡಾ.ಎಸ್.ಎನ್. ಹೆಗಡೆ ಅವರ ಆರು ಕೃತಿಗಳನ್ನು ಬಿಡುಗಡೆ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆ ಸಾಧ್ಯ, ಆದ್ದರಿಂದ ಪ್ರತಿಯೊಬ್ಬರು ಪುಸ್ತಕಗಳನ್ನು ಓದಬೇಕು ಎಂದು ಕರೆ ನೀಡಿದರು.
ನಾನು ಕೆ.ಆರ್. ನಗರದಲ್ಲಿ ಪಿಯುಸಿ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಓದಿ ಬಿ.ಎಸ್ಸಿಗೆ ಸೇರಲು ಮೈಸೂರಿನ ಯುವರಾಜ ಕಾಲೇಜಿಗೆ ಬಂದಾಗ ಅಂದಿನ ಪ್ರಾಂಶುಪಾಲರಾದ ಚಾಮಯ್ಯ ಅವರು ಇಂಗ್ಲಿಷ್ ಮಾಧ್ಯಮಕ್ಕೆ ಸೀಟು ನೀಡಲಿಲ್ಲ. ಕನ್ನಡ ಮಾಧ್ಯಮ ಆ ವರ್ಷ ಆರಂಭವಾಗಿತ್ತು. ಅಲ್ಲಿಗೆ ಸೇರಿ ಎಂದರು. ಹೀಗಾಗಿ ನಾನು ಶಾರಾದವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದೆ ಎಂದು ಅವರು ಸ್ಮರಿಸಿದರು.
ಆಗ ಕನ್ನಡದಲ್ಲಿ ವಿಜ್ಞಾನ ಕೃತಿಗಳು ಸಿಗುತ್ತಿರಲಿಲ್ಲ. ಪೆÇ್ರ.ಎಸ್.ಎನ್. ಹೆಗಡೆ ಅವರಂಥವರು ಆಗ ಇದ್ದಿದ್ದರೆ ನಾನು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಷಯ ತಿಳಿಯಲು ಅನುಕೂಲವಾಗುತ್ತಿತ್ತು. ಜಪಾನಿನಲ್ಲಿ ಸ್ವಂತ ಭಾಷೆಯಲ್ಲಿ ವಿಜ್ಞಾನವನ್ನು ಕಲಿಯುವುದರಿಂದ ವಿಷಯವನ್ನು ತುಂಬಾ ಚೆನ್ನಾಗಿ ತಿಳಿದುಕೊಂಡು, ಸಂಶೋಧನೆ ಮಾಡುತ್ತಾರೆ. ಆದ್ದರಿಂದ ಸ್ವಂತ ಭಾಷೆಯಲ್ಲಿ ಕಲಿಯುವುದು ಉತ್ತಮ ಎಂದು ಅವರು ಹೇಳಿದರು.
ಪೆÇ್ರ.ಎಸ್.ಎನ್. ಹೆಗಡೆ ಹಾಗೂ ಡಾ.ಎಂ. ಚಂದ್ರಕುಮಾರ್ ಅವರು ವ್ಯಾಯಾಮ ಶರೀರ ಕ್ರಿಯಾವಿಜ್ಞಾನದ ಮೂಲತತ್ವಗಳು ಕುರಿತು ಕೃತಿಯನ್ನು ರಚಿಸಿದ್ದಾರೆ. ಇವತ್ತು ಆರೋಗ್ಯದಿಂದಿರಲು ವ್ಯಾಯಾಮ ಮುಖ್ಯ ಎಂದರು.
ನಾನು ಮೈಸೂರು ಹಾಗೂ ಮುಕ್ತ ವಿವಿ ಕುಲಪತಿಯಾಗಿದ್ದಾಗ ಪುಸ್ತಕಗಳ ಪ್ರಕಟಣೆಗೆ ಸಾಕಷ್ಟು ಉತ್ತೇಜನ ನೀಡಿದ್ದೇನೆ. ಅದರಲ್ಲೂ ಮುಕ್ತ ವಿವಿಯಲ್ಲಿ ಮೈಸೂರು ದರ್ಶನ ಸಂಪುಟಗಳನ್ನು ಅಂದಿನ ಪ್ರಸಾರಾಂಗ ನಿರ್ದೇಶಕರಾಗಿ ಡಾ.ಡಿ.ಕೆ. ರಾಜೇಂದ್ರ, ಜೊತೆಯಲ್ಲಿ ಜಿ.ಎಸ್. ಭಟ್ ಅವರು ಅತ್ಯುತ್ತಮವಾಗಿ ರಚಿಸಿ, ವಿವಿಗೆ ಹಾಗೂ ನನಗೆ ಹೆಸರು ಬರುವಂತೆ ಮಾಡಿದರು. ಆದರೆ ಈಗ ಅಲ್ಲಿನ ಪ್ರಸಾರಾಂಗ ಮುಚ್ಚುವ ಸ್ಥಿತಿಯಲ್ಲಿದೆ ಎಂದರೇ ಕುಲಪತಿಗಳಾಗಿ ಬಂದವರು ಯೋಚಿಸಬೇಕು ಎಂದರು.
ಪೆÇ್ರ.ಎಸ್.ಎನ್. ಹೆಗ್ಡೆ ಅವರು ಮೈಸೂರು ವಿಜ್ಞಾನ ವಿಷಯಕೋಶದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಕೃತಿಗಳನ್ನು ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ಇನೋವೇಟಿವ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮುಖ್ಯ ಅತಿಥಿಯಾಗಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಲೇಖಕರಾದ ಡಾ.ಎಸ್.ಎನ್. ಹೆಗಡೆ, ಸಹ ಲೇಖಕ ಡಾ.ಎಂ. ಚಂದ್ರಕುಮಾರ್, ಪ್ರಕಾಶಕ ಮಹಿಮಾ ಶ್ರೀನಿವಾಸ್ ಇದ್ದರು.
ವಿದ್ವಾನ್ ಹೇರಂಹ ಆರ್. ಭಟ್ ಕಾರ್ಯಕ್ರಮ ನಿರೂಪಿಸಿದರು.