ಜೋಶಿಮಠ: ಪರ್‍ಯಾಯ ವ್ಯವಸ್ಥೆ ಸರ್ಕಾರಕ್ಕೆ ಸವಾಲು

ಡೆಹ್ರಾಡೂನ್, ಜ.೧೮- ಪವಿತ್ರ ಪಟ್ಟಣ ಬದರಿನಾಥನ ಹೆಬ್ಬಾಗಿಲಾಗಿರುವ ಉತ್ತರ ಖಾಂಡದ ಜೋಶಿಮಠ ಕುಸಿತದಿಂದ ಭಕ್ತಾಧಿಗಳಿಗೆ ಪರ್ಯಾಯ ಮಾರ್ಗ ಕಲ್ಪಿಸುವುದು ಸವಾಲಾಗಿದೆ.ಬದರಿನಾಥನ ದರ್ಶನ ಪಡೆಯಲು ತೆರಳುವುದಕ್ಕೆ ಮುನ್ನ ಸಾವಿರಾರು ಯಾತ್ರಾರ್ಥಿಗಳು ಜೋಷಿಮಠದಲ್ಲಿ ವಿರಾಮ ಪಡೆದು ಯಾತ್ರೆ ಮುಂದುವರಿಸುತ್ತಿದ್ದರು. ಬದರಿನಾಥನ ದರ್ಶನದ ಏಕೈಕ ಮಾರ್ಗವಾಗಿರುವ ಜೋಷಿ ಮಠ ಭೂಮಿ ಕುಸಿತ ಭಕ್ತಾಧಿಗಳ ಆತಂಕಕ್ಕೂ ಕಾರಣವಾಗಿದೆ.
ಜೋಶಿಮಠದ ಹಲವು ಸ್ಥಳಗಳನ್ನು “ಅಪಾಯಕಾರಿ ವಲಯ” ಎಂದು ಗುರುತಿಸಿರುವುದರಿಂದ, ಉತ್ತರಾಖಂಡದ ಅತ್ಯಂತ ಜನಪ್ರಿಯ ದೇಗುಲ ಬದರಿನಾಥನ ದರ್ಶನಕ್ಕೆ ಭಕ್ತಾಧಿಗಳನ್ನು ಕೊಂಡೊಯ್ಯುವ ಹಾದಿಯ ಈಗ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.ಜೋಶಿಮಠ ಪ್ರವೇಶಿಸಿದ ನಂತರ, ಯಾತ್ರಾರ್ಥಿಗಳು ಬದರಿನಾಥಕ್ಕೆ ಮತ್ತು ಹೊರಹೋಗುವ ವಾಹನಗಳಿಗೆ ಏಕಮುಖ ರಸ್ತೆ ಯೋಜನೆ ಅನುಸರಿಸುತ್ತಾರೆ. ಹಲವಾರು ಮನೆಗಳು ಮತ್ತು ರಸ್ತೆಗಳು ಬಿರುಕು ಬಿಟ್ಟಿವೆ. ಮೋರಿಗಳು ಸಹ ಕುಸಿಯುತ್ತಿವೆ. ಯಾತ್ರೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೇಳಿತ್ತುಮ ಆದರೂ ಭಕ್ತರಲ್ಲಿ
ಬೈಪಾಸ್ ಕಾಮಗಾರಿ ಸ್ಥಗಿತ:
ಚಾರ್ ಧಾಮ್ ಯೋಜನೆಯಡಿ, ಅಧಿಕಾರಿಗಳು “ಬದರಿನಾಥಕ್ಕೆ ಬೈ-ಪಾಸ್” ಸಿದ್ದಪಡಿಸುತ್ತಿದ್ದು ಜೋಶಿಮಠದ ಸುಮಾರು ೯ ಕಿಮೀ ಮೊದಲು ಹೆಲಂಗ್‌ನಿಂದ ಪ್ರಾರಂಭವಾಗಿ ಮಾರ್ವಾಡಿ ರಸ್ತೆಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳಿಂದಾಗಿ ಬೈಪಾಸ್ ಯೋಜನೆ “ನಿಲ್ಲಿಸಲಾಗಿದೆ.ಇತ್ತೀಚಿನ ವರ್ಷಗಳಲ್ಲಿ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಸ್ಥಳೀಯ ಅಧಿಕಾರಿಗಳ ಆತಂಕ ಹೆಚ್ಚಿಸಿದೆ. ಜೋಶಿಮಠದ ಅನೇಕ ಸ್ಥಳಗಳಲ್ಲಿ ಸಡಿಲ ಮತ್ತು ಅಪಾಯಕಾರಿಯಾಗಿದೆ.೨೦೧೬ ರಲ್ಲಿ, ೬.೫ ಲಕ್ಷ ಯಾತ್ರಿಕರು,೨೦೧೭ ರಲ್ಲಿ ೯.೨ ಲಕ್ಷ, ೨೦೧೮ ರಲ್ಲಿ ೧೦.೪ ಲಕ್ಷ ಮತ್ತು ೨೦೧೯ ರಲ್ಲಿ ೧೨.೪ ಲಕ್ಷ. .೨೦೨೦ ಮತ್ತು ೨೦೨೧ ರಲ್ಲಿ ಯಾತ್ರಿಕರು ಬದರಿನಾಥಕ್ಕೆ ಭೇಟಿ ನೀಡಿದ್ದರು.ಪ್ರತಿ ವರ್ಷ ‘ಬಸಂತ್ ಪಂಚಮಿ’ ಸಂದರ್ಭದಲ್ಲಿ ದೇವಾಲಯದ ದ್ವಾರಗಳ ತೆರೆಯುವ ದಿನಾಂಕವನ್ನು ಸಾಮಾನ್ಯವಾಗಿ ಘೋಷಿಸಲಾಗು ತ್ತದೆ. ಸಾಮಾನ್ಯವಾಗಿ, ಧಾಮದ ಬಾಗಿಲುಗಳನ್ನು ಯಾತ್ರಾರ್ಥಿಗಳಿಗೆ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ತೆರೆಯಲಾಗುತ್ತದೆ.ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜೋಶಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ಔಲಿಯಲ್ಲಿನ ಚಳಿಗಾಲದ ಪಂದ್ಯಗಳು ಅಥವಾ ಬದರಿನಾಥ್ ಯಾತ್ರೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದ್ದರು ಆದರೂ ಯಾತ್ರಿಕರ ಆತಂಕ ಹೆಚ್ಚಿದೆ.