ಜ್ಞಾನವಿಕಾಸ ಕೇಂದ್ರ : ಆರೋಗ್ಯ-ಕಣ್ಣಿನ ತಪಾಸಣಾ ಕಾರ್ಯಕ್ರಮ

ರಾಯಚೂರು.ಸೆ.೦೪- ಎಲ್.ಬಿ.ಎಸ್.ವಲಯದ ಕಟ್ಲೆಟ್ಕೂರು ಕಾರ್ಯಕ್ಷೇತ್ರದ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಣ್ಣಿನ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಟ್ಲೆಟ್ಕೂರು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಸಂಪತ್ ಕುಮಾರ್ ಹಾಗೂ ಯೋಜನಾಧಿಕಾರಿಗಳಾದ ಹರೀಶ್ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ, ನಂತರ ಮಾತನಾಡುತ್ತಾ, ಯೋಜನೆಯ ಆರೋಗ್ಯ ರಕ್ಷಾ ಹಾಗೂ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಬಗ್ಗೆ ಯೋಜನೆಯಲ್ಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ದೃಷ್ಟಿ ಆಸ್ಪತ್ರೆಯ ತಾಲೂಕು ಸಂಯೋಜಕರಾದ ಮಾರೆಪ್ಪ ರವರು ಯೋಜನೆಯ ಆರೋಗ್ಯ ರಕ್ಷಾ ಕಾಡ್೯ ನಡಿ ಉಚಿತ ಕಣ್ಣಿನ ಆಪರೇಶನ್, ಬಿ.ಪಿ, ಶುಗರ್ ಹಾಗೂ ಕಣ್ಣಿನ ತಪಾಸಣೆಯ ಉಚಿತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ವೀರೇಶ್, ದೃಷ್ಟಿ ಆಸ್ಪತ್ರೆಯ ತಾಂತ್ರಿಕ ಸಹಾಯಕರಾದ ಜಯಮ್ಮ, ಕಣ್ಣಿನ ತಪಾಸಣಾ ಕ್ಯಾಂಪ್ ಮ್ಯಾನೇಜರ್ ನರಸಪ್ಪ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೆಂಕಟಮಾಲ, ವಲಯದ ಮೇಲ್ವಿಚಾರಕರು ಕುಮಾರ್ ಬಿ.ಸಿ., ಸ್ಥಳೀಯ ಸೇವಾಪ್ರತಿನಿಧಿ ಉಮಾದೇವಿ ಮತ್ತು ಕೇಂದ್ರ ಹಾಗೂ ಒಕ್ಕೂಟ ಸಂಘಗಳ ಸದಸ್ಯರು, ವಾತ್ಸಲ್ಯ ಸಂಘದ, ಮಾಸಾಶನ ಫಲಾನುಭವಿ ಸದಸ್ಯರು ಉಪಸ್ಥಿತರಿದ್ದರು.