ಜ್ಞಾನ ಎಂಬುವುದು ಮಾನವನ ಬಾಳಿಗೆ ಬೆಳಕು ನೀಡುವ ದೀಪವಾಗಿದೆ: ಲಿಂಗರಾಜ

ಕಲಬುರಗಿ: ಜೂ.2:ಜ್ಞಾನ ಎಂಬುವುದು ಮಾನವನ ಬಾಳಿಗೆ ಬೆಳಕು ನೀಡುವ ದೀಪವಾಗಿದೆ ಈ ಜ್ಞಾನ ದೀಪವನ್ನು ಬೆಳಗಿದ ಪ್ರತಿಭಾವಂತರು ಮನುಕುಲದ ಚರೀತ್ರೆಯಲ್ಲಿ ಅನೇಕರು ಇತಿಹಾಸವನ್ನು ಸೃಷ್ಠಿಸಿದ್ದಾರೆ ಅದರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು, ಶಿಕ್ಷಣ ಎಂಬುವುದು ದಾನವಲ್ಲಿ ಹಕ್ಕು ಶೋಷಿತ ವರ್ಗದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಕ್ಕಿದ್ದೇ ಅದಲ್ಲ, ಅದೇ ಒಂದು ದೊಡ್ಡ ಆಸ್ತಿ ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ತಾರಪೈಲ್ ಹೇಳಿದರು.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮುದಬಾಳ (ಬಿ) ಗ್ರಾಮದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ ನೂತನ ಗ್ರಾಮ ಶಾಖೆ ಹಾಗೂ ಶಿವಶರಣ ಮಾದರ ಚನ್ನಯ್ಯನವರ ನಾಮಫಲಕ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು, ಶಿಕ್ಷಣವೇ ಒಂದು ದೊಡ್ಡ ಆಸ್ತಿ, ಈ ಆಸ್ತಿ ಒಮ್ಮೆ ಸಿಕ್ಕರೆ ಅದನ್ನು ಯಾರಿಂದಲೂ ಕದಿಯಲಾಗದ ಹಾಘೂ ಕಳೆದುಕೊಳ್ಳಲಾಗದ ಆಸ್ತಿಯಾಗಿದೆ. ಅದಕ್ಕಾಗಿ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಒಂದು ಅಸ್ತಿಯನ್ನಾಗಿ ಮಾಡಬೇಕು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡುತ್ತಾ, ಶಿಕ್ಷಣದ ಎಲ್ಲಾ ತಾರತಮ್ಯಗಳನ್ನು ತೊಡೆದು ಹಾಕುವ ಒಂದು ಅತ್ಯಂತ ಸುಂದರವಾದ ಹಾಗೂ ಕ್ರಾಂತಿಕಾರಿಕ ಸಾಧನಾ ಮತ್ತು ಸೇತುವೆಯಾಗಿದೆ. ಈ ಎಲ್ಲಾ ರೀತಿಯ ಶೋಷಣೆಗಳನ್ನು ಹಿಂಸೆ, ಅನ್ಯಾಯಗಳನ್ನು ತೊಡೆಯುವ ರಾಜಕೀಯ ಪ್ರಜ್ಞೆ ಬೆಳೆಸುವ ಅಸ್ತ್ರವೂ ಶಿಕ್ಷಣವೇ ಆಗಿದೆ ಹಾಗಾಗಿ ಎಲ್ಲರೂ ಮಕ್ಕಳಿಗೆ ಮೊದಲು ಶಿಕ್ಷಣವನ್ನು ನೀಡಿ ಎಂದರು.

ಇದೇ ಸಂದರ್ಭದಲ್ಲಿ ನೂತನ ಗ್ರಾಮ ಶಾಖೆಯ 11 ಜನ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕಾಶಿಂ ಸಾಬ ಪೋಲಿಸ್ ಪಾಟೀಲ್, ರಾಜಾಸಾಬ ಮಾಲಿಪಾಟೀಲ್, ಸಮಿತಿಯ ರಾಜ್ಯ ಕಾನೂನು ಸಲಹೆಗಾರ ಸುಭಾಷ ಕಾಂಬಳೆ, ಜೇವರ್ಗಿ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ದಿನ್ನಿ, ನಗರಾಧ್ಯಕ್ಷ ಪರಶುರಾಮ ಆಳಲಕರ್, ಪರುಶುರಾಮ ದೊಡ್ಡಮನಿ ವಕೀಲರು ಉಸ್ಥಿತರಿದ್ದರು.