ಜೋಳ ರಾಗಿ ತೊಗರಿ ನೀಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.17: ಮಹಿಳೆಯರು ಮತ್ತು ಮಕ್ಕಳಲ್ಲಿನ  ಅಪೌಷ್ಟಿಕತೆಯನ್ನು ನೀಗಿಸಲು ಸರ್ಕಾರ ಈಗ ಕೊಡುವ ಪಡಿತರ ಧಾನ್ಯಗಳ ಜೊತೆಗೆ ಜೋಳ, ರಾಗಿ, ತೊಗರಿ ಬೇಳೆ, ಒಳ್ಳೆಣ್ಣೆ ಸೇರಿದಂತೆ  ಪ್ರದೇಶವಾರು ಸೇವನೆ ಮಾಡುವ ಆಹಾರ ಧಾನ್ಯಗಳನ್ನ ವಿತರಿಸಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಬಿ.‌ನಾಗೇಂದ್ರ ಅವರಿಗೆ ಮನವಿ ಮಾಡಿದ್ದಾರೆ.
ನಿನ್ನೆ ದಿನ ಸಚಿವರಿಗೆ ಮನವಿ ಸಲ್ಲಿಸಿದ ಅವರು‌  ನರೇಗಾ ಕಾರ್ಮಿಕರಿಗೆ ಸಹ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಶ್ರಮಿಕ ಕಾರ್ಡನ್ನು ನೀಡಬೇಕು ಈ ಕಾರ್ಡಿನಿಂದ ಶಾಲಾ ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಸಿಗುವಂತಾಗುತ್ತದೆ ಎಂದಿದ್ದಾರೆ.
ಕಂಪ್ಲಿ ತಾಲೂಕು ಸಂಚಾಲಕಿ ಎಸ್. ಎಂ. ಪವಿತ್ರ,  ಸಂಡೂರ್ ತಾಲೂಕ್ ಕಾರ್ಯಕರ್ತೆ ವಾಣಿ,  ಕಾರ್ಮಿಕರು ಅನಿತಮ್ಮ, ದೇವಮ್ಮ, ನೀಲಮ್ಮ, ಉರ್ಸಿದ ಖುರ್ಷಿದಾಬಿ. ಅಕ್ಕಮಹಾದೇವಿ ಮುಂತಾದವರು ಇದ್ದರು.

One attachment • Scanned by Gmail