ಜ್ಞಾನವಾಪಿ ಅಲಹಬಾದ್ ಕೋರ್ಟ್‌ನಿಂದ ನಾಳೆ ತೀರ್ಪು

ವಾರಾಣಸಿ,ಆ,೨- ಉತ್ತರ ಪ್ರದೇಶದ ಜ್ಞಾನವ್ಯಾಪಿ ಮಸೀದಿಯಲ್ಲಿ ಕಂಡು ಬಂದ ಶಿವಲಿಂಗ ಆಕೃತಿ ಹಿನ್ನೆಲೆಯಲ್ಲಿ ಹಿಂದು ದೇವಾಲಯವೋ ಅಥವಾ ಮಸೀದಿಯೋ ಎನ್ನುವ ಜಿಜ್ಞಾಸೆಯ ಹಿನ್ನೆಲೆಯಲ್ಲಿ ನಾಳೆ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿಲಿದೆ.

ಇದಕ್ಕೂ ಮೊದಲು ಜ್ಞಾನವ್ಯಾಪಿ ಮಸೀದಿಯಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಆಗಸ್ಟ್ ೧ರಿಂದ ಆಗಸ್ಟ್ ೫ರವರೆಗೆ ನಡೆಯುವ ವಸ್ತು ಪ್ರದರ್ಶನದಲ್ಲಿ ಜ್ಞಾನವಾಪಿ ಮಸೀದಿಯ ಒಳ ಮತ್ತು ಹೊರಗಿನ ಪ್ರದೇಶದಲ್ಲಿ ಸಿಕ್ಕ ಕುರುಹುಗಳು ಮತ್ತು ಚಿತ್ರಗಳನ್ನು ೬೫ ದೊಡ್ಡ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಜ್ಞಾನವಾಪಿ ಬಗೆಗಿನ ವಾಸ್ತವವನ್ನು ಹೇಳುವ ಕೆಲಸ ಮಾಡಲಾಗುತ್ತಿದೆ.

ಈ ನಡುವೆ ನಾಳೆ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಲಿದೆ. ನ್ಯಾಯಾಲಯ ರಚಿಸಿದ ಸಮಿತಿ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಸಾಕ್ಷ್ಯ, ಫೋಟೋಗಳು ಇವಾಗಿವೆ.

ಜ್ಞಾನವಾಪಿ ಮಸೀದಿಯ ತಮಗೆ ಸೇರಿದ್ದು ಎಂದು ಒತ್ತಾಯಿಸಿ ಮುಸ್ಲಿಂ ಪರ ಫಿರ್ಯಾದಿದಾರರು, ಹಿಂದೂ ಅರ್ಜಿದಾರರು ತಮ್ಮ ತಮ್ಮ ಸಾಕ್ಷಿ ತೋರಿಸಲು ತಯಾರಿ ಆರಂಭಿಸಿದ್ದಾರೆ.

ನಾಳೆ ಬರುವ ಅಂತಿಮ ತೀರ್ಪಿನ ಬಳಿಕ ಯಾವುದೇ ಸಮುದಾಯ ಸಂಘರ್ಷಕ್ಕೆ ಇಳಿಯಬಾರದು ಎಂಬ ಕಾರಣಕ್ಕಾಗಿ ಈ ಪ್ರದರ್ಶನ ನಡೆಸಲಾಗುತ್ತಿದೆ. ೫ ದಿನಗಳ ಕಾಲ ಪ್ರದರ್ಶನದಲ್ಲಿ ಆದಿಮಹಾದೇವ ಕಾಶಿ ಧರ್ಮಾಲಯ ಮುಕ್ತಿ ನ್ಯಾಸ್ ಅವರು ಭಾರತೀಯ ಶಿಕ್ಷಾ ಮಂದಿರದಲ್ಲಿ ’ಧರ್ಮ ರಕ್ಷಣೆ’ ಹೆಸರಿನಲ್ಲಿ ಪ್ರದರ್ಶನ ಪ್ರಾರಂಭಿಸಿದ್ದಾರೆ.

ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ನಡೆಸಲಾಗುತ್ತದೆ. ಇಲ್ಲಿ ಮಸೀದಿ ಕುರಿತ ವಿಶೇಷ ಕಿರುಪುಸ್ತಕವನ್ನೂ ಸಿದ್ಧಪಡಿಸಿ ಜನರಿಗೆ ನೀಡಲಾಗುತ್ತಿದೆ. ಇದರಲ್ಲಿ ಜ್ಞಾನವಾಪಿಯೊಳಗಿನ ಚಿತ್ರಗಳನ್ನೆಲ್ಲ ಒಟ್ಟುಗೂಡಿಸಿ ಒಳಗಿನ ವಾಸ್ತವವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ.

ಟ್ರಸ್ಟ್‌ನ ರಾಮ್ ಪ್ರಸಾದ್ ಸಿಂಗ್ ಮಾತನಾಡಿ, ಕಳೆದ ವರ್ಷ ಜ್ಞಾನವಾಪಿ ಮಸೀದಿ ಪ್ರದೇಶದಲ್ಲಿ ಹೈಕೋರ್ಟ್ ನೇಮಿಸಿದ ಸಮಿತಿಯು ಸಂಗ್ರಹಿಸಿದ ೧೦೦ ಕ್ಕೂ ಹೆಚ್ಚು ಫೋಟೋಗಳ ಜೊತೆಗೆ, ವಿವಿಧ ಪುಸ್ತಕಗಳು ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಲಾದ ೧೬೦ ಕ್ಕೂ ಅಧಿಕ ಛಾಯಾಚಿತ್ರ ಸಾಕ್ಷ್ಯ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರದರ್ಶನದಲ್ಲಿ ಇಡಲಾದ ಚಿತ್ರಗಳಲ್ಲಿ ದೇವಾಲಯದ ಧ್ವಂಸ, ಗಂಗಾ ಮಾತೆಯ ಮೊಸಳೆ ಪ್ರತಿಮೆ, ಮುರಿದ ಗೋಪುರಗಳು ಸೇರಿದಂತೆ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲ ಪುರಾವೆಗಳು ಇಲ್ಲಿವೆ. ಯಾವುದೇ ವ್ಯಕ್ತಿ, ಯಂತ್ರಗಳ ಸಹಾಯವಿಲ್ಲದೇ, ನೋಡಬಹುದು. ಇವುಗಳಲ್ಲಿ ಹಲವು ಚಿತ್ರ ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗಿದೆ.

ಮುಂದಿನ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಾಘಮೇಳದಲ್ಲೂ ಈ ಪ್ರದರ್ಶನವನ್ನು ನಡೆಸಲಾಗುವುದು. ೨೦೨೫ ರ ಕುಂಭಮೇಳ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಲ್ಲೂ ಪ್ರದರ್ಶಿಸಿ ಜನರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.