ಜೋತು ಬಿದ್ದ ವಿದ್ಯುತ ವೈಯರ್ ಗಳು:ಭಯದಲ್ಲಿ ಪಟ್ಟಣದ ಜನತೆ

ಯಡ್ರಾಮಿ:ಪಟ್ಟಣಲ್ಲಿ ಜೋತು ಬೀದ್ದ ವಿದ್ಯುತ ವೈಯರ್ ಗಳಿಂದ ಹಾಗೂ ಬಾಗಿದ ವಿದ್ಯುತ ಕಂಭಗಳಿಂದ ನಾಲ್ಕನೇ ವಾರ್ಡಿನ ನಿವಾಸಿಗಳು ಮಳೆ ಗಾಳಿಗೆ ಯಾರ ಮನೆಯ ಮೇಲೆ ಬಿಳುತ್ತವೆ ಎಂದು ಭಯದ ವಾತಾವರಣದಲ್ಲಿ ಜೀವನ ಸಾಗಿಸಬೇಕಾಗಿದೆ ಎಂದು ವಿದ್ಯುತ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೋಳ್ಳಸಲಾಯಿತ್ತು.

ಬುಧವಾರ ಬೆಳಗ್ಗೆ ಈಗಾಗಲೇ ಮಳೆಗಾಲ ಪ್ರಾರಂಭ ಆಗಿದ್ದು ಮಳೆ ಗಾಳಿಯಿಂದ ವಾರದ ಹಿಂದೆ ವಾರ್ಡಿನಲ್ಲಿ ಮನೆಯ ಕಟ್ ಆದ ವೈಯರ್ಗಳನ್ನು ಜೋಡಿಸಲು ಹೋಗಿ ಸಾವು ಸಂಭವಿಸಿದ್ದು. ನಾಲ್ಕನೇ ವಾರ್ಡಿನ ನಿವಾಸಿಗಳು ಈಗಾಗಲೇ ಇಲಾಖೆಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮಕೈಗೊಂಡಿಲ್ಲ.

ನಮ್ಮ ವಾರ್ಡಿನಲ್ಲಿ ಕೆಲವೇ ವಿದ್ಯುತ ಕಂಭಗಳಿದ್ದು ಹೆಚ್ಚು ಮನೆಗಳು ನಿರ್ಮಾಣವಾಗಿವೆ.ಒಂದು ಕಂಭಕ್ಕೆ ಹಲವಾರು ಜನರು ದೂರದ ಮನೆಗಳಿಗೆ ವೈಯರ್ ಎಳೆದುಕೊಂಡು ಅಪಾಯದ ಪರಸ್ಥಿತಿ ಇದ್ದು.

ವಿದ್ಯುತ ಇಲಾಖೆ ಅಧಿಕಾರಿಗಳು ತಕ್ಷಣ ನಮ್ಮ ವಾರ್ಡಿನ ಎಲ್ಲಾ ಜೋತು ಬಿದ್ದ ವೈಯರ್ ಗಳು ಜೋಡಿಸುವ ಜೋತೆಗೆ ಹಳೆಯ ಕಂಭಗಳು ಹೊಸ ಕಂಭಗಳು ಹಾಕಬೇಕು ಹಾಗೂ ನಮ್ಮ ಮನೆಗಳ ಮೇಲೆ ಇರುವ ವಿದ್ಯುತ ವೈಯರಗಳು ತೆರವು ಗೋಳಿಸಬೇಕು ಎಂದು ಆಗ್ರಹಿಸಿದ್ದರು.

ಹೀಗೆ ಮುಂದುವರಿದರೆ ಕಚೇರಿಯ ಮುಂದೆ ವಾರ್ಡಿನ ಸಂಪೂರ್ಣ ಕುಟುಂಬದ ಸಮೇತವಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾಗುವುದು ಎಂದು ಎಚ್ಚರಿಕ್ಕೆ ನೀಡಿದರು.


ಹೊಸ ವಾರ್ಡಿನಲ್ಲಿ ಕಂಭಗಳು ಕಡಿಮೆ ಅವ ಮನೆಗಳು ಜಾಸ್ತಿ.ಆಗ್ಯಾವರೀ ಒಂದು ಕಂಭಕ್ಕೆ ಎಲ್ಲರೂ ಲೈಟ್ ತೊಗದಿವ್ರೀ ಗಾಳಿ ಮಳಿ ಆದ್ರೆ ಎಲ್ಲಾ ವೈಯರ್ ಯಾರ ಮನೆಯ ಮೇಲೆ ಬಿಳುತ್ತವೆ ಎಂದು ಭಯ ಇದೆ ರೀ.

—-ಶಾಂತಮ್ಮ ವಾರ್ಡಿನ ನಿವಾಸಿ


ಪಟ್ಟಣದಲ್ಲಿ ಮಳಿ ಗಾಳಿ ಇದ್ದು ವಾರ್ಡಿನ ಜನರಿಗೆ ತೊಂದರೆ ಆಗಿದ್ದರೆ ತಕ್ಷಣ ವಾರ್ಡಿಗೆ ನಾಳೇ ಬಂದು ಇರುವಂತ ಸಮಸ್ಯೆಗಳು ಕುರಿತು ಜನರ ಜೋತೆಗೆ ಚರ್ಚಿಸಿ ಸಮಸ್ಯೆಗೆ ಕ್ರಮ ಕೈಗೋಳ್ಳಲಾಗುವುದು.

—ಕಾರ್ಯನಿರ್ವಾಹಕ ಅಧಿಕಾರಿ ಕೆ.ಇ.ಬಿ ಯಡ್ರಾಮಿ.