ಜೋಳ ರೈತರಿಗೆ ಹಣ ಹಾಕದ ಸರ್ಕಾರ -ಬಾದರ್ಲಿ

ಸಿಂಧನೂರು.ಎ.೨೦- ಖರೀದಿ ಕೇಂದ್ರಕ್ಕೆ ಜೋಳ ಮಾರಿದ ರೈತರಿಗೆ ತಿಂಗಳಾದರು ಸರ್ಕಾರ ಹಣ ಹಾಕದೆ ಇರುವದರಿಂದ ಜೋಳ ಬೆಳೆದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಹೇಳಿದರು.
ನಗರ ಯುವ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಕೂಡಲೆ ಹಣ ಹಾಕದಿದ್ದರೆ ರೈತರ ಪರವಾಗಿ ಸರ್ಕಾರ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ಮುಂದಿನ ದಿನಗಳಲ್ಲಿ ಹೊರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಸ್ಕಿ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯು ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಮಸ್ಕಿಯಲ್ಲಿ ಒಗ್ಗಟ್ಟಿನಿಂದ ಪ್ರಚಾರ ಮಾಡಿ ಮತದಾರರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವದಾಗಿ ತಿಳಿಸಿದರು.
ಕಾಂಗ್ರೆಸ್ ಸರಕಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಅನ್ನ ಭಾಗ್ಯ ಸೇರಿದಂತೆ ಜನಪರ ಯೋಜನೆಗಳನ್ನು ಮತದಾರರ ಮನೆ-ಮನೆಗೆ ಮುಟ್ಟಿಸಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆಲುವಿಗಾಗಿ ಶ್ರಮಿಸಲಾಗಿದೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಅವರ ಪುತ್ರ ವಿಜಯೇಂದ್ರ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಹಂಚಿ ಚುನಾವಣೆ ಭ್ರಷ್ಟಾಚಾರ ನಡೆಸಿದ್ದು ಅವರ ಹಣದ ಆಸೆಗೆ ಮತದಾರರು ಮರಳಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆ ಮತಹಾಕಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾದ ಕಾರಣ ಇಂದು ಸೋಂಕಿತರ ಸಂಖ್ಯೆ ಹೆಚ್ಚಾಗಿ ಜನ ಸಾಯಿಯುತ್ತಿದ್ದಾರೆ. ತಾಲೂಕಿನಲ್ಲಿ ಶಾಸಕ ವೆಂಕರಾವ್ ನಾಡಗೌಡ ಅಧಿಕಾರಿಗಳ ಸಭೆ ಕರೆದು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದ್ದಾರೆ ತಾಲೂಕಿನಲ್ಲಿ ತಾಲೂಕು ಆಡಳಿತ ಸತ್ತು ಹೋಗಿದೆ ಎಂದ ಅವರು ಜನರು ಮಾಸ್ಕ ಧರಿಸಿ ಸಮಾಜಿಕ ಅಂತರ ಕಾಪಾಡಿ ಕೊರೊನಾ ದಿಂದ ನಿಮ್ಮನು ಕಾಪಾಡಿಕೊಳ್ಳಬೇಕು ನಿಮಗೆ ಏನಾದರು ತೊಂದರೆಯಾದರೆ ನಮ್ಮ ಫೌಂಡೇಶನ್ ಸಂಪರ್ಕಿಸಿದರೆ ಸಹಾಯ ಸಹಕಾರ ಮಾಡುವದಾಗಿ ಯುವ ಕಾಂಗ್ರೆಸ್ ರಾಜ್ಯಾದ್ಯಕ್ಷರಾದ ಬಸವನಗೌಡ ಬಾದರ್ಲಿ ಜನರಲ್ಲಿ ಮನವಿ ಮಾಡಿಕೊಂಡರು.
ಯುವ ಕಾಂಗ್ರೆಸ್ ಮುಖಂಡರು ಖಾಜಾ ಹುಸೇನ್ ರೌಡಕುಂದ, ಹನುಮೇಶ ಬಾಗೊಡಿ ,ನಾಗರಾಜ ಕವಿತಾಳ ,ದ್ರಾಕ್ಷಾಹಿಣಿ, ಹುಸೇನ್ ಭಾಷ್ ,ಷಕಿರಯ್ಯ,ಮಲ್ಲಯ್ಯ ನಾಯಕ ಪತ್ರಿಕೆ ಗೋಷ್ಠಿಯಲ್ಲಿ ಉಪಸ್ತರಿದ್ದರು.