ಜ್ಞಾನದ ಕೊರತೆಯಿಂದ ಬಡತನದ ಉಳಿವಿಕೆ


ಹುಬ್ಬಳ್ಳಿ, ಸೆ 26: ಬಡತನವನ್ನು ಭೂಮಿಯಲ್ಲಿ ನಿಲ್ಲಿಸಿಕೊಟ್ಟಿದ್ದೆ ಜ್ಞಾನದ ಕೊರತೆ. ಹೀಗಾಗಿ ದುಡ್ಡು ಮತ್ತು ದುಡಿತ ಕೈಗೂಡಿಸಿದರೆ, ಬಡತನ ನಿರ್ಬೀಜವಾಗುವ ಸಾಧ್ಯತೆಯಿದ್ದು, ಅಂತೆಯೇ ಬಡತನವು ಸಾಹಿತ್ಯದ ಸಾರ್ವಭೌಮ ವಸ್ತು ಎಂದು ವರಕವಿ ಡಾ. ದ.ರಾ.ಬೇಂದ್ರೆಯವರು ಸಾರಿದ್ದಾರೆ ಎಂದು ಕ.ರಾ.ಸ.ದಿ.ನೌ.ಮಹಾಮಂಡಳದ ಅಧ್ಯಕ್ಷ ಕೆ.ಎಸ್. ಶರ್ಮಾ ಹೇಳಿದರು.
ಇಲ್ಲಿನ ಗೋಕುಲ್ ರಸ್ತೆಯ ಬಸವೇಶ್ವರನಗರದ ಡಾ.ಕೆ.ಎಸ್. ಶರ್ಮಾ ಕ್ಯಾಂಪಸ್‍ನ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ. ಕೆ.ಎಸ್. ಶರ್ಮಾ ಅವರ 90 ನೇ ಜನ್ಮದಿನದ ಅಂಗವಾಗಿ 3 ನೇ ದಿನದಂದು ವರಕವಿ ಡಾ. ದ.ರಾ.ಬೇಂದ್ರೆ ಸಾಹಿತ್ಯ ಸಪ್ತಾಹದಲ್ಲಿ ಹಮ್ಮಿಕೊಂಡಿದ್ದ ಡಾ. ದ.ರಾ.ಬೇಂದ್ರೆ ಸಮಗ್ರ ಗದ್ಯ ವಿಮರ್ಶೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಡಾ. ದ.ರಾ.ಬೇಂದ್ರೆಯವರ ಸಮಗ್ರ ಗದ್ಯ ವಿಮರ್ಶೆ ಕುರಿತು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಪೆÇ್ರ. ಎಂ.ಜಿ. ಹೆಗಡೆಯವರು ಉಪನ್ಯಾಸವನ್ನು ಮಂಡಿಸಿ, ಡಾ. ದ.ರಾ ಬೇಂದ್ರೆಯವರ ಸಮಗ್ರ ಗದ್ಯವು ಯಾರನ್ನಾದರೂ ಕೂಡಾ ಎದೆ ಗುಂದಿಸಬಲ್ಲದು ಎಂದರು.
ಜಾನಪದ ಕಲಾವಿದ ಡಾ. ರಾಮು ಮೂಲಗಿಯವರು ತಮ್ಮ ಸಹ ಸಂಗಡಿಗರೊಂದಿಗೆ ದ.ರಾ. ಬೇಂದ್ರೆಯವರ ಜಾನಪದ ಸೊಗಡಿನ ಸಂಗೀತ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಪೆÇ್ರೀ. ಎಂ.ಜಿ ಹೆಗಡೆ ಹಾಗೂ ಜಾನಪದ ಕಲಾವಿದರಾದ ಡಾ. ರಾಮು ಮೂಲಗಿ ಅವರಿಗೆ ಡಾ. ಕೆ.ಎಸ್. ಶರ್ಮಾ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ, ಸಂಜೀವಿನಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮನ್ ಮೋಹನ್ ಲಿಂಬಿಕಾಯಿ, ಮಹಾವಿದ್ಯಾಲಯದ ಮುಖ್ಯ ಆಡಳಿತಧಿಕಾರಿ ಶ್ರೀನಿವಾಸ ಬನ್ನಿಗೋಳ, ಪ್ರಾಂಶುಪಾಲರಾದ ಡಾ. ಚರಂತಯ್ಯ ಹಿರೇಮಠ, ಗೌರೀಶ್ ಅಸೂಟಿ, ಡಾ. ಮಾರ್ಕೆಂಡಯ್ಯಾ ಜೇಡರ್, ಪೆÇ್ರೀ. ರವೀಂದ್ರ ಶಿರಳ್ಕೋರ್, ಡಾ. ಸೋಮಶೇಖರ್ ಹುದ್ದಾರ, ಸುಮಿತ್ರಾ ಪೆÇತ್ನಿಸ್ ಉಪಸ್ಥಿತರಿದ್ದರು.