ಜೋಳದ ಬೀಜ ಸಂಗ್ರಹಣೆಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಂದ ಉಪಯುಕ್ತ ಮಾಹಿತಿ

ಸೇಡಂ, ಮಾ, 05: ತಾಲೂಕಿನ ಪ್ರಗತಿಪರ ರೈತರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೋಮನಾಥರೆಡ್ಡಿ ಪುರಮಾ ಕೋಡ್ಲಾ ಅವರು ಮುಂಬರುವ ದಿನಗಳಲ್ಲಿ ತಾಲೂಕಿನ ರೈತರು ಜೋಳ ಬಿತ್ತನೆಗೆ ಈಗಾಗಲೇ ಜೋಳದ ಬೀಜ ಸಂಗ್ರಹಾಣೆಗೆ ರಾಶಿ ಸಂದರ್ಭದಲ್ಲಿ ಯಾವ ರೀತಿ ಬೀಜ ಸಂಗ್ರಹಿಸಿದರೆ ಉತ್ತಮ ಇಳುವರಿ ಬರುತ್ತದೆ ಉಪಯುಕ್ತ ಮಾಹಿತಿ ಜೋಳದ ರಾಶಿಯಲ್ಲಿ ಮಾಹಿತಿ ನೀಡಿದರು.
ಪ್ರತಿ ವರ್ಷ ಜೋಳದ ರಾಶಿ ಮಾಡುವಾಗ ರೈತರು ಜೋಳದ ತೆನೆಯ ಇಂಬಾಗ್ ಕಪ್ಪು ಕಲೆ ಇರುವ ತೆನೆಗಳನ್ನು ಬೀಜ ಸಂಗ್ರಹಣೆಗೆ ಮಾಡಿಕೊಳ್ಳಬಾರದು ಬೀಜ ಸಂಗ್ರಹಣೆ ಮಾಡಬೇಕಾದರೆ ತೆನೆಯ ಸುತ್ತಮುತ್ತ ಯಾವುದೇ ರೀತಿ ಕಪ್ಪು ಕಲೆ ಇರಬಾರದೆಂದು ಮಾಹಿತಿ ತಿಳಿಸಿದರು.