ಬೆಂಗಳೂರು,ಜು.೧೩- ನಗರವನ್ನೇ ಬೆಚ್ಚಿ ಬೀಳಿಸಿದ್ದ ಏರೋನಿಕ್ಸ್ ಇಂಟರ್‌ನೆಟ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ (ಸಿಇಒ) ವಿನುಕುಮಾರ್ ಅವರ ಜೋಡಿ ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೪ಕ್ಕೇರಿದೆ.
ಪ್ರಕರಣದಲ್ಲಿ ಮೂವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದ ಅಮೃತಹಳ್ಳಿ ಪೊಲೀಸರು ಕೊಲೆಗೀಡಾದ ಎಂ.ಡಿ ಹಾಗೂ ಸಿಇಒ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕ ಅರುಣ್ ಕುಮಾರ್ ನನ್ನು ಬಂಧಿಸಿದ್ದಾರೆ.ಬಂಧಿತ ಅರುಣ್ ಕುಮಾರ್ ಜಿ-ನೆಟ್ ಕಂಪನಿ ಮಾಲೀಕನಾಗಿದ್ದು, ಜಿ-ನೆಟ್ ಕಂಪನಿಯಲ್ಲಿ ಫಣೀಂದ್ರ ಹೆಚ್‌ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿನು ಕುಮಾರ್ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ೮ ತಿಂಗಳ ಹಿಂದೆ ಫಣೀಂದ್ರ ಹಾಗೂ ವಿನು ಕುಮಾರ್ ಕೆಲಸ ತೊರೆದು ಅಮೃತಹಳ್ಳಿಯಲ್ಲಿ ತಮ್ಮದೇ ಆದ ಹೊಸ ಕಂಪನಿ ಸ್ಥಾಪಿಸಿದ್ದರು.ಹೊಸ ಕಂಪನಿ ಸ್ಥಾಪನೆಯಿಂದ ಅರುಣ್ ಕುಮಾರ್?ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಇದೇ ಕಾರಣಕ್ಕೆ ಜೋಕರ್ ಫೆಲಿಕ್ಸ್ ಅಲಿಯಾಸ್ ಶಬರೀಶ್ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಕೃತ್ಯದಲ್ಲಿ ಶಾಮೀಲಾಗಿರುವುದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಹೆಸರು ಬದಲಿಸಿಕೊಂಡಿದ್ದ:
ಜೋಡಿ ಪ್ರಕರಣದಲ್ಲಿ ಆರೋಪಿ ಫೆಲಿಕ್ಸ್?ನ ಒಂದೊಂದೇ ಕಥೆ ಬೆಳಕಿಗೆ ಬರುತ್ತಿದ್ದು ಶಿವಮೊಗ್ಗದ ಶಬರೀಶ್ ಬೆಂಗಳೂರಿಗೆ ಬಂದು ಫೆಲಿಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ.
ರ್ಯಾಪರ್ ಹಾಗೂ ರೀಲ್ಸ್ ನಲ್ಲಿ ಹುಚ್ಚುತನದ ವರ್ತನೆಯಿಂದಲೇ ಖ್ಯಾತಿ ಪಡೆದಿದ್ದು, ಜಿನೆಟ್ ನಲ್ಲಿ ಕೆಲಸ ಬಿಟ್ಟ ಬಳಿಕ ಮುಂಬೈ ಮತ್ತು ಕಾಶಿಯಲ್ಲಿ ಕೆಲಸ ಮಾಡುತ್ತಿದ್ದ.
ವಿಚಿತ್ರವಾಗಿ ವೇಷ ತೊಟ್ಟು ರೀಲ್ಸ್ ಮಾಡುತ್ತಿದ್ದು, ಇದೇ ಕಾರಣಕ್ಕೆ ಹೆಚ್ಚಾಗಿ ಫೆಲಿಕ್ಸ್ ಸ್ಮಶಾನದಲ್ಲಿ ವಾಸ, ಗಾಂಜಾ ಸೇವನೆ ಮಾಡುತ್ತಿದ್ದ ಎನ್ನಲಾಗಿದೆ.
ಪರಾರಿ ದೃಶ್ಯ ವೈರಲ್ :
ಏರೋನಿಕ್ಸ್ ಕಂಪನಿ ಎಂಡಿ ಫಣೀಂದ್ರ ಹಾಗೂ ಸಿಇಒ ವಿನುಕುಮಾರ್ ಅವರನ್ನು ಅಮೃತಹಳ್ಳಿಯ ಅವರ ಕಚೇರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಬಂಧಿತರು ಪರಾರಿಯಾಗಿದ್ದೇ ರೋಚಕವಾಗಿದೆ. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಬರಿಗಾಲಲ್ಲೇ ಓಡಿ ಹೋಗಿದ್ದರು.
ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ದಾರಿಗಳ ಬಗ್ಗೆ ಸಂಚು ರೂಪಿಸಿ ಹಿಂಬದಿ ಬಾಗಿಲು ತೆಗೆದು ಕಾಂಪೌಂಡ್ ಹಾರಿ ಪರಾರಿಯಾಗಿ ಅಲ್ಲಿಂದ ಮುಖ್ಯರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದ ಅವರು ಏರಿಯಾ ಬಿಟ್ಟಿದ್ದರು.
ಸಂತೋಷ್ ಸಹಾಯ:
ಕೊಲೆ ನಂತರ ಫೆಲಿಕ್ಸ್ ಸೇರಿ ಮೂವರು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್??ನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಪರಾರಿಯಾಗುತ್ತಿದ್ದಾಗ ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದಾನೆ.
ಏನೂ ಗೊತ್ತಿಲ್ಲದಂತೆ ಜೋಕರ್ ಫೆಲಿಕ್ಸ್ ಹಿಂದೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.