ಜ್ಞಾನೇಶ್ವರಿ ಪರಾಯಣ ಉತ್ಸವ

(ಸಂಜೆವಾಣಿ ವಾರ್ತೆ)
ಹುಮನಾಬಾದ : ಎ.2: ತಾಲೂಕಿನ ಕನಕಟ್ಟಾ ಹನುಮಾನ ಮಂದಿರ ಸಮಿತಿವತಿಯಿಂದ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಒಂಬತ್ತನೆ ವರ್ಷದ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥ ರಾಜ ಜ್ಞಾನೇಶ್ವರಿ ಪರಾಯಣ ಉತ್ಸವ ಮಾರ್ಚ 30ರಿಂದ ಆರಂಭ ಗೊಂಡಿದ್ದು ಏಪ್ರಿಲ 6ರವರೆಗೆ ಪ್ರತಿದಿನ ಬೆಳಗ್ಗೆ 4ರಿಂದ 6ರರವರೆಗೆ ಕಾಕಡಾರತಿ. 6ರಿಂದ 10ರವರೆಗೆ ಪಾರಯಣ 11ರಿಂದ 1ರವರೆಗೆ ಗಾತ ಭಜನೆ ಜರುಗುವುದು. ಎಂದು ಹನುಮಾನ ದೇವಸ್ಥಾ ಸಮಿತಿಯವರು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲು ಮನವಿ ಮಾಡಿದ್ದಾರೆ.