
ದಾವಣಗೆರೆ ಜ 18; ಜ್ಞಾನ ದೇಗುಲದಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಸಾಮಾನ್ಯ ಜ್ಞಾನವನ್ನು ತಿಳಿಸಿಕೊಟ್ಟ ಸಂಸ್ಥೆ ಸಿದ್ದಗಂಗಾ ಶಾಲೆ ಎಂದು ಬಳ್ಳಾರಿಯ ಕೆಪಿಟಿಸಿಎಲ್ ಇಂಜನೀಯರ್ ಶಾರದಾ ಹಾವೇರಿಮಠ ನುಡಿದರು. ಅವರು ನಗರದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಯ ೫೩ನೇ ವಾರ್ಷಿಕೋತ್ಸವದ ೩ನೇ ದಿನದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತ ಈ ದೇಗುಲದಲ್ಲಿ ನೋಡಿ ಕಲಿಯುವ ಇಬ್ಬರು ಆದರ್ಶ ವ್ಯಕ್ತಗಳಿದ್ದಾರೆ ಅವರೇ ಸಂಸ್ಥಾಪಕ ಕಾರ್ಯದರ್ಶಿ ಎಂ ಎಸ್ ಶಿವಣ್ಣ ಮತ್ತು ಜಸ್ಟಿನ್ ಡಿಸೌಜಾ ರವರು ಎಂದು ಅವರ ಸೇವೆಯನ್ನು ಶ್ಲಾಘಿಸಿದರು. ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಧರ್ಮಪತ್ನಿ ಶ್ರೀಮತಿ ರೇಖಾ ಮಹಾಂತೇಶ್ ಬೀಳಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಯ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್ ಡಿ ಸೌಜ, ಉಪನ್ಯಾಸ ಕರಾದ ಎ. ನರಸಿಂಹ, ಡಾ.ಉಷಾ ಡಿ. ಅರ್. ಶ್ರೀಮತಿ ಮಂಜುಳಾ ಹಂಪಾಳಿ, ಶ್ರೀಮತಿ ವಸಂತ ಆರ್, ವೇದಿಕೆಯ ಮೇಲೆ ಉಪಸ್ಥಿತರಿದ್ದರು.