ಜ್ಞಾನಕ್ಕೆ ಮತ್ತೊಂದು ಹೆಸರು ಅಂಬೇಡ್ಕರ್

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ಶಿಕ್ಷಕ ಮುತ್ತಣ್ಣ ರಂಡಾಳೆ ಬೋರಗಿ ಅವರು ಮಾತನಾಡಿ ವಿದ್ಯಾರ್ಥಿಗಳು ಅಂಬೇಡ್ಕರರ ಬಗ್ಗೆ ತಿಳಿದುಕೊಳ್ಳಬೇಕು ಕಷ್ಟ ಮತ್ತು ಜ್ಞಾನಕ್ಕೆ ನಮಗೆ ಅಂಬೇಡ್ಕರವರು ಉದಾಹರಣೆಯಾಗಿದ್ದಾರೆ. ನಮ್ಮ ಕೆಲಸಗಳು ಬರಿ ತೋರಿಕೆಯಾಗಿರಬಾರದು ನಮ್ಮ ಕೆಲಸಗಳು ನಿಜಜೀವನಕ್ಕೆ ಉಪಯೋಗವಾಗುವಂತಹ ಕೆಲಸವಾಗಿರಬೇಕು ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ್ ನವೀಲ ಕುಮಾರ್ ಉತ್ಕಾರ್ ಮಾತನಾಡಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆಚಾರ-ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರರವರ ಕಷ್ಟದಂತೆ ಇಂದಿನ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಕಷ್ಟಪಟ್ಟು ಯಶಸ್ವಿಯಾಗಬೇಕು ಎಂದು ಕರೆ ನೀಡಿದರು. ಇದೇ ವೇಳೆ ಮುತ್ತಣ್ಣ ರಂಡಾಳೆ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಮತ್ತು ಚರಿತ್ರೆಯ ಪುಸ್ತಕವನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮಹೇಂದ್ರಸಿಂಗ ಪಾಟೀಲ ಕಾಲೇಜು ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.