ಜೋಡಿ ಕೊಲೆ ಪ್ರಕರಣ: ಶಿಕ್ಷಕನ ಬಂಧನ


ದಾವಣಗೆರೆ,ನ.೨: ಪ್ರತ್ಯೇಕವಾಗಿ ಎರಡು ಕೊಲೆಗಳನ್ನು ಮಾಡಿದ್ದ ಆರೋಪಿಯನ್ನು ಚನ್ನಗಿರಿ ಪೋಲಿಸರು ಬಂಧಿಸವಲ್ಲಿ ಯಶಸ್ವಿಯಾಗಿದ್ದು, ಎರಡು ದಿನದಲ್ಲಿ ಈ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ.
ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಕ್ರಾಸ್‌ನ ನಿವಾಸಿ ಶ್ವೇತಾ(೨೬), ಮತ್ತು ಅಕೆಯ ಸ್ನೇಹಿತ ವೇದಮೂರ್ತಿ (೨೯) ಅವರ ಕೊಲೆ ಪ್ರಕರಣದಲ್ಲಿ ಕಾರಿಗನೂರು ಗ್ರಾಮದ ಖಾಸಗಿ ಶಾಲೆಯ ಶಿಕ್ಷಕ ಶಿವಕುಮಾರನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮೂಲದ ಶಿವಕುಮಾರ್ ಕಾರಿಗನೂರು ಗ್ರಾಮದಲ್ಲಿನ ಖಾಸಗಿ ಶಾಲೆಯ ಶಿಕ್ಷಕನಾಗಿದ್ದು ಶ್ವೇತಾ ಈತನ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಶ್ವೇತಾ ಕಾರಿಗನೂರು ಕ್ರಾಸ್‌ನ ವಾಸಿ ವೇದಮೂರ್ತಿ ಜೊತೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಶಿವಕುಮಾರ್ ತಿಳಿದಿದ್ದು ಆತನ ಆಕೆಗೆ ಬುದ್ದಿವಾದ ಹೇಳಿದ್ದ. ಈ ನಡುವೆ ಇಬ್ಬರಿಬ್ಬರ ನಡುವೆ ಜಗಳವಾಗಿ ಶ್ವೇತಾ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು.
ನಂತರ ಆಕೆಯು ತನ್ನ ಸ್ನೇಹಿತ ವೇದಮೂರ್ತಿಯೊಂದಿಗೆ ಹೊನ್ನಾಳಿ ತಾಲ್ಲೂಕಿನಲ್ಲಿದ್ದಳು. ಈ ವಿಚಾರ ಶಿವಕುಮಾರನಿಗೆ ತಿಳಿದು ಆತ ತನ್ನ ಸಹೋದರ ಶಿವರಾಜನೊಂದಿಗೆ ಸೇರಿಕೊಂಡು ಶ್ವೇತಾ ಮತ್ತು ವೇದಮೂರ್ತಿಯ ಕೊಲೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ಕೊಲೆ !
ತನ್ನ ಸಹೋದರ ಶಿವರಾಜನೊಂದಿಗೆ ಹೊನ್ನಾಳಿಗೆ ತೆರಳಿದ್ದ ಶಿವಕುಮಾರ್ ಪತ್ನಿಯ ಸ್ನೇಹಿತ ವೇದಮೂರ್ತಿಯನ್ನು ಉಸಿರು ಕಟ್ಟಿಸಿ ಸಾಯಿಸಿ, ನಂತರ ಆತನ ಶವನ್ನು ನದಿಗೆ ದಬ್ಬಿದ್ದಾರೆ. ನಂತರ ಸೂಳೆ ಕೆರೆಯಲ್ಲಿ ಕರೆಯಲ್ಲಿ ನಾವಿಬ್ಬರೂ ಸಾಯೋಣ ಎಂದು ಹೇಳಿ ಶ್ವೇತಾಳನ್ನು ನಂಬಿಸಿ, ಕರೆ ತಂದ ಶಿವಕುಮಾರ ಚನ್ನಗಿರಿ ತಾಲ್ಲೂಕಿನ ರಾಜನಗೊಂಡನಹಳ್ಳಿಯ ತೋಟವೊಂದರಲ್ಲಿ ಅಕೆಯನ್ನು ಉಸಿರು ಕಟ್ಟಿಸಿ , ಕೊಲೆ ಮಾಡಿ ಶವನ್ನು ಬಾವಿಗೆ ತಳ್ಳಿ ಪರಾರಿಯಾಗಿದ್ದಾರೆ.
ಮೃತಳ ಸಹೋದರ ಚನ್ನಗಿರಿ ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ಪ್ರದೀಪ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಜಿ.ಮುನ್ನೋಳ್ಳಿ ನೇತೃತ್ವದಲ್ಲಿ ಸಿಪಿಐ ಆರ್.ಆರ್.ಪಾಟೀಲ, ಎಸ್‌ಐಗಳಾದ ಜಗದೀಶ, ರೂಪ್ಲಿಬಾಯಿ, ಅಪರಾಧ ವಿಭಾಗದ ಸಿಬ್ಬಂದಿಯಾದ ರುದ್ರೇಶ, ಮಂಜುನಾಥ, ರುದ್ರೇಶ, ಮೊಹಮ್ಮದ್ ಖಾನ್, ಧರ್ಮ, ಪ್ರವೀಣ ಗೌಡ, ಚಾಲಕರಾದ ರಘು, ರವಿ, ರೇವಣಸಿದ್ದಪ್ಪ ಒಳಗೊಂಡ ೩ ತಂಡ ರಚಿಸಲಾಗಿತ್ತು.
ಈ ತಂಡಕ್ಕೆ ಎರಡು ಕೊಲೆ ಪ್ರಕರಣಗಳನ್ನು ಒಬ್ಬನೇ ವ್ಯಕ್ತಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಮದ ಹಿನ್ನಲೆಯಲ್ಲಿ ಶಿವಕುಮಾರನನ್ನು ವಿಚಾರಣೆಗೆ ಒಳಪಡಿಸಿದಾಗ ವೇದಮೂರ್ತಿ ಮತ್ತು ಶ್ವೇತಾಳ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಈ ಕೊಲೆಗಳಿಗೆ ಅವರಿಬ್ಬರ ನಡುವ ಅನೈತಿಕ ಸಂಬಂಧ ಕಾರಣ ತಿಳಿಸಿದ್ದಾನೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಎಸ್ಪಿ ಎಂ.ರಾಜೀವ್, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಆರ್.ಆರ್.ಪಾಟೀಲ, ಎಸ್‌ಐಗಳಾದ ಜಗದೀಶ, ರೂಪ್ಲಿಬಾಯಿ ಮತ್ತಿತರರಿದ್ದರು.