ಜ್ಞಾನವೆಂಬ ಪ್ರಕಾಶದೆಡೆಗೆ ದಾರಿತೋರುವವನೇ ನಿಜವಾದ ಗುರು.

ದಾವಣಗೆರೆ, ಜು.13- ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಪ್ರಕಾಶದ ಕಡೆಗೆ ಸನ್ಮಾರ್ಗದ ದಾರಿ ತೋರಿಸುವವನೇ ನಿಜವಾದ ಗುರು ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ಡಾ. ರಾಘವೇಂದ್ರ ಗುರೂಜಿ ನುಡಿದರು.ನಗರದ ದೇವರಾಜ ಅರಸು ಬಡಾವಣೆ ‘ಸಿ’ ಹಂತದಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಾಮ್ಮಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮ ಪೂಜಾ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದರು.ಪ್ರತಿವರ್ಷ ಆಷಾಢ ಮಾಸದ ಪ್ರಥಮ ಹುಣ್ಣಿಮೆಯಂದು ಆಚರಿಸಲ್ಪಡುವ ಗುರುಪೂರ್ಣಿಮೆ ಭಾರತೀಯ ಸನಾತನ ಆಚರಣಾ ಪದ್ಧತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಕಾರಣ ಇಂದು ವೇದವ್ಯಾಸರ ಜನ್ಮದಿನವಾಗಿದ್ದು, ವ್ಯಾಸ ಪೂರ್ಣಿಮೆ ಎಂದು ಸಹ ಕರೆಯುವರು. ಗುರುಪರಂಪರೆಯಲ್ಲಿ ವೇದವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಕುಂಭಕೋಣA ಮತ್ತು ಶೃಂಗೇರಿ ಇವು ದಕ್ಷಿಣ ಭಾರತದ ಶಂಕರಾಚಾರ್ಯರ ಪ್ರಸಿದ್ಧ ಗುರುಪೀಠವಾಗಿದೆ. ಇಲ್ಲಿ ವ್ಯಾಸಪೂಜಾ ಮಹೋತ್ಸವವು ಈ ದಿನ ನಡೆಯುತ್ತದೆ. ಗುರುಪೂರ್ಣಿಮೆಯಂದು ಗುರುತತ್ವವು ಇತರ ದಿನಗಳ ಹೋಲಿಕೆ ಮಾಡಿದಲ್ಲಿ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಇಂದು ಪ್ರತಿಯೊಬ್ಬರೂ ತಾವು ಮಾಡಿದ ಪಾಪಗಳ ಪರಿಹಾರವಾಗುವುದು ಮತ್ತು ಮೊದಲಿನಿಂದಲೂ ಮನಃಪೂರ್ವಕ ಸೇವೆ ಮತ್ತು ತ್ಯಾಗ ಇವುಗಳಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ಸಾವಿರ ಪಟ್ಟು ಹೆಚ್ಚಾಗಿರುತ್ತದೆ. ಈ ಕಾರಣವಾಗಿ ಗುರು ಪೂರ್ಣಿಮೆ ಒಂದು ಪರ್ವ ಕಾಲವೇ ಆಗಿದೆ. ಸಾಧು, ಸಂತರು, ಸನ್ಯಾಸಿಗಳು, ಸಾಧಕರು, ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆಯನ್ನು ಸಲ್ಲಿಸಿ ಚಾತುರ್ಮಾಸದ ವೃತವನ್ನು ಪ್ರಾರಂಭಿಸುತ್ತಾರೆ. ಎಂದು ತಿಳಿಸುತ್ತಾ, ನಮ್ಮ ಜೀವನದಲ್ಲಿ ಆರೋಗ್ಯ, ನೆಮ್ಮದಿ, ಶಾಂತಿ ಪಡೆಯಬೇಕಾದರೆ, ಗುರುವಿಗೆ ಸಮರ್ಪಣಾಭಾವದಿಂದ ವಂದಿಸಿ ಕೃತಾರ್ಥರಾಗುವುದು ಇದು ಈ ದಿನದ ಮಹತ್ವವಾಗಿದೆ ಎಂದು ಗುರೂಜಿಯವರು ತಿಳಿಸಿದರು. ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ ನೆರವೇರಿಸಿ ಜ್ಯೋತಿ ಪ್ರಜ್ವಲನೆ ಮಾಡಿ ಮಹಾಗಣಪತಿ ಪೂಜೆಯೊಂದಿಗೆ ಗುರುಪೂಜೆ ಮಾಡಲಾಯಿತು. ಅರ್ಚನೆ, ಪ್ರಾರ್ಥನೆಯೊಂದಿಗೆ ಸತ್ಸಂಗವು ಡಾ. ರಾಘವೇಂದ್ರ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಭಾಗವಹಿಸಿದ್ದ ಯೋಗ ಸಾಧಕರು ಗುರುಭಜನೆ ಮಾಡಿದರು. ಶಾಂತಿ ಮಂತ್ರದೊಂದಿಗೆ ಮಹಾಮಂಗಳಾರತಿ ನೆರವೇರಿತು. ಪೂಜಾ ಕಾರ್ಯಕ್ರಮವನ್ನು ಸಗಟು ಔಷಧಿ ವ್ಯಾಪಾರಿ ಸಂದೀಪ್ ವಡೋನಿ, ಶ್ರೀಮತಿ ಅಶ್ವಿನಿ ವಡೋನಿ ದಂಪತಿಗಳು ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟರು. ರಂಗೋಲಿ ಸೇವೆ ಶ್ರೀಮತಿ ಭಾಗ್ಯ ಗಿರೀಶ್, ಪ್ರಸಾದ ಸೇವೆ ಶ್ರೀಮತಿ ಜ್ಯೋತಿ ಲಕ್ಷಿö್ಮÃ ವಾಸುದೇವ್, ಶ್ರೀಮತಿ ಸಂಧ್ಯಾ ಅರ್ಪಿಸಿದ ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್‌ವಿಶ್ವನಾಥಯ್ಯ, ಶ್ರೀಮತಿ ವೇದಾವತಿ, ಶ್ರೀಮತಿ ಸುಮಂಗಲಾ, ಉದ್ಯೋಗಿ ಭರತ್ ವಡೋನಿ, ಸಾಯಿನಿತಿನ್, ಆಡಿಟರ್ ಗಿರೀಶ್, ಭುವನ್, ಸೃಜನ್, ಶ್ರೀಮತಿ ಸುನಿತಾರವೀಂದ್ರ ಮುಂತಾದವರು ಭಾಗವಹಿಸಿದ್ದರು.

Attachments area