ಜೋಶಿ ಮಠ ಪೂರ್ಣ ಕುಸಿತ: ಇಸ್ರೋ ಎಚ್ಚರಿಕೆ

ಡೆಹ್ರಾಡೂನ್, ಜ. ೧೩- ಉತ್ತರ ಖಾಂಡದ ಜೋಶಿಮಠ ಕಳೆದ ಹಲವು ದಿನಗಳಿಂದ ಜನ ಅಂಗೈನಲ್ಲಿ ಇಟ್ಟುಕೊಂಡು ಬದುಕುತ್ತಿರುವ ನಡುವೇಯೇ ಜೋಶಿಮಠ ಸಂಪೂರ್ಣವಾಗಿ ಕುಸಿಯುವ ಎಚ್ಚರಿಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನೀಡಿದೆ. ಹೊಸದಾಗಿ ಬಿಡುಗಡೆ ಮಾಡಲಾಗಿರುವ ಇಸ್ರೋದ ಉಪಗ್ರಹ ಚಿತ್ರದಲ್ಲಿ ಈ ಆತಂಕ ವ್ಯಕ್ತಪಡಿಸಲಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಕ್ರಮೇಣ ಮುಳುಗುವ ಭೀತಿ ಎದುರಾಗಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿ ಬಿಡುಗಡೆ ಮಾಡಿದೆ, ಇದು ಇಡೀ ಪಟ್ಟಣ ಮುಳುಗಬಹುದು ಎಂದು ಹೇಳಿದೆ.
ಹೈದರಾಬಾದ್ ಮೂಲದಎನ್ ಅರ್ ಎಸ್ ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಚಿತ್ರಗಳನ್ನು ಕಾರ್ಟೊಸ್ಯಾಟ್-೨ಎಸ್ ಉಪಗ್ರಹದಿಂದ ತೆಗೆಯಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.ಚಿತ್ರಗಳಲ್ಲಿ, ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ.ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಮೇಲೆ ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪ್ರದೇಶಗಳಲ್ಲಿರುವ ಜನರನ್ನು ಆದ್ಯತೆಯ ಮೇರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಪ್ರಗತಿ ಏರುವ ಸಾದ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ವರದಿಯ ಪ್ರಕಾರ, ಏಪ್ರಿಲ್ ನಡುವೆ ಭೂಮಿಯ ಕುಸಿತ ನಿಧಾನವಾಗಿತ್ತು ಮತ್ತು ೮.೯ ಸೆಂ.ಮೀ ಮುಳುಗಿದೆ. ಆದರೆ ೨೦೨೨ರ ಡಿಸೆಂಬರ್ ಮತ್ತು ಈ ವರ್ಷದ ಜನವರಿ ೮,ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ ಮತ್ತು ಈ ೧೨ ದಿನಗಳಲ್ಲಿ ಪಟ್ಟಣದಲ್ಲಿ ೫.೪ ಸೆಂ.ಮೀ ಕುಸಿತ ಕಂಡಿದೆ. ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ಕುಸಿಯಲಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ ಎಂದು ತಿಳಿಸಲಾಗಿದೆ.
ಪಟ್ಟಣದದ ಅನೇಕ ಭೂಮಿ ಕುಸಿದ ನಂತರ ಮನೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದರೂ ಇಸ್ರೋದ ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿರುವುದು ಭಯ ಹುಟ್ಟಿಸುವಂತಿದೆ.