ಜೋಷನಲ್ಲಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಡಿ

ಔರಾದ್:ಜ.25: ಮಾರಕ ಕಾಯಿಲೆಗಳಿಗೆ ಯುವಕರು ಬಲಿಯಾಗುತ್ತಿದ್ದು ತಾವು ಯಾವುದು ಒಳ್ಳೆಯದು , ಯಾವುದು ಕೆಟ್ಟದ್ದು ಎಂಬುದನ್ನು ತಿಳಿದು ಉತ್ತಮ ನಿರ್ಧಾರಗಳನ್ನು ತೆದುಕೊಂಡು ಉತ್ತಮ ಜೀವನಕ್ಕಾಗಿ ಉತ್ತಮ ಆರೋಗ್ಯ, ಆದ್ದರಿಂದ ಜೋಷ್‍ಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಜಿಲ್ಲಾ ಮೇಲ್ವಿಚಾರಕ ಸುರ್ಯಕಾಂತ ಸೋರಳ್ಳಿಕರ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬೀದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರೀವೆನ್ಛನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಬೀದರ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉತ್ತಮ ನಾಗರಿಕರಾಗಲು ಮಕ್ಕಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಧ್ಯಾನ, ಯೋಗ ಇವುಗಳನ್ನು ಅಳವಡಿಸಿಕೊಂಡು ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಎಮ್ ಪಾಟೀಲ ಮಾತನಾಡಿ, ಇಂದಿನ ಯುವಕರು ದೇಶದ ಆದರ್ಶ ನಾಯಕರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ಚಿತಂನೆಗಳನ್ನು ಮನಗಾಣಬೇಕು, ವಿಶ್ವಕ್ಕೆ ಭಾರತ್ ದೇಶದ ಶಕ್ತಿ ಹಾಗೂ ಸಂಸ್ಕøತಿಯನ್ನು ಪರಿಚಯಿಸಿದ ಮಹಾನ್ ವ್ಯಕ್ತಿಯ ದೇಶದ ಅಭಿವೃದಿಗಾಗಿ ಅವರ ಕಂಡ ಕನಸನ್ನು ಇಂದಿನ ಯುವಪೀಳಿಗೆ ಸಾಕಾರಗೊಳಿಸುವ ಮೂಲಕ ದೇಶದ ಋಣವನ್ನು ತಿಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ದತ್ತಾತ್ರಿ ಗಿರಿ ಮಾತನಾಡಿ, ಯುವಕರು ಈ ದೇಶದ ಆಸ್ತಿ. ಅವರ ಪ್ರಯತ್ನ, ಪರಿಶ್ರಮದಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರಡ್ಯಾಳ ಗುರುಕುಲದ ಮಲ್ಲಿಕಾರ್ಜುನ, ಬಸವ ಗುರುಕುಲ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ನಿರ್ಮಲ ಶೇರಿಕಾರ, ಉಮಾಕಾಂತ, ರಾಜಕುಮಾರ ಮರೂಂಡಗೆ ಸೇರಿದಂತೆ ಇತರರು ಇದ್ದರು.


ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆ ಬಹುಮಾನ ವಿತರಣೆ:

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನವಚೇತ ಗುರುಕುಲದ ಆದರ್ಶ ಪುಂಡಲೀಕ ಪ್ರಥಮ ಬಹುಮಾನ 3 ಸಾವಿರ, ಚೆನ್ನಬಸವ ಗುರುಕುಲ ಕಡ್ಯಾಳದ ವಿದ್ಯಾರ್ಥಿ ಶಿವಾನಂದ ಮಲ್ಲಿಕಾರ್ಜುನ ದ್ವಿತೀಯ ಬಹುಮಾನ 2 ಸಾವಿರ, ಸರ್ಕಾರಿ ಪ್ರೌಢಶಾಲೆ ಔರಾದ ವಿದ್ಯಾರ್ಥಿನಿ ಶಿಫಾ ರೈಸೋದ್ದಿನ್ ತೃತೀಯ ಬಹುಮಾನ 1ಸಾವಿರ ಪಡೆದುಕೊಂಡಿದ್ದಾರೆ.