ಜ್ಞಾನಾರ್ಜನೆಗೆ ಪುಸ್ತಕಗಳು ಅಗತ್ಯ

ಬಂಗಾರಪೇಟೆ.ಅ೧೨:ದೇಶ ಸುತ್ತಬೇಕು ಕೋಶ ಓದಬೇಕು ಎಂಬ ವಾಕ್ಯ ದಂತೆ ನಾವುಗಳು ಮುಖ್ಯವಾಗಿ ನಮ್ಮ ಜ್ಞಾರ್ಜನೆಗಾಗಿ,ನಿಜ ಜೀವನದ ಅರಿವಿಗಾಗಿ, ಮಾನಸಿಕ ಸ್ವಾಸ್ತ್ಯತೆಗಾಗಿ, ಬದುಕಿನ ಉಜ್ವಲ ಭವಿಷ್ಯ ಕ್ಕಾಗಿ ಹಾಗೂ ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಪುಸ್ತಕಗಳು ಬಹಳ ಅವಶ್ಯಕವಾಗಿದೆ ಎಂದು ಗ್ರಂಥಾಲಯ ಮೇಲ್ವಿಚಾರಕರು ಅದ ವಿ ರಾಮಕ್ಕ ರವರು ಗ್ರಂಥ ಪಾಲಕರ ದಿನಾಚರಣೆಯ ಕುರಿತು ಮಾತನಾಡಿದರು.
ಈ ಜಯಂತಿ ಕಾರ್ಯಕ್ರಮ ವು ಗ್ರಂಥಾಲಯ ದ ಪಿತಾಮಹ ರಾದ ಎಸ್ ಆರ್ ರಂಗನಾಥನ್ ರವರ ಜನ್ಮ ದಿನದೊಂದಿಗೆ ಆಚರಿಸುತ್ತಿರುವ ಈ ಸಂದರ್ಭ ಸುದಿನ ವಾಗಿದೆ, ಗ್ರಂಥಾಲಯ ಪಿತಾಮಹ ರಾದ ಎಸ್ ಆರ್ ರಂಗನಾಥನ್ ರವರ ಗ್ರಂಥಾಲಯ ದ ಬಗೆಗಿನ ಅವರ ಕಾಳಜಿ, ಅವರು ನೀಡಿದ ಕೊಡುಗೆ ಗಳನ್ನು ವಿವರಿಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಕವಿ ಸಾಹಿತಿ ವಿ ಲಕ್ಷ್ಮಯ್ಯ ರವರು ಈ ಸಮಾಜದಲ್ಲಿ ಉತ್ತಮ ವ್ಯಕ್ತಿ ಯಾಗಬೇಕಾದಲ್ಲಿ, ಸದೃಢ ವ್ಯಕ್ತಿತ್ವ ಸದೃಢ ಸಮಾಜ ದ ನಿರ್ಮಾಣಕ್ಕೆ ಜ್ಞಾನ ಮುಖ್ಯವಾಗಿದೆ ಈ ಜ್ಞಾನವು ಪಡೆಯಲು ಪುಸ್ತಕಗಳ ಮೊರೆ ಹೋಗಲೇಬೇಕು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆ ಗಳನ್ನು ಎದುರಿಸಲು ಗ್ರಂಥಾಲಯ ಗಳು ಜ್ಞಾನ ದೇಗುಲಗಳಂತೆ ಕಾರ್ಯ ನಿರ್ವಹಿಸುತ್ತಿರುವುದು ಬಹಳ ಶ್ಲಾಘನೀಯ ವಾದುದಾಗಿದೆ. ಅದರಲ್ಲಿ ಗೌತಮ್ ನಗರ ದಲ್ಲಿರುವ ಕೊಳಚೆ ಪ್ರದೇಶ ಗ್ರಂಥಾಲಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿನ ಸ್ಥಳೀಯ ಓದುಗರಿಗೆ ಬಹಳಷ್ಟು ಉಪಯೋಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಓದುಗರಾದ ವೆಂಕಟಾಚಲಪತಿ ಎನ್, ಉಪೇಂದ್ರ ಕೆ ರಾಜು, ಮಂಜುಳ, ರೇಣುಕಾ, ಬಾಲಕೃಷ್ಣ, ರಾಮಕೃಷ್ಣಪ್ಪ, ವಿದ್ಯಾರ್ಥಿಗಳಾದ ಜೀವಿತಾ, ಕೀರ್ತನ, ಸಿವಂತ್, ಬಬ್ಬುಲು ಇನ್ನು ಓದುಗರು ಹಾಜರಿದ್ದರು.