ಜ್ಞಾನವೆಂಬ ರತ್ನ ಕಣ್ಣಿಗೆ ಕಾಣಿಸುವದಿಲ್ಲಾ:ಪಡೇಕನೂರಶ್ರೀ

ತಾಳಿಕೋಟೆ:ಮಾ.12: ಮಹಾತ್ಮರ ಆತ್ಮ ಸ್ವರೂಪವೆಂಬುದು ಗದ್ದುಗೆಗಳಲ್ಲಿದೆ ಹರಿದು ಹೋಗುವಂತಹ ಮನಸ್ಸನ್ನು ಹಿಡಿದುಕೊಂಡು ಕೂಡ್ರುವವರಿಗೆ ಸದ್ಭಕ್ತರೆನ್ನುತ್ತಾರೆ ಭೂಮಿ ನಿನ್ನದಲ್ಲಾ, ಹೇಮ ನಿನ್ನದಲ್ಲಾ, ಕಾಮಿ ನಿನ್ನದಲ್ಲಾ, ಕಾರಣ ನಾವು ಬರುವಾಗ ಏನು ತಂದಿಲ್ಲಾ ಹೋಗುವಾಗ ಏನೂ ಒಯುವದಿಲ್ಲಾ ಕಾರಣನಾವು ಜ್ಞಾನವೆಂಬ ರತ್ನವನ್ನು ಮನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯ ಮಾಡಬೇಕೆಂದು ಪಡೇಕನೂರ ದಾಸೋಹ ಹಿರೇಮಠ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಸೋಮವಾರರಂದು ಏರ್ಪಡಿಸಲಾದ ಸುಕ್ಷೇತ್ರ ಅಂಕಲಗಿ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಭಕ್ತಿ ಎಂಬುದು ಧರ್ಮದಿಂದ ನಡೆಯುವದರಲ್ಲಿದೆ ಮಾನವರಾದ ನಾವು ಧರ್ಮಚಾರಿಗಳಾದರೆ ಪರಮಾತ್ಮನ ಅಕೌಂಟನಲ್ಲಿ ಉಳಿಯುತ್ತೇವೆಂದರು. ಮಾನವರಾದ ನಾವು ಹೂವು ಬೆಲ್ಲದಂತಾಗಿ ಸಮಾಜಕ್ಕಾಗಿ ಬೇಕಾಗುವಂತಹ ಕಾರ್ಯ ಮಾಡಬೇಕು ಅಂದರೆ ಅನ್ಯರ ಕಣ್ಣಲ್ಲಿ ನೀರು ಬರುತ್ತವೆ ಬೇನಕಾಯಿಯಾಗಿ ಇಸಾ ಮೇಕ್ಕಿಕ್ಕಾಯಿಯಾಗಬಾರದು ಸದ್ಗುಣವೆಂಬುದು ಇರಬೇಕು ದುರ್ಗುಣವೆಂಬುದು ಇರಬಾರದು ಧರ್ಮ ಸಂಗ್ರಹದಂತಹ ಪುರಾಣ ಪ್ರವಚನ ಕೇಳಿದರೆ ಮನುಷ್ಯ ಮನುಷ್ಯನಾಗಿ ಉಳಿಯಲು ಸಾದ್ಯವೆಂದು ಹೇಳಿದ ಶ್ರೀಗಳು ತಾಳಿದ ತಾಳಿಕೋಟೆಯಲ್ಲಿ ಶ್ರೀ ಖಾಸ್ಗತೇಶ್ವರ ಶ್ರೀ ಮಹಾ ಶರಣಮುತ್ಯಾರವರಂತಹ ಮಹಾತ್ಮರು ನಡೆದಾಡಿದ ಈ ನೇಲ ನೇಲೆಬೀಡಾಗಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಕೆಸರಟ್ಟಿ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಮಾತನಾಡಿ ಹಿರಣ್ಯಕಶಪ್ಪ ಎಂಬಾತ ದೇವರಿಲ್ಲಾವೆಂದು ಹೇಳಿದಾಗ ಆತನ ಮಗ ಪ್ರಲ್ಹಾದ ದೇವರಿದ್ದಾನೆಂದು ಹೇಳುತ್ತಾನೆ ಹೀಗೆ ಅನೇಕ ವಿಚಾರಗಳೊಳಗೆ ತಂದೆ ಮಕ್ಕಳ ವಾಗ್ವಾದ ನಡೆದಾಗ ದೇವರ ಮೇಲೆ ಭಕ್ತಿ ಶ್ರದ್ದೆ ಇಟ್ಟಾಗ ಸಾಕಷ್ಟು ತೊಂದರೆ ಅನುಭವಿಸಿದ್ದರೂ ಎಲ್ಲದರಲ್ಲಿಯೂ ದೇವರಿದ್ದಾನೆಂಬುದನ್ನು ತಿಳಿದುಕೊಂಡ ಪ್ರಲ್ಹಾದ ಕಂಬದಲ್ಲಿ ಕಂಬವನ್ನು ಒಡೆದು ನರಸಿಂಹ ದೇವನನ್ನು ತೋರಿಸಿ ದೇವರಿದ್ದಾನೆಂಬುದನ್ನು ಸಾಬೀತು ಪಡಿಸಿದ್ದರ ಕುರಿತು ಕಥೆಯೊಂದನ್ನು ಹೇಳಿದ ಶ್ರೀಗಳು ಪುರಾಣದ ಮಹತ್ವವೇನೆಂದರೆ ಅಜ್ಞಾನವನ್ನು ಸುಜ್ಞಾನ ಮಾಡುವದು ಭಕ್ತಿಯಿಂದ ಶಕ್ತಿಯನ್ನುಂಟು ಮಾಡುವದು ಇದರಿಂದ ಮನಸ್ಸು ಶುದ್ದವಾಗುತ್ತದೆ ಎಂದರು. ಯಾವ ರೀತಿ ದೇಹದ ಮೇಲಿನ ಹೊಲಸ್ಸನ್ನು ತೊಳೆಯಲು ನಾನಾ ತರಹದ ಸಾಬೂನನ್ನು ಉಪಯೋಗಿಸಲಾಗುತ್ತದೆ ಅದೇ ರೀತಿ ಶರಣ ಸಂತರ ವಿಚಾರ ಪುರಾಣ ಪ್ರವಚನಗಳನ್ನು ಕೇಳುವದು ಈ ಎಲ್ಲವನ್ನು ಕೇಳುವದರಿಂದ ಮನಸ್ಸೆಂಬುದು ಶುದ್ದವಾಗುತ್ತದೆ ಎಂದರು. ಶರಣ ಸಂತರ ಚಿಂತನೆಯನ್ನು ಮಕ್ಕಳಿಗೆ ತಿಳಿಸುವಂತಾಗಬೇಕು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಒಳ್ಳೆಯ ಭಾವನೆ ಬರುತ್ತದೆ ಎಂದರು. ವಿಷಾಲವಾದ, ನಿರ್ಮಲವಾದ ಮನಸ್ಸಿನಿಂದ ನಿರ್ಮಲವಾದ ಜ್ಯೋತಿ ಉದ್ಭವಿಸಲಿದೆ ಒಳ್ಳೆಯ ದೇಹವನ್ನು ಒಳ್ಳೆಯ ಜೀವನವನ್ನು ಭಗವಂತ ಕೊಟ್ಟಿದ್ದಾನೆ ಕಾರಣ ದುಶ್ಚಟಕ್ಕೆ ದಾಸರಾಗಬೇಡಿ ಎಂದು ಶ್ರೀಗಳು ಸಲಹೆ ನೀಡಿದರು.
ಇನ್ನೋರ್ವ ಶಿವ ಶರಣೆ ಭಂಟನೂರಿನ ಕಾಶಿಬಾಯಿ ಅಮ್ಮನವರು ಮಾತನಾಡಿ ಮನ ಮಾಸಿದರೆ ಶರಣರ ಹಿತನುಡಿಗಳನ್ನು ಕೇಳಬೇಕು ಗಾಳಿ ಬಿಟ್ಟಾಗ ತೂರಿಕೋ ಎಂಬಂತೆ ಕುಳಿತು ಶ್ರವಣ ಮನಸ್ಸನ್ನು ಮಾಡಿಕೊಳ್ಳಬೇಕು ಅಂದರೆ ಮಂದಿರಕ್ಕೆ ಹೋಗಲಿಕ್ಕೆ ಅನುಕೂಲವಾಗಲಿದೆ ಎಂದರು. ಇಂದು ಪ್ರಾರಂಭಗೊಂಡ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ನಡೆದ ಪುರಾಣವು 15 ದಿನಗಳ ವರೆಗೆ ನಡೆಯಲಿದ್ದು ಅದನ್ನು ಆಲಿಸಿ ಪಾಲಿಸಬೇಕು ಅಂದರೆ ಒಳ್ಳೆಯ ಹೃದಯವೆನ್ನುವಂತಹದ್ದು ಸ್ವಚ್ಚವಾಗಿರುತ್ತದೆ ತಾಯಿ ಗರ್ಭದಿಂದ ಬಂದಂತಹ ನಮಗೆ ಶ್ರಮಣ ಮನಸ್ಸು ಕುರಿತು ಭಗವಂತ ನೀಡಿದ್ದಾನೆಂದು ಭಹು ಮಾರ್ಮಿಕವಾಗಿ ಉಪದೇಶ ನೀಡಿದರು.
ಇನ್ನೋರ್ವ ಪುರಾಣ ಪ್ರವಚನಕಾರರಾಗಿ ಆಗಮಿಸಿದ ಆಲೂರಿನ ವೇ.ಸಂಗಯ್ಯ ಹಿರೇಮಠ ಅವರು ಮಾತನಾಡಿ 84 ಸಾವಿರ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದೆ ಕಾರಣ ಪುರಾಣ ಪ್ರವಚನ ಆಲಿಸುವದರಿಂದ ಮಾನವ ಜನ್ಮ ಸಾರ್ಥಕಗೊಳ್ಳಲಿದೆ ಶರಣ ಸಂತರ ಹಿತನುಡಿಗಳನ್ನು ಕೇಳಿ ದುರ್ನಡತೆ, ದುಶ್ಚಟಗಳನ್ನು ಬಿಟ್ಟು ಜೀವನ ಸಾಗಿಸಬೇಕಾಗುತ್ತದೆ ಸುಕ್ಷೇತ ಅಂಕಲಗಿ ಶ್ರೀಗುರು ನಿರೂಪಾದೀಶ್ವರ ಮಹಾ ಪುರಾಣವನ್ನು ಅಮರಗೊಳದ ಮಲಕಸಾಬ ಎನ್ನುವವರು ಬರೆದಿದ್ದಾರೆ ಪುರಾಣ ಬರೆಯುವಾಗ ಭಕ್ತಿಯಿಂದ ಶ್ರದ್ದೆಯಿಂದ ಬರೆದಂತಹ ಈ ಮಹಾ ಪುರಾಣ ಅತೀವ ಮಹತ್ವದ್ದಾಗಿದೆ ಎಂದು ಕೆಲವು ಕಿರುಕಥೆಗಳನ್ನು ಹೇಳಿ ಭಕ್ತ ಸಮೂಹಕ್ಕೆ ಬರೆಗುಗೊಳಿಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ವೇ.ಮುರುಘೇಶ ವಿರಕ್ತಮಠ, ರುದ್ರಸ್ವಾಮಿ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಬ್ಬಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಶರಣಗೌಡ ಪೊಲೀಸ್‍ಪಾಟೀಲ ಸ್ವಾಗತಿಸಿದರು, ಮಹಿಳಾ ವಿ.ವಿ.ಯ ವಿಜಯಕುಮಾರ ಹಿರೇಮಠ ನಿರೂಪಿಸಿದರು. ಸಂಗಮೇಶ ಶರಣರ ವಂದಿಸಿದರು.