ಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ತೊಂದರೆ:ಕ್ರಮಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.22: ಬಳ್ಳಾರಿ ನಗರದ ಮುಂಡ್ರಿಗಿ ಇಂಡಸ್ಟ್ರೀಯಲ್ ಪ್ರದೇಶದಲ್ಲಿರುವ ಜೋಳ ಖರೀದಿ ಕೇಂದ್ರದಲ್ಲಿನ ಅಧಿಕಾರಿಗಳು ರೈತರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ರೈತರು ತಮ್ಮ ಜೋಳವನ್ನು ಟ್ರ್ಯಾಕ್ಟರ್ ಮತ್ತು ಆಟೋಗಳಲ್ಲಿ ತಂದಲ್ಲಿ ಅದನ್ನು ಗೋಡೌನ್ ಹೊರಗಡೆ ಆನ್ ಲೋಡ್ ಮಾಡಿ ಅದನ್ನು ತೂಕ ಮಾಡಿ ನಂತರ ಗೋಡೌನ್ ಒಳಗೆ ಕಳಿಸುತ್ತಾರೆ. ಇದರಿಂದ ರೈತರಿಗೆ ಚಿಂತಾಲ್ ಕೂಲಿ ಮತ್ತು ಹಮಾಲಿ ಕೂಲಿ ದುಪ್ಪಟ್ಟಾಗಿ ಖರ್ಚು ಹೆಚ್ಚಾಗುತ್ತದೆ. ಅಷ್ಟೆ ಅಲ್ಲದೆ ಜೋಳ ಸೆರಗು ಇದೆ. ನುಚ್ಚಿ ಇದೆ ಎಂದು ನೆಪ ಹೇಳಿ ರೈತರು ತಂದ ಜೋಳವನ್ನು ವಾಪಸ್ಸು ಕಳಿಸುತ್ತಾರೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಸಲ್ಲಿಸಿದೆ
ವ್ಯಾಪಾರಸ್ಥರು ಜೋಳವನ್ನು ತಂದಲ್ಲಿ ಅವರಿಂದ ಕಮೀಷನ್ ಪಡೆದುಕೊಂಡು ನೇರವಾಗಿ ಖರೀದಿ ಕೇಂದ್ರದೊಳಗೆ ಲಾರಿಯನ್ನು ಒಯ್ದು ಅಲ್ಲೇ ತೂಕ ಮಾಡಿ ಅನ್ ಲೋಡ್ ಮಾಡುತ್ತಾರೆ.
ಕಳೆದ ವರ್ಷ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ರೈತರ ಹೆಸರಿನಲ್ಲಿ ವ್ಯಾಪಾರಶ್ತರು ಅಕ್ರಮವಾಗಿ ಖರೀದಿ ಕೇಂದ್ರದಲ್ಲಿ ಮಾಲನ್ನುಹಾಕಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವಾಗಿತ್ತು. ಅದೇ ರೀತಿ ಬಳ್ಳಾರಿಯಲ್ಲಿ ನಡೆಯದಂತೆ ಮುನ್ನೆಚ್ಚರಿಕೆವಹಿಸಬೇಕು, ಒಂಮ ವೇಳೆ ಅಂತ ವ್ಯವಹಾರ ನೆಡದಲ್ಲಿ ನಮ್ಮ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹೋರಾಟವನ್ನು ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣ, ತಾಲೂಕಾಧ್ಯಕ್ಷ ಎಱ್ರಿಸ್ವಾಮಿ, ಖಜಾಂಚಿ ಮಾರೆಣ್ಣ, ತಾಲೂಕು ಉಪಾಧ್ಯಕ್ಷ ಖನ್ನಾನಾಯಕ್, ಸೇರಿದಂತೆ ಇತರರು ಎಚ್ಚರಿಸಿದ್ದಾರೆ.