ಜ್ಞಾನವನ್ನು ರಾಷ್ಟ್ರೀಯ ಅಭಿವೃದ್ಧಿಗೆ ಬಳಸಲು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಕರೆ

ಕಲಬುರಗಿ,ಮಾ.28:ಜ್ಞಾನವನ್ನು ರಾಷ್ಟ್ರೀಯ ಅಭಿವೃದ್ಧಿಗೆ ಬಳಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗವು ಮಂಗಳವಾರ ಆಯೋಜಿಸಿದ್ದ ವಿಶ್ವ ಸಮಾಜ ಕಾರ್ಯ ಸಪ್ತಾಹ-2023ನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ವೈವಿಧ್ಯಮಯ ಸಮಾಜವಾಗಿದೆ ಮತ್ತು ಭಾರತವು ಉಪ ಖಂಡವಾಗಿದೆ. ನಾವು ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದ್ದೇವೆ ಎಂದರು.
ಮೊದಲು ಸಾರಿಗೆ ಮತ್ತು ಸಂವಹನದ ಸರಿಯಾದ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಸಾಂಸ್ಕøತಿಕ ವಿನಿಮಯವು ತುಂಬಾ ಕಷ್ಟಕರವಾಗಿತ್ತು. ಆದರೆ ಇಂದು 24 ಗಂಟೆಗಳಲ್ಲಿ ನಾವು ಪ್ರಪಂಚದಯಾವುದೇ ಭಾಗಗಳನ್ನು ತಲುಪಬಹುದಾಗಿದೆ. ಇಂದು ನಾವು ಜಾಗತಿಕ ಹಳ್ಳಿಯಲ್ಲಿ ವಾಸಿಸುತ್ತಿದ್ದೇವೆ ಮತ್ತು ದೇಶಗಳು ಪರಸ್ಪರ ಅವಲಂಬಿಸಿವೆ. ಆದರೆ ಮೊದಲು ನಮ್ಮ ಗ್ರಾಮಗಳು ಸ್ವಾವಲಂಬಿಯಾಗಿದ್ದವು ಮತ್ತು ಗ್ರಾಮ ಗಣರಾಜ್ಯಗಳಾಗಿದ್ದವು. ನಮ್ಮ ಗ್ರಾಮೀಣ ಸಮಾಜಗಳು ಶ್ರೀಮಂತವು ಮತ್ತು ನಾಗರಿಕವು ಆಗಿದ್ದವು. ಅನೇಕ ಪ್ರಾಚೀನ ನಾಗರಿಕತೆಗಳು ಕಣ್ಮರೆಯಾಗಿವೆ. ಆದರೆ ಭಾರತೀಯ ನಾಗರಿಕತೆಯು ವೈವಿಧ್ಯತೆಯನ್ನು ಗೌರವಿಸುವ ಮತ್ತು ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುವ ಕಾರಣದಿಂದಾಗಿ ತನ್ನ ಪ್ರಾಚೀನತೆಯನ್ನು ಉಳಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು.
ಭಾರತೀಯ ಬುಡಕಟ್ಟು ಮತ್ತುಗ್ರಾಮೀಣ ಸಂಸ್ಕೃತಿ, ಭಾμÉ, ಔಷಧೀಯ ಜ್ಞಾನ ಬಹಳ ಶ್ರೀಮಂತವಾಗಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಜ್ಞಾನ ಕೇಂದ್ರಗಳನ್ನು ಅಧ್ಯಯನ ಮಾಡಬೇಕು ಮತ್ತು ಆ ಜ್ಞಾನವನ್ನು ರಾಷ್ಟ್ರೀಯ ಅಭಿವೃದ್ಧಿಗೆ ಬಳಸಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾದ ಗುಲಬರ್ಗಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ. ಕೆ.ಎಸ್. ಮಾಲಿಪಾಟೀಲ್ ಅವರು ಮಾತನಾಡಿ, ಸಮಾಜ ಕಾರ್ಯ ವಿದ್ಯಾರ್ಥಿಗಳು ಸಿದ್ಧಪಡಿಸಿದ ಗ್ರಾಮಗಳ ಮಾದರಿಗಳ ಪ್ರದರ್ಶನವು ಅವರ ಕ್ಷೇತ್ರ ಕಾರ್ಯ ಮತ್ತು ತರಗತಿಯ ಕಲಿಕೆಯ ಬಗ್ಗೆ ಮಹತ್ವವನ್ನು ವಿವರಿಸುತ್ತದೆ ಎಂದರು.
ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮತ್ತು ಕ್ಷೇತ್ರ ಕಾರ್ಯದ ಜ್ಞಾನವು ಬಹಳ ಮುಖ್ಯ. ಸಮಾಜ ಕಾರ್ಯ ವಿದ್ಯಾರ್ಥಿಗಳು ಪರಿಣಾಮಕಾರಿ ಸಮಾಜ ಸೇವಕರಾಗಲುಗ್ರಾಮ ಮತ್ತು ನಗರ ಸಂಸ್ಕೃತಿ, ಭಾμÉ, ಜನಸಂಖ್ಯಾ ವೈವಿಧ್ಯತೆ, ವಸತಿ, ಸಂಪನ್ಮೂಲಗಳು, ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟ, ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿ, ಗ್ರಾಮೀಣ ಅಭಿವೃದ್ಧಿ ಇತ್ಯಾದಿಗಳ ಜ್ಞಾನವನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣ ಸಾಮಾಜಿಕ ಸಮಸ್ಯೆಗಳ ಕುರಿತು ಪೆÇ್ರ. ಕೆ.ಎಸ್. ಮಾಲಿಪಾಟೀಲ್ ಅವರು ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ, ಬಯಲು ಶೌಚ, ಅಪೌಷ್ಟಿಕತೆ, ಸಮಗ್ರ ಶಿಕ್ಷಣದ ಗುಣಮಟ್ಟ, ಕುಡಿಯುವ ನೀರಿನ ಲಭ್ಯತೆ ಮತ್ತು ವೆಚ್ಚ, ಮದ್ಯ, ಜೂಜು, ತಂಬಾಕಿನತ್ತಆಕರ್ಷಿತರಾಗುತ್ತಿರುವ ನಿರುದ್ಯೋಗಿಯುವಕರುಇಂದಿನ ಹಳ್ಳಿಗಳ ಪ್ರಮುಖ ಸಮಸ್ಯೆಗಳಾಗಿವೆ. ಈ ಜ್ವಲಂತ ಸಮಸ್ಯೆಗಳಿಗೆ ಸಮಾಜ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡಬೇಕು ಎಂದರು.
ಇದಕ್ಕೂ ಮುನ್ನ ಸಮಾಜಕಾರ್ಯ ವಿಭಾಗದಲ್ಲಿ ಸಮಾಜಕಾರ್ಯ ವಸ್ತು ಪ್ರದರ್ಶನವನ್ನು ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜ ಕಾರ್ಯ ವಿಭಾಗ ನಡೆದು ಬಂದ ದಾರಿ ಮತ್ತು ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ್ ಜಿ., ಅವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ, ವಿಭಾಗದಿಂದ ಹಮ್ಮಿಕೊಂಡಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಈ ವರ್ಷದ ಸಾಮಾಜಿಕ ಕಾರ್ಯ ಸಪ್ತಾಹ ಆಚರಣೆಯ ಧ್ಯೇಯ ವಾಖ್ಯ ಸಹಯೋಗದ ಸಾಮಾಜಿಕ ಕ್ರಿಯೆಯ ಮೂಲಕ ವೈವಿಧ್ಯತೆಯನ್ನು ಗೌರವಿಸುವುದು ಎಂದು ಅವರು ಹೇಳಿದರು. ಕಾರ್ಯಕ್ರಮದ ಸಂಯೋಜಕ ಡಾ. ಶ್ರೀನಿವಾಸ್ ಡಿ., ಅವರು ಸ್ವಾಗತಿಸಿದರು. ಎಸ್‍ಎಸ್‍ಬಿಎಸ್ ನಿಕಾಯದ ಡೀನ್ ಪೆÇ್ರ. ಚನ್ನವೀರ್ ಆರ್.ಎಂ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸ್ಪರ್ಧಾಳುಗಳು ಉಪಸ್ಥಿತರಿದ್ದರು.