ಜ್ಞಾನಯಜ್ಞ ಸಪ್ತಾಹ

ಅಣ್ಣಿಗೇರಿ,ಮಾ31: ಸದ್ಗುರು ಸಮರ್ಥ ಶ್ರೀ ಭಾವೂಸಾಹೇಬ ಮಹಾರಾಜ ಬ್ರಹ್ಮಶಾಲೆಯಲ್ಲಿ ಜ್ಞಾನಯಜ್ಞ ಸಪ್ತಾಹದ ಕಾರ್ಯಕ್ರಮವನ್ನು ಜೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಶಿರಹಟ್ಟಿ ಫಕೀರಸಿದ್ಧರಾಮ ಸ್ವಾಮೀಜಿ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಬೇಕೆ ಬೇಕು,ಜಗತ್ತಿನಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದ ಗುರುವಿಗೆ ಒಂದು ಸ್ಥಾನವನ್ನು ಹಿಂದೂ ಸಂಪ್ರದಾಯ ಕೊಟ್ಟಿದೆ.ಗುರುವಿನ ಸೇವೆ ಮಾಡಿ ನಾವು ನಮ್ಮ ಪಾಪವನ್ನು ಕಳೆದುಕೊಳ್ಳಬೇಕು ಎಂದರು.

ಡಾ.ಎ.ಸಿ.ವಾಲಿ ಗುರೂಜಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ತಮ್ಮ ಬದುಕಿನಲ್ಲಿ ಉತ್ತಮವಾದ ವಿಚಾರಗಳನ್ನು ಮಾತ್ರ ಮನನ ಮಾಡಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ.ಅನಾವಶ್ಯಕ ಕಾರ್ಯ ಚಟುವಟಿಕೆಗಳಿಗೆ ಸಮಯವನ್ನು ವಿನಿಯೋಗ ಮಾಡದೇ ಸಮಾಜದ ಒಳಿತಿಗಾಗಿ ಸಮಯವನ್ನು ನೀಡಬೇಕು ಅಂದಾಗ ಸಮಾಜ ಸುಧಾರಣೆ ಆಗಲು ಸಾಧ್ಯ ಎಂದರು.ಈ ವೇಳೆ ಚಂಬಣ್ಣ ಸುರಕೋಡ, ನಡಕಟ್ಟಿನ,ಕೃಷ್ಣಾ ಜಿಂಗಾಡೆ, ಶರಣಬಸಪ್ಪನವರು ದೇಶಮುಖ, ಎಸ್.ಬಿ.ಪಾಟೀಲ,ಈಶ್ವರಪ್ಪ ಉಳ್ಳಾಗಡ್ಡಿ, ಮಹೇಶ ಅಂಗಡಿ, ಅರ್ಜುನ ಕಲಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಸಮೂಹ ಉಪಸ್ಥಿತರಿದ್ದರು.