ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ

ನವದೆಹಲಿ,ಜು.೨೪- ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಇದೇ ೨೬ರವರೆಗೆ ತಡೆ ನೀಡಿದೆ.ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆಯಿಂದ ಮಸೀದಿಯ ಸಮೀಕ್ಷೆ ನಡೆಸುವುದರ ವಿರುದ್ಧ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಮಾಡಿದ ಮನವಿಯ ಹಿನ್ನೆಲೆಯಲ್ಲಿ ಎರಡು ದಿನದ ಮಟ್ಟಿದೆ ಸಮೀಕ್ಷೆಗೆ ತಡೆ ನೀಡಿದೆ.ಅಸ್ತಿತ್ವದಲ್ಲಿರುವ ಹಿಂದೂ ದೇವಾಲಯದ ಮೇಲೆ ಮಸೀದಿ ನಿರ್ಮಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣೆ, ಜ್ಞಾನವಾಪಿ ಮಸೀದಿ ಸಂಕೀರ್ಣ ಸಮೀಕ್ಷೆಯ ಕುರಿತು ಜುಲೈ ೨೬ ರಂದು ಸಂಜೆ ೫ ಗಂಟೆಯವರೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.೨೬ರ ಸಂಜೆ ೫ ಗಂಟೆಯ ತನಕ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ನಾವು ಹೇಳುವ ತನಕ ಯಾವುದೇ ಉತ್ಖನನ ಅಥವಾ , ಆಕ್ರಮಣಕಾರಿ ವಿಧಾನ ಅನುಸರಿಸಕೂಡದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೇತ್ವದ ನ್ಯಾಯಪೀಠ ಖಡಕ್ ಸೂಚನೆ ನೀಡಿದೆ.ಸಮೀಕ್ಷೆಯ ವಿಧಾನಗಳ ಬಗ್ಗೆ ತಿಳಿಸಲು ಬೆಳಿಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕನಿಷ್ಠ ಒಂದು ವಾರವಾದರೂ ಇಟ್ಟಿಗೆ ಸಹ ಸರಿಸಲಾಗಿಲ್ಲ ಅಥವಾ ಸ್ಥಳಾಂತರಿಸುವುದು ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.ಛಾಯಾಗ್ರಹಣ, ಅಳತೆ ಇತ್ಯಾದಿಗಳನ್ನು ಮಾತ್ರ ಮಾಡಲಾಗುತ್ತಿದೆ.ಕನಿಷ್ಠ ಒಂದು ವಾರದವರೆಗೆ ಯಾವುದೇ ಉತ್ಖನನದ ಕುರಿತು ಯೋಚಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮಸೀದಿ ಸಮಿತಿಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಸಲ್ಲಿಸಿದ ಸಲ್ಲಿಕೆ ಗಮನಿದೆ.ಸ್ಥಳದಲ್ಲಿ ಯಾವುದೇ “ಆಕ್ರಮಣಕಾರಿ ಕೆಲಸ” ಅಥವಾ ಉತ್ಖನನ ಮಾಡಬಾರದು ಎಂದು ಎಎಸ್‌ಐ ತಂಡಕ್ಕೆ ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಹೈಕೋರ್ಟ್ ಹೋಗಲು ಸಲಹೆ
“ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮಸೀದಿ ಆಡಳಿತ ಸಮಿತಿಗೆ ಸಾಕಷ್ಟು ಸಮಯವನ್ನು ನೀಡಲು ನಾವು ಯೋಚಿಸುತ್ತಿದ್ದೇವೆ. ಅಲ್ಲಿಯವರೆಗೆ ಉತ್ಖನನ ಬೇಡ. ಹಿಂತಿರುಗಿ ಬಂದು ಎಎಸ್‌ಐ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ, ”ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ,ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚಿದೆ.
ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಲು ಮಸೀದಿ ಆಡಳಿತ ಸಮಿತಿಗೆ ಸುಪ್ರೀಂ ಕೋರ್ಟ್ ಹೇಳಿದೆ.