ಜೋಜನಾದಲ್ಲಿ ಮತದಾನ ಜಾಗೃತಿ ಅಭಿಯಾನ

ಔರಾದ್ :ಏ.3: ಭಾರತೀಯ ನಾಗರಿಕರಾದ ನಾವುಗಳು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಪಿಡಿಒ ನರಸಿಂಗ್ ಮಾನೆ ಹೇಳಿದರು.

ಮಂಗಳವಾರ ತಾಲೂಕಿನ ಜೋಜನಾ ಗ್ರಾಮದಲ್ಲಿ ಜಿಲ್ಲಾಡಳಿತ , ಜಿಲ್ಲಾ ಸ್ವೀಪ್ ಸಮಿತಿ ಬೀದರ್, ತಾಪಂ ಔರಾದ್ ಹಾಗೂ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ಜರುಗಿದ ಮಾತದಾರರ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಚುನಾವಣಾ ಪರ್ವ ದೇಶದ ಗರ್ವದ ಮಾತಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತದಾರರು ಮತ ಹಾಕುವ ಮೂಲಕ ಭಾರತದ ಏಕತೆಗೆ ಕೈಜೋಡಿಸುವ ಅಗತ್ಯವಿದೆ . ಮತದಾನ ಮಾಡುವುದು ಪ್ರತಿಯೊಬ್ಬರ ಜನ್ಮಸಿದ್ದ ಹಕ್ಕಾಗಿದ್ದು, ಚುನಾವಣಾ ಸಂಧರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಅನೀಲಕುಮಾರ ಪಾಟೀಲ್, ಐಇಸಿ ಸಂಯೋಜಕಿ ವೋಸೀನ್, ವಿ.ಆರ್.ಡಬ್ಲು ಚನ್ನಬಸಪ್ಪ ಪಾಟೀಲ್, ಕನ್ಯಾಕುಮಾರಿ, ಲಲಿತಾ, ನಾಗಮ್ಮ, ಸೇರಿದಂತೆ ಆಶಾ, ಅಂಗನವಾಡಿ, ಗ್ರಾಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.