ಜೋಶಿ ಗೆಲುವು: ಸಂಭ್ರಮ

ಮೈಸೂರು: ನ.25:- ಮೈಸೂರು ನಗರದ ಚಾಮುಂಡಿಪುರಂ ವೃತ್ತದಲ್ಲಿ ಬಹುಮತದಿಂದ ಜಯಶೀಲರಾದ ಮಹೇಶ ಜೋಷಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರ್ ಪಾಕ್ ವಿತರಿಸಿ ವಿಜಯೋತ್ಸವ ಆಚರಿಸಿದರು.
ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಮೈಸೂರು ನಗರದ ಚಾಮುಂಡಿಪುರಂ ವೃತ್ತದಲ್ಲಿ ಅವರ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವಿಜಯೋತ್ಸವ ಆಚರಿಸಿದರು.
ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ,
ದೂರದರ್ಶನ (ಆooಡಿಜಚಿಡಿshಚಿಟಿ) ನಿರ್ದೇಶಕ ಹುದ್ದೆಯಿಂದ ನಿವೃತ್ತರಾದ ಬಳಿಕ ಸಂಪೂರ್ಣ ಕನ್ನಡದ ಕಾರ್ಯದಲ್ಲಿ ತೊಡಗಿರುವ ಜೋಶಿ ಅವರು ಕಸಾಪ 26ನೇ ರಾಜ್ಯಾಧ್ಯಕ್ಷರಾಗಿ ಮುಂದಿನ 5 ವರ್ಷಗಳ ಕಾಲ ಕನ್ನಡದ ತೇರು ಎಳೆಯಲು ಮುಂದಾಗಿದ್ದಾರೆ.
`ಜೋಶಿಯವರ ಗೆಲುವು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕಸಾಪ ಉತ್ತಮ ಸಂಸ್ಥೆಯಾಗಿ ರೂಪಗೊಳ್ಳಲಿದೆ. ಉತ್ತಮ ಸಂಸ್ಥೆ ಯೋಗ್ಯ ವ್ಯಕ್ತಿಯ ಕೈಗೆ ಸಿಕ್ಕಿದ್ದು ಖುಷಿಗೆ ಕಾರಣವಾಗಿದೆ.
ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಮಹೇಶ್ ಜೋಶಿ ಅವರಿಗೆ ಬೆಂಬಲಿಸಿದ ಕನ್ನಡ ಪ್ರೇಮಿಗಳಿಗೆ ಅನಂತಾನಂತ ಧನ್ಯವಾದಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕರು ಗ್ರಂಥದಾನ ಶ್ರೇಷ್ಠ ದಾನವಾಗಿದ್ದು ತಾಂಬೂಲ ಕೊಡುವಾಗ ವೀಳ್ಯದೆಲೆ, ಅಡಕೆಯ ಜೊತೆಗೆ ಪುಸ್ತಕವನ್ನು ಕೊಡುವ ಹೊಸ ಪರಂಪರೆ ಸೃಷ್ಟಿಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ವಿನಯ್ ಕಣಗಾಲ್, ಸುಜೇಂದ್ರ, ಚಕ್ರಪಾಣಿ, ಯೋಗೇಶ್ ಯಾದವ್, ನರಸಿಂಹ, ನವೀನ್ ಕೆಂಪಿ, ತೀರ್ಥಕುಮಾರ್, ಪಾಂಡು ನಾರಾಯಣ್ ಹಾಗೂ ಇನ್ನಿತರರು ಹಾಜರಿದ್ದರು.