ಜ್ಞಾನವ್ಯಾಪಿ ಸಮೀಕ್ಷೆ ನಿಲ್ಲಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ವಾರಣಸಿ,ಸೆ.29- ನಗರದ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವೈಜ್ಞಾನಿಕ ಅಧ್ಯಯನವನ್ನು ನಿಲ್ಲಿಸುವಂತೆ ಮಸೀದಿ ಆಡಳಿತ ಮಂಡಳಿಸ ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ನ್ಯಾಯಾಲಯ ತಿರಸ್ಕರಿಸಿದೆ.

ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನ ನಿರ್ದೇಶನದ ಮೇರೆಗೆ ಸಮೀಕ್ಷೆ ನಡೆಸಲಾಗುತ್ತಿದೆ ಮತ್ತು ಆದ್ದರಿಂದ ಈ ವಿಷಯದಲ್ಲಿ ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಹೇಳಿದ್ದಾರೆ.

ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅದನ್ನು ಎತ್ತಿ ಹಿಡಿದಿವೆ. ನ್ಯಾಯಾಧೀಶ ವಿಶ್ವೇಶ ಈ ಬಗ್ಗೆ ಉಲ್ಲೇಖಿಸಿದರು. ಈ ನ್ಯಾಯಾಲಯದ ಜುಲೈ 21 ರ ಆದೇಶವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸುವಾಗ ಎಐಎಂ ಈ ಅಂಶಗಳನ್ನು ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಹೈಕೋರ್ಟ್ ಆಗಸ್ಟ್ 3 ರಂದು ಮನವಿ ವಜಾಗೊಳಿಸಿತ್ತು ಮತ್ತು ಒಂದು ದಿನದ ನಂತರ ಸುಪ್ರೀಂ ಕೋರ್ಟ್ ಸಹ ಈ ನಿರ್ಧಾರ ಅನುಮೋದಿಸಿತ್ತು ಜುಲೈ 21 ರ ಆದೇಶ ಈಗ ಹೈಕೋರ್ಟ್‍ನ ಆಗಸ್ಟ್ 3 ರ ಆದೇಶದ ಭಾಗವಾಗಿದೆ ಮತ್ತು ಈಗ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ, ”ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಪುರಾತತ್ವ ಇಲಾಖೆ “ಆಕ್ರಮಣಕಾರಿ ವಿಧಾನ” ಬಳಸುತ್ತಿದೆ ಮತ್ತು ನಿಗದಿತ ಮಾನದಂಡ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಂಘಟನೆ ಆಗಸ್ಟ್ 9 ರಂದು ತನ್ನ ಮನವಿ ಸಲ್ಲಿಸಿತ್ತು. ಎಎಸ್‍ಐ ಸಮೀಕ್ಷೆ ಬಯಸುವವರು ಏಜೆನ್ಸಿಯ ಸೇವೆಗಳನ್ನು ಪಡೆಯಲು ಶುಲ್ಕ ಠೇವಣಿ ಮಾಡಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.