ಜ್ಞಾನ ಕೌಶಲ್ಯದಿಂದ ಸಾಧನೆ ಸಾಧ್ಯ : ಮಯೂರ ಜೋಶಿ

ಸಂಜೆವಾಣಿ ವಾರ್ತೆ
ಸಂಡೂರು :ಜು:22:  ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಕೌಶಲ್ಯ ಅಭಿವೃದ್ದಿ ತರಬೇತಿಗಳು ಸಹಕಾರಿಯಾಗಿವೆ. ಜ್ಞನ ಕೌಶಲ್ಯ ಸೃಜನಶಿಲತೆ ಒಳಗೂಡಿ ಕಾರ್ಯಪ್ರೌವೃತ್ತವಾದಾಗ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಬಹುದು. ಸಾಧನೆ ಜೊತೆಗೆ ಕೌಶಲ್ಯ ಅಳವಡಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಎಸ್.ಕೆ.ಎಂ.ಪಿ.ಎಲ್. ಕಂಪನಿಯ ಅಧಿಕಾರಿ ಮಯೂಜ ಜೋಷಿಯವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ 11ನೇ ವಾರ್ಡಿನ ನ್ಯಾಯಾಲಯ ರಸ್ತೆಯಲ್ಲಿರುವ ಸ್ಕಂದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಉಚಿತ ಕಂಪ್ಯೂಟರ್ ತರಬೇತಿಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಸ್ಕಂದ ಕಂಪ್ಯೂಟರ್ ತರಬೇತಿ ವ್ಯವಸ್ಥಾಪಕ ದರೂರು ವಿಶ್ವನಾಥ ಗೌಡರು ತಂತ್ರಜ್ಞಾನ ಅಭಿವೃದ್ದಿಯಾದಂತೆ ಶಿಕ್ಷಣದಲ್ಲಿ ಕೌಶಲ್ಯವು ಪ್ರಧಾನತೆ ಪಡೆಯುತ್ತಿದೆ. ಯಾವುದೇ ಕ್ಷೇತ್ರವಿರಲಿ ಕೌಶಲ್ಯದಿಂದ ಯಶಸ್ಸು ಸಿಗಲು ಕಾರಣ. ವಿದ್ಯರ್ತಿಗಳು ಕೌಶಲ್ಯವನ್ನು ಜ್ಞಾನಾರ್ಜನೆ ಮೂಲಕ ಹೆಚ್ಚಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಅಭ್ಯಾಸ ಮನೋರಂಜನೆ ಕ್ರೀಡೆ ಮತ್ತು ಕಲಾ ಕ್ಷೆತ್ರದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಿರಬೇಕಿದೆ. ಆಯಾ ಕಾಲಕ್ಕೆ ಎದುರಾಗುವ ಮಸ್ಯೆಯನ್ನ ನಿಭಾಯಿಸುವದರ ಜೊತೆಗೆ ಬದುಕುವ ಕಲೆಯನ್ನು ಕಲಿಯಬೇಕಾದರೆ ಶಿಕ್ಷಣದಿಂದಲೇ ಸಾಧ್ಯ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅರಳಿ ಕುಮಾರಸ್ವಾಮಿ ಮಾತನಾಡಿ ಎಸ್.ಕೆ.ಎಂ.ಇ.ಪಿ.ಎಲ್. ಕಂಪನಿಯವರು ಸಿ.ಎಸ್.ಆರ್ ಯೋಜೆನ ಅಡಿಯಲ್ಲಿ ಉಚಿತ ಕಂಪ್ಯೂಟರ್ ತರಬೇತಿಯ ಶಿಭಿರವನ್ನು ಸುತ್ತಮುತ್ತಲಿನ ಗ್ರಾಮಗಳಿಗೆ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವ್ಯಕ್ತಿತ್ವ ವಿಕಾಸನವನ್ನು ಹೊಂದುವಂತೆ ಮಾಡಿರುವುದು ಶ್ಲಾಘನೀಯ. ಪ್ರತಿವೊರ್ವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಣಕ್ಕೆ ಮಹ್ವ ಕೊಡಬೇಕಲ್ಲದೇ ತರಬೇತಿ ಶಿಭಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ತರಬೇತಿ ಶಿಭಿರಗಳು ಕಾಟಚಾರವಾಗದೇ ಉತ್ತಮವಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಬೇತಿ ಶಿಭಿರದಲ್ಲಿ ಭಾಗವಹಿಸಿ ಶಿಭಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.  ಕಾರ್ತಿಕರವರು ಸ್ವಾಗತಿಸಿದರು. ರಜಿಯಾ ಬೇಗಮ ರವರ ನಿರೂಪಿಸಿದರು. ವಿಜಯಕುಮಾರ್ ಅವರು ವಂದಿಸಿದರು. ಜ್ಯೋತಿ ಮತ್ತು ಸಂಗಡಿಗರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಆಫ್ರೀನ್ ಶಿಕ್ಷಕಿ ಮತ್ತು ವಿದ್ಯಾರ್ಥಿಗಳು ಸಮಾರಂಬದಲ್ಲಿ ಉಪಸ್ಥಿತರಿದ್ದರು.