ಜ್ಞಾನಪ್ರಕಾಶ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಕೋಲಾರ,ಅ.೩- ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಛತ್ರಕೋಡಿಹಳ್ಳಿಯ ಜ್ಞಾನಪ್ರಕಾಶ್ ಪಬ್ಲಿಕ್ ಸ್ಕೂಲ್ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೧೭ ವರ್ಷದ ಬಾಲಕರ ಖೋ-ಖೋ ತಂಡ ಪ್ರಥಮ, ೧೪ ವರ್ಷದ ಬಾಲಕರ ಥ್ರೋ ಬಾಲ್ ಪ್ರಥಮ ಸ್ಥಾನ ಪಡೆಯುವ ಮೂಲಕ ಎರಡೂ ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿವೆ.
ಅಥ್ಲೆಟಿಕ್ ೧೫೦೦ ಮೀ ಓಟದಲ್ಲಿ ಪ್ರಥಮ, ಅವಿನಾಶ ಹರ್ಡಲ್ಸ್ ಓಟದಲ್ಲಿ ಪ್ರಥಮ, ಸಾಹಿಲ್ ಶಾಟಪುಟನಲ್ಲಿ ಪ್ರಥಮ, ಪುನೀತಗೌಡ ೧೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ, ರಕ್ಷಿತ ೨೦೦ ಮೀ ಓಟದಲ್ಲಿ ದ್ವಿತೀಯ, ರಕ್ಷಾ ಕೆ.ಎನ್ ೧೦೦ ಮೀ ಹರ್ಡಲ್ಸ್ ದ್ವಿತೀಯ ಹಾಗೂ ಭವ್ಯಶ್ರೀ ಹ್ಯಾಮರ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ರಿಲೇ ಅರ್ಜುನ್, ಶೈಲೇಶ್, ಅವಿನಾಶ್, ಚಂದನ್ ತಂಡ ಪ್ರಥಮ ಸ್ಥಾನ, ಚಂದನ್ ೬೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ, ಲಯಶ್ರೀ ಹಾಗೂ ಅರ್ಜುನ್, ವೈ.ಎಂ ೧೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಶಾಲೆಯಿಂದ ೮೧ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದು, ಈ ಎಲ್ಲಾ ಕ್ರೀಡಾಪಟುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು, ಹೋಬಳಿ ಮಟ್ಟದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಶಾಲೆಯಾಗಿರುವುದು ವಿಶೇಷವಾಗಿದೆ.
ಕ್ರೀಡಾಪಟುಗಳನ್ನು ಶಾಲಾ ಮುಖ್ಯೋಪಾಧ್ಯಾಯ ಹಾಗೂ ದೈಹಿಕ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ