ಜ್ಞಾನಾಮೃತ ಪಿಯು ಕಾಲೇಜ್ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: 2022-23ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದುಬಳ್ಳಾರಿಯಮರ್ಚಡ್‍ಟ್ರಸ್ಟ್ (ರಿ.) ಇವರ ವತಿಯಿಂದ ನಡೆಸಲ್ಪಡುತ್ತಿರುವಜ್ಞಾನಾಮೃತ ವಿದ್ಯಾಸಂಸ್ಥೆಯು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿಶೇ.100 ಫಲಿತಾಂಶವನ್ನುದಾಖಲಿಸಿದೆ. ವಿಜ್ಞಾನ ವಿಭಾಗದಲ್ಲ್ತಿಕುಮಾರಿರಶ್ಮಿ 584ಅಂಕಗಳನ್ನು ಪಡೆದುರಾಜ್ಯಕ್ಕೆ 12ನೇ ರ್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿತಂದಿರುತ್ತಾರೆ. 44% ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಗಳಿಸಿದ್ದು ಹಾಗೂ 66% ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿಉತ್ತೀರ್ಣರಾಗಿರುತ್ತಾರೆ.ಸತತ ಮೂರು ವರ್ಷಗಳಿಂದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿಶೇ.100 ಫಲಿತಾಂಶ ದಾಖಲಿಸಿದ ಬಳ್ಳಾರಿ ಜಿಲ್ಲೆಯ ಏಕೈಕವಿದ್ಯಾಸಂಸ್ಥೆಯಾಗಿಜ್ಞಾನಾಮೃತ ಪದವಿ ಪೂರ್ವಕಾಲೇಜುಮೂಡಿಬಂದಿದೆ.ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.