ಜೋರ್ಡಾನ್‌ನ ರಾಜಕುಮಾರಗೆ ಗೃಹಬಂಧನ!

ಜೋರ್ಡಾನ್, ಎ.೪- ಜೋರ್ಡಾನ್‌ನ ಮಾಜಿ ಯುವರಾಜ ಹಮ್ಝಾ ಬಿನ್ ಹುಸೇನ್ ಸದ್ಯ ಗೃಹಬಂಧನದಲ್ಲಿರುವ ಸಂಗತಿ ಇದೀಗ ಹೊರಬಿದ್ದಿದೆ. ಸ್ವತಹ ಹಮ್ಝಾ ಬಿನ್ ಹುಸೇನ್ ಅವರ ಈ ಮೂಲಕ ವಿಡಿಯೋ ಸಂದೇಶ ಮಾಡಿ ತನ್ನ ವಕೀಲರಿಗೆ ಕಳುಹಿಸಿದ್ದು, ಇದನ್ನು ಬಿಬಿಸಿ ವರದಿ ಮಾಡಿದೆ.
ಇದಕ್ಕೂ ಮುನ್ನ ಇಲ್ಲಿನ ಮಿಲಿಟರಿ ಆಡಳಿತ ಹಮ್ಝಾರನ್ನು ಗೃಹಬಂಧನದಲ್ಲಿ ಇಡಲಾಗಿರುವ ಸಂಗತಿಯನ್ನು ನಿರಾಕರಿಸುತ್ತಲೇ ಬಂದಿತ್ತು. ಅಲ್ಲದೆ ಹಮ್ಝಾಗೆ ಕೇವಲ ದೇಶದ ಭದ್ರತೆ ಹಾಗೂ ಸ್ಥಿರತೆಯನ್ನು ಭಂಗಪಡಿಸುವ ಕಾರ್ಯವನ್ನು ನಿಲ್ಲಿಸುವಂತೆ ಆದೇಶ ನೀಡಲಾಗಿತ್ತು ಎಂದು ಎಂದು ಅಲ್ಲಿನ ಆಡಳಿತ ವಾದ ಮಾಡಿತ್ತು. ಆಡಳಿತದ ವಿರುದ್ಧ ಸತತ ಟೀಕೆ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಹಮ್ಝಾರನ್ನು ಸದ್ಯ ಗೃಹಕೈದಿಯನ್ನಾಗಿ ಇಡಲಾಗಿದೆ. ಆದರೆ ತಾನು ಯಾವುದೇ ತಪ್ಪು ಮಾಡಿಲ್ಲ, ಅಲ್ಲದೆ ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ ಎಂದು ಹಮ್ಝಾ ತಿಳಿಸಿದ್ದಾರೆ.