ಜ್ಞಾನದ ದೀಪ ಬೆಳಗಿಸಿದ ವಿಶ್ವಗುರು-ಬಸವಣ್ಣ

ಕಲಬುರಗಿ:ಎ.23: ನಗರದ ಹಿರಾಪುರ ಬಡಾವಣೆಯಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜದ ವತಿಯಿಂದ ವಚನಗಳ ಮೂಲಕ ಜ್ಞಾನದ ಬೆಳೆಕು ಚೆಲ್ಲಿದ ಮಹಾನ್ ಮಾನವತಾವಾದಿ, ಕ್ರಾಂತಿಯೋಗಿ, ವಿಶ್ವಗುರು ಬಸವಣ್ಣನವರ 890ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ
ಆಚರಿಸಲಾಯಿತು.

ನಂತರ ಮಾತನಾಡಿದ ಶರಣ ಮಲ್ಲಿಕಾರ್ಜುನ ಬಿ.ಹೆಚ್ ಬಸವಣ್ಣನವರ ತತ್ವ ಆದರ್ಶಗಳು ಮಾನವನ ಬದುಕಿಗೆ ದಾರಿ ದೀಪ. 12ನೇ ಶತಮಾನದಲ್ಲಿ ಜ್ಞಾನದ ದೀಪ ಬೆಳಗಿಸಿದ ವಿಶ್ವಗುರು ಬಸವಣ್ಣನವರು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮೇಲು ಕೀಳಿನ ವಿರುದ್ಧ ಹೋರಾಡಿದ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಿ.ಹೆಚ್, ಶ್ರೀಮಂತ ಸೌಂದರ್ಗಿ, ಸಾಯಬಣ್ಣ ಹೆಳವರ, ಬಸವರಾಜ ಹೆಳವರ ಯಾಳಗಿ, ಸಿದ್ದರಾಮ ಬೈರಾಮಡಗಿ, ಗುರುಲಿಂಗ ಹೆಳವರ, ರೇವಣಸಿದ್ದಪ್ಪ ಹೆಳವರ, ಮಲ್ಲಿಕಾರ್ಜುನ ಆರ್.ಹೆಳವರ, ಮಲ್ಲಿಕಾರ್ಜುನ ಸಿದ್ದರಾಮ ಹಾಗೂ ಇನ್ನಿತರ ಸಮಾಜದ ಮುಖಂಡರು ಭಾಗವಹಿಸಿದ್ದರು.