ಜ್ಞಾನಾರ್ಜನೆ ಸಾಧನೆಗೆ ಸ್ವಸಾಮಥ್ರ್ಯ ಅಗತ್ಯ: ಪ್ರೊ. ಆಲಗೂರು

????????????????????????????????????

ಬಳ್ಳಾರಿ ಜ 12 : ಜ್ಞಾನಾರ್ಜನೆ ಎಂಬುದು ನಮ್ಮ ಮನಸ್ಸಿನಾಳದಲ್ಲಿ ಮೂಡಬೇಕು ಮತ್ತು ಅದರ ಸಾಧನೆಗೆ ನಮಗೆ ನಾವೇ ಗುರುವಾಗಬೇಕು ಎಂದು ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಕೆಲವು ಸಲ ಹೊಸ ಸಾಹಸಕ್ಕೆ ನಾವು ಕೈಹಾಕಬೇಕು ಅದು ಯಶಸ್ವಿಯಾದರೆ ನಾವು ನಾಯಕರಾಗಬಹುದು ಅದು ಕೈಗೂಡದಿದ್ದರೆ ನಾವು ಇತರರಿಗೆ ಮಾರ್ಗದರ್ಶಕರಾಗಬಹುದು ಎಂಬ ವಿವೇಕಾನಂದರ ನುಡಿಯು ಪ್ರಸ್ತುತ ಸ್ಥಿತಿಗತಿಯಲ್ಲಿ ಸಮಂಜಸವಾದ ಹೇಳಿಕೆಯಾಗಿದೆ ಎಂದು ನೆನೆದರು.
ಯುವಕರ ಸಕಾರಾತ್ಮಕ ಯೋಚನೆಗಳಿಂದಲೇ ನವಭಾರತ ನಿರ್ಮಾಣವಾಗಬೇಕಿದೆ. ಆತ್ಮನಿರ್ಭರ ಭಾರತದ ಪರಿಕಲ್ಪನೆಯಲ್ಲಿ ಯುವಶಕ್ತಿಯ ಪಾತ್ರ ದೊಡ್ಡದು. ಯುವ ಸಮೂಹದ ಮೇಲೆ ಪ್ರಧಾನಿ ಮೋದಿಯವರು ಅಚಲ ವಿಶ್ವಾಸವಿಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿವೇಕಾನಂದರರ ಕನಸಾದ ಸಶಕ್ತ ಭಾರತ ಕಟ್ಟಲು ಯುವಕರ ಸಹಭಾಗಿತ್ವವನ್ನು ನಿರೀಕ್ಷಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರ ಮಾತನಾಡಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು. ನರೇಂದ್ರ ಎಂಬ ಯುವಕ ವಿವೇಕಾನಂದರಾಗಿ ಮಾರ್ಪಾಟಾದ ಕಥೆಯೊಂದಿಗೆ ವಿವರಿಸಿದರು. ಇಂದಿನ ಯುವ ಪೀಳಿಗೆ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಿ ಕೆ ತುಳಸಿಮಾಲ ಮಾತನಾಡಿ, ಆಧ್ಯಾತ್ಮಿಕ ಚಿಂತಕರುಗಳಲ್ಲಿ ವಿವೇಕಾನಂದರೇ ಅಗ್ರಗಣ್ಯರು. ಇವರ ಸತ್ವಯುತ ವ್ಯಕ್ತಿತ್ವವನ್ನು ಎಲ್ಲರೂ ಅನುಸರಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರವು ಆಯೋಜಿಸಿದ್ದ ರಾಷ್ಟ್ರೀಯ ಯುವ ಸಂಸತ್ತಿನ ನೇರ ಪ್ರಸಾರ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಪ್ರಸಾರ ಮಾಡಲಾಯಿತು. ವಿವಿಧ ರಾಜ್ಯಗಳ ಯುವಪ್ರತಿನಿಧಿಗಳು ‘ಆತ್ಮ ನಿರ್ಭರ ಭಾರತ’, ‘ವೋಕಲ್ ಫಾರ್ ಲೋಕಲ್’, ‘ಮೇಕ್ ಇನ್ ಇಂಡಿಯಾ’ ವಿಷಯಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ಪ್ರಧಾನಿ ಮೋದಿಯವರು ರಾಷ್ಟ್ರೀಯ ಯುವ ಸಂಸತ್ತು ಮತ್ತು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವರು (ಮೌಲ್ಯಮಾಪನ) ಪ್ರೊ. ಶಶಿಕಾಂತ ಉಡಿಕೇರಿ, ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ್ ಮರ್ಚಡ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ ಪಿ ದಿನೇಶ್ ಹಾಗೂ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.