(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು21: ಜೀವನನಲ್ಲಿ ಉತ್ತಮ ಬದುಕನ್ನು ಸಾಗಿಸುವ ವ್ಯವಸ್ಥೆಯನ್ನು ತಿಳಿ ಹೇಳುವ ಜ್ಞಾನೇಶ್ವರಿ ಪಾರಾಯಣ ಶ್ರೇಷ್ಠ ಗ್ರಂಥವಾಗಿದೆ ಎಂದು ನಾಮದೇವ ಶಿಂಪಿ ಸಮಾಜ ಅಧ್ಯಕ್ಷ ಅಣ್ಣಪ್ಪ ಜೊಂಜಾಳೆ ಹೇಳಿದರು.
ಅವರು ಪಟ್ಟಣದ ಜವಳಿಖೂಟದಲ್ಲಿರುವ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ಯ ರುಕ್ಮೀಣಿ ಮಹಿಳಾ ಮಂಡಲ ವತಿಯಂದ ನಡೆದ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಸಾಮೂಹಿಕ ಪಾರಾಯಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, . ಜ್ಞಾನೇಶ್ವರ ಅವರಂತಹ ಗ್ರಂಥಗಳು ಸರ್ವಕಾಲಿಕವಾಗಿದ್ದು, ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಂಡಲ್ಲಿ ಬದುಕು ಹಸನಗೊಳ್ಳುತ್ತದೆ ಎಂದರು.
ದೇವಸ್ಥಾನ ಅರ್ಚಕ ವಿಠ್ಠಲ ಜೊಂಜಾಳೆ, ನಿವೃತ್ತಿ ಕೊಳೇಕರ, ಸುರೇಶ ಕಾಮಕರ, ಸಂತಾಜಿರಾವ ಘಾಟಗೆ, ರಾಮಕ ?ಷ್ಣ ಕಾಮಕರ, ಶಂಕರ ರಾಠೋಡ, ತಾನಾಜಿ ಘಾಟಗೆ, ರವೀಂದ್ರ ಜೊಂಜಾಳೆ, ವಿಜಯಕುಮಾರ ಕೊಳೇಕರ, ರುಕ್ಮೀಣಿ ಮಹಿಳಾ ಮಂಡಳದ ಅಧ್ಯಕ್ಷೆ ಮಂಗಲಾ ಕೊಳೇಕರ, ಜಯಶ್ರೀ ಜೊಂಜಾಳೆ, ನಿತಾ ಮಾಳೋದೆ, ನೀತಾ ಬೊಂಗಾಳೆ, ವಿದ್ಯಾ ಕೊಳೇಕರ, ರೂಪಾ ಗಾಂಡೊಳ್ಳಿ, ಅಂಜನಾ ಬೊಂಗಾಳೆ, ಭಾರತಿ ಕೊಳೇಕರ, ಸ್ವರೂಪಾ ಗಾಂಡೊಳ್ಳಿ, ಮಹೇಶ್ವರಿ ಜೊಂಜಾಳೆ, ಲತಾ ಕೋಪರ್ಡೆ, ಸವಿತಾ ಕೊಳೇಕರ, ಸಹನಾ ಬೊಂಗಾಳೆ, ದೀಪಾ ಬೊಂಗಾಳೆ, ಕಾಂಚನಾ ಹೋಮಕರ, ಕವಿತಾ ಬುಲಬುಲೆ, ರೇಶ್ಮಾ ಕೊಳೇಕರ, ಲತಾ ಮಾಳೋದೆ, ಲಲಿತಾ ಜೊಂಜಾಳೆ, ಅಕ್ಷತಾ ಜೊಂಜಾಳೆ, ಭಾಗ್ಯಶ್ರೀ ಹೊಮಕರ, ಗಾಯತ್ರಿ ಬೊಂಗಾಳೆ, ಸುನಂದಾ ಹಾವಳ, ಪ್ರೀಯಾ ಹೋಮಕರ ಮುಂತಾದವರು ಇದ್ದರು.
ಈ ಸಂದರ್ಭದಲ್ಲಿ ರುಕ್ಮೀಣಿ ಮಹಿಳಾ ಮಂಡಲ ವತಿಯಂದ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಸಾಮೂಹಿಕ ಪಾರಾಯಣ ಪಠಣ ಜರುಗಿತು.