ಜ್ಞಾನಭಾರತಿ ಪ್ರೌಢ ಶಾಲೆಗೆ ಪ್ರಜ್ವಲ್ ಪ್ರಥಮಸ್ಥಾನ

Oplus_0

ಯಡ್ರಾಮಿ:ಮೇ.14:ಪಟ್ಟಣದ ಜ್ಞಾನಭಾರತಿ ಪ್ರೌಡ ಶಾಲೆಯ ಪ್ರಜ್ವಲ್ ತಂದೆ ಜಗನಾಥ ಜೆಂಬೆರಾಳ ಗ್ರಾಮದ ವಿದ್ಯಾರ್ಥಿ ಶಾಲೆಗೆ ಪ್ರಥಮ ಸ್ಥಾನ ತಂದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಜಿ.ಎಸ್.ಬಿರಾದಾರ ಜ್ಞಾನಭಾರತಿ ಪ್ರೌಢಶಾಲೆಯ ಸಂಸ್ಥಾಪಕರು ವಿದ್ಯಾರ್ಥಿಗೆ ಸನ್ಮಾನಿಸಿ ಮಾತನಾಡುತ್ತ. ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 540 ಅಂಕಗಳು ಪಡೆದುಕೊಂಡು ಪ್ರತಿಶತ ಪಲಿತಾಂಶ 86 ಪಡೆದು ಶಾಲೆಗೆ ಪ್ರಥಮ ಸ್ಥಾನ ನೀಡಿದ್ದಾನೆ.

ವಿದ್ಯಾರ್ಥಿಯ ಭವಿಷ್ಯ ಮುಂದಿನ ದಿನಮಾನದಲ್ಲಿಯೂ ಕೂಡ ಉತ್ತಮ ಅಂಕಗಳು ಪಡೆದು ದೇಶದ ಭವಿಷ್ಯ ಚುಕ್ಕಾಣೆ ಹಿಡಿಕೊಂಡು ಉತ್ತಮ ನಾಗರಿಕನಾಗಬೇಕು ಎಂದು ಹಾರೈಸಿದರು.

ಈ ವರ್ಷ ನಮ್ಮ ಸಂಸ್ಥೆಯ ವತಿಯಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಜೀನಿಸ್ ಅವಾರ್ಡ ಪರೀಕ್ಷೆ ಕೈಗೊಂಡಿದ್ದು.ಈ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 40 ಸಾವಿರ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 38 ಸಾವಿರ ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗೆ 36 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಯೂ ತಮ್ಮ ಶಾಲೆಯ ಐಡಿ ಕಾರ್ಡ ಅಥವಾ ಆಧಾರ್ ಕಾರ್ಡ ತರಬೇಕು ಎಂದು ಹೇಳಿದರು.