
ಔರಾದ್ :ಜು.9: ತಾಲೂಕಿನ ಜೋಜನಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥಿರ್ಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ದಿಸೆಯಲ್ಲಿ “ಶಾಲಾ ಸಂಸತ್ತು’ ಮತದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದೇಶದಲ್ಲಿ ಚುನಾವಣೆ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದರ ತಿಳಿವಳಿಕೆ ನೀಡುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮ್ಮ ನಾಯಕರನ್ನು ವಿದ್ಯಾರ್ಥಿಗಳು ತಾವೇ ಮತದಾನದ ಮೂಲಕ ಆಯ್ಕೆ ಮಾಡಿಕೊಂಡರು.
ಶಾಲೆಯ 1ನೇ ತರಗತಿಯಿಂದ 7ನೇ ತರಗತಿಯವರೆಗೆ 80 ವಿದ್ಯಾಥಿರ್ಗಳು ಮತದಾನದ ಹಕ್ಕು ಚಲಾಯಿಸಿದರು. ಪ್ರಜಾಪ್ರಭುತ್ವದಲ್ಲಿ ಆಡಳಿತ ಹೇಗೆ ನಡೆಸಲಾಗುತ್ತದೆ ಎಂಬುದರ ಮಾದರಿಯಲ್ಲಿ ಶಾಲೆಯಲ್ಲಿ ತಮ್ಮ ನಾಯಕರನ್ನು ಆರಿಸಿದರು.
ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಅನುಸರಿಸಲಾಯಿತು. 23 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅದರಲ್ಲಿ 12 ಜನ ವಿದ್ಯಾರ್ಥಿಗಳು ವಿಜಯ ಸಾಧಿಸಿದ್ದಾರೆ.
ವಿದ್ಯಾರ್ಥಿನಿ ನಂದಿನಿ ಸುಭಾಷ 20 ಮತಗಳು ಪಡೆಯುವುದರ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾಳೆ, 08 ಮತಗಳು ಪಡೆದು ವಿದ್ಯಾರ್ಥಿ ಹಸ್ಪಸ್ ತಾಜೋದ್ದಿನಿ ದ್ವಿತೀಯ ಸ್ಥಾನ ಪಡೆಯುದರ ಮೂಲಕ ಶಾಲಾ ಸಂಸತ್ತಿಗೆ ಆಯ್ಕೆಯಾಗಿದ್ದರೆ.
ಚುನಾವಣೆ ನಡೆಯುವ ಪೂರ್ವದಲ್ಲಿ ಇವಿಎಂ ಮಷಿನ್ ನಲ್ಲಿರುವ ಬ್ಯಾಲಟಿಂಗ್, ಕ್ಲೋಸ್, ಕ್ಲಿಯರ್ ಬಟನ್‍ಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಗುರು ಸವಿತಾ ಪಾಟೀಲ ಚುನಾವಣೆ ಅಧಿಕಾರಿಯಾಗಿ ಮಾಹಿತಿ ನೀಡಿದರು.
ಮತಗಟ್ಟೆಯ ಎಲ್ಲಾ ಕಾರ್ಯಗಳನ್ನು ವಿದ್ಯಾರ್ಥಿಗಳೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಭಾರತಿ, ಗೀತಾ, ಪ್ರದೀಪ್, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸಂಸತ್ತು ಕಾಟಾಚಾರಕ್ಕೆ ರಚನೆಯಾಗುವುದಿಲ್ಲ. ಅಕ್ಷರಶಃ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ನಡೆಯುತ್ತದೆ. ಮಕ್ಕಳಲ್ಲಿ ಸಂಸದೀಯ ವ್ಯವಸ್ಥೆಯ ಬಗೆಗೆ ಈಗಿನಿಂದಲೇ ತಿಳಿವಳಿಕೆ ನೀಡುವ ಉದ್ದೇಶದ ಭಾಗವಾಗಿದೆ.
ಸವಿತಾ ಪಾಟೀಲ,
ಮುಖ್ಯಗುರುಗಳು
ಶಾಲಾ ಸಂಸತ್ ರಚನೆಯಿಂದ ಚುನಾವಣೆಗಳನ್ನು ಏಕೆ ಮಾಡುತ್ತಾರೆ, ಹೇಗೆ ನಡೆಯುತ್ತವೆ, ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು ಮಾಡಬೇಕಾಗಿರುವ ಕೆಲಸಗಳೇನು ಎನ್ನುವ ಕುರಿತು ಮಾಹಿತಿ ದೊರೆತಿದೆ. ನಮ್ಮ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಬಹಳ ಖುಷಿ ನೀಡಿದೆ.
ಪ್ರೀತಿ ಪ್ರಭುಶೆಟ್ಟಿ
ವಿದ್ಯಾರ್ಥಿನಿ