ಜ್ಞಾನದೊಂದಿಗೆ ಮೌಲ್ಯಗಳ ಅಳವಡಿಸಿಕೊಳ್ಳಲು ಕರೆ

ಸಂಜೆವಾಣಿ ವಾರ್ತೆ
ಸಂಡೂರು :ಜು:24: ಗುಣಮಟ್ಟದ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶಿಕ್ಷಣ ಪಡೆಯಲು ವಿದ್ಯರ್ಥಿಗಳು ಮುಂದೆ ಬರಬೇಕಾಗಿದೆ. ಬರಿ ಓದಿ ಅಂಕಗಳಿಸುವುದೇ ವಿದ್ಯಾರ್ಥಿಗಳ ಗುರಿಯಾಗಬಾರದು. ಪುಸ್ತಕದಲ್ಲಿರುವ ವಿಷಯವನ್ನು ಓದಿ ಅಂಕಗಳಿಸಿದರೆ ಸಾಲದು. ವಿದ್ಯರ್ಥಿ ಜೀವನದಲ್ಲಿ ಶಿಸ್ತು ಸಂಯಮ ವಿನಯದೊಂದಿಗೆ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕಾಗಿದೆ. ಜ್ಞಾನದೊಂದಿಗೆ ಮೌಲ್ಯ ಅಗತ್ಯ. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಸಂಸ್ಕಾರಮುಖ್ಯ. ಪಾಲಕರು ಮತ್ತು ಶಿಕ್ಷಕರು ವಿದ್ಯರ್ಥಿಗಳಿಗೆ ಸಂಸ್ಕಾರ ಕಲಿಸಬೇಕಾಗಿದೆ. ವಿದ್ಯಾರ್ಥಿಗಳು ತಂದೆ ತಾಯಿ ಗುರು ಹಿರಿಯರಿಗೆ ವಿದೇಯಕರಾಗಿ ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ವಿದ್ಯೆ ತಾನಾಗಿ ಬರಲು ಸಾಧ್ಯ. ಇಲ್ಲವಾದಲ್ಲಿ ಫಲಿತಾಂಶ ಶೂನ್ಯ ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾದೀಶ ದೇವಾರೆಡ್ಡಿ ಯವರು ತಿಳಿಸಿದರು.
ಅವರು ಬಳ್ಳಾರಿ ರಸ್ತೆಯಲ್ಲಿರುವ ಬಿ.ಕೆ.ಜಿ. ಗ್ಲೋಬಲ್ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಬಾರ್ ಅಸೋಷಿಯೇಶನ್, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಬಿ.ಕೆ.ಜಿ. ಗ್ಲೋಬಲ್ ಶಾಲೆ ಹಾಗೂ ವಿವಿಧ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ಹಕ್ಕುಗಳ ಕುರಿತು ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ವಕೀಲ ಎಚ್. ಕುಮಾರಸ್ವಾಮಿಯವರು ಮಕ್ಕಳ ಹಕ್ಕು ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಿ.ಕೆ.ಜಿ. ಪಿ.ಯ. ಕಾಲೇಜಿನ ಪ್ರಾಂಶುಪಾಲರಾದ ಕೆ.ವಿ. ಮೋಹನ್ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ವಕೀಲರ ಸಂಘದ ಅಧ್ಯಕ್ಷ ವಿಜಯ ಕುಮಾರ ಉಪಾಧ್ಯಕ್ಷ ಕಣ್ಣಿ ಕುಮಾರಸ್ವಾಮಿ ಕಾರ್ಯದರ್ಶಿ ಎಂ. ನಟರಾಜ ಶರ್ಮಾ ವಕೀಲರಾದ ಗುಡೇಕೋಟೆ ನಾಗರಾಜ ಟಿ.ಎಂ. ಶಿವಕುಮಾರ ಬಿ.ಕೆ.ಜಿ. ಗ್ಲೋಬಲ್ ಪ್ರಾಚಾರ್ಯರಾದ ಮೀನಾಕ್ಷಿ ದಾಸ್ ಇತರರು ಉಪಸ್ಥಿತರಿದ್ದರು.