ರಾಯಚೂರು, ಜೂ.೯- ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ ಜೋಳದ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಒತ್ತಾಯಿಸಿ ಜೋಳ ಬೆಳೆಗಾರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮೂರು ತಿಂಗಳು ಗತಿಸಿದರೂ ರೈತರ ಖಾತೆಗೆ ಹಣ ಜಮೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿರ್ಲಕ್ಷ ಮುಂದುವರಿದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಹಿಂಗಾರುನಲ್ಲಿ ಬೆಳೆದ ಜೋಳವನ್ನು ಮಾನ್ವಿ ತಾಲೂಕಿನ ತಡಕಲ್, ಬ್ಯಾಗವಾಟ್, ಹಿರೇಕೊಟ್ನೆಕಲ್, ಮಾನ್ವಿ ಹಾಗೂ ಫೋತ್ನಲ್ ಸೇರಿದಂತೆ ಆರು ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಲಾಗಿದೆ. ಅಧಿಕಾರಗಳ ನಿರ್ಲಕ್ಷದಿಂದ ರೈತರ ಖಾತೆಗೆ ಹಣ ಜಮೆ ಆಗಿಲ್ಲ ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ನೂತನ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ರೈತರ ಖಾತೆಗೆ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನೂರಕ್ಕೂ ಅಧಿಕ ರೈತರ ಖಾತೆಗೆ ಇದುವರೆಗೂ ನ್ಯಾಯ ಪೈಸ ಹಣ ಬಿಡುಗಡೆ ಮಾಡಿಲ್ಲವೆಂದು ಅಧಿಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಈಗ ಮುಂಗಾರಿನ ಬಿತ್ತನೆಗೆ ಬೀಜ ತರಲು ಶೇ.೩ ರ ಬಡ್ಡಿಯಂತೆ ಸಾಲ ಪಡೆಯುವ ಪರಿಸ್ಥಿತಿ ಎದುರಾಗಿದೆ. ಮಾರಾಟ ಮಾಡಿದ ಜೋಳದ ಹಣವನ್ನು ರೈತರ ಖಾತೆಗೆ ಶೀಘ್ರ ಪಾವತಿ ಮಾಡಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜಮಾಲುದ್ದೀನ್, ಮಲ್ಲನಗೌಡ, ದೇವರಾಜ , ಪಂಪಾಪತಿ, ಬಸವಲಿಂಗಯ್ಯ, ವಿರೇಶ, ಶಂಕರಗೌಡ, ಶರಣಗೌಡ ಸೇರಿದಂತೆ ಉಪಸ್ಥಿತರಿದ್ದರು.