ಜ್ಞಾನ, ಅರಿವು, ಸಂಸ್ಕಾರ ನೀಡುತ್ತಿರುವ ಹಿರೇಮಠ ಸಂಸ್ಥಾನದ ಕಾರ್ಯ ಶ್ಲಾಘನೀಯ : ಶಿಂಧೆ

ಔರಾದ :ಮಾ.30: ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ಅಪಾರವಾಗಿದೆ. ಮಠ-ಮಾನ್ಯಗಳು ಬಹಳ ಹಿಂದಿನಿಂದಲೂ ಧರ್ಮ ಪ್ರಸಾರ, ಪ್ರಚಾರದ ಜತೆಗೆ ಜ್ಞಾನ, ಅರಿವು, ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದುತಾಪಂ ಇಒ ವೆಂಕಟ ಶಿಂಧೆ ಹೇಳಿದರು.

ಪಟ್ಟಣದ ಬಸವಗುರುಕುಲ ಪಬ್ಲಿಕ್ ಸ್ಕೂಲ್ ಶಾಲೆ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಧಾರ್ಮಿಕ, ಶೈಕ್ಷಣಿಕ, ಸಮಾಜಿಕ ಪರಿವರ್ತನೆಯ ಜತೆಗೆ ಹಿರೇಮಠ ಸಂಸ್ಥಾನ ಅಕ್ಷರ ಜ್ಞಾನದಿಂದ ವಂಚಿತ ಮಕ್ಕಳ ಬಾಳಿನಲ್ಲಿ ಜ್ಞಾನದ ದೇವಿಗೆ ಹಚ್ಚುತ್ತಿದೆ ಎಂದರು.

ಬಿಇಒ ಟಿಆರ್ ದೊಡ್ಡೆ ಮಾತನಾಡಿ, ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಜನಪರ ಕಾರ್ಯಗಳಿಂದ ನಾಡಿನ ಎಲ್ಲ ವರ್ಗದ ಜನರ ಪ್ರೀತಿ, ಭಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪಟ್ಟದ್ದೇವರಿಗೆ ನೀಡಿರುವುದು ಕಲ್ಯಾಣ ಕರ್ನಾಟಕದ ಭಾಗದ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಿಆರ್‍ಸಿ ಪ್ರಕಾಶ ರಾಠೋಡ್, ಮನ್ಮಥಪ್ಪ ಬಿರಾದಾರ್, ಶಾಲಿವಾನ ಉದಗೀರೆ, ವಿಶ್ವನಾಥ ಬಿರಾದಾರ್, ರಾಜಕುಮಾರ ಡೋಂಗರೆ, ನಾರಾಯಣ ರಾಠೋಡ್, ಶಾಲೆಯ ಪ್ರಾಂಶುಪಾಲರಾದ ಖುಷ್ಬೂ ಜ್ಯೋತಿ ಸೇರಿದಂತೆ ಶಾಲೆಯ ಸಿಬ್ಬಂದಿಗಳಿದ್ದರು.