ಜೋಗಿ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲು ಮನವಿ

ಚಿತ್ರದುರ್ಗ.ಜ.೧೪;ಬೆಂಗಳೂರಿನಲ್ಲಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ  ಕೆ ರವೀಂದ್ರ ಶೆಟ್ಟಿ ಅವರನ್ನು ಭೇಟಿ ಮಾಡಿ ಜೋಗಿ ಸಮುದಾಯಕ್ಕೆ ಯಾವುದೇ ತರಹದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಮತ್ತು ಬಿಸಿಎಮ್ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಿಂದ ಯಾವುದೇ ರೀತಿಯಾದ ಸವಲತ್ತುಗಳ ಸಿಗದೇ ವಂಚಿತರಾಗಿದ್ದಾರೆ ಎಂದು ಮನವಿ ಸಲ್ಲಿಸಲಾಯಿತು ಮತ್ತು ಸನ್ಮಾನಿಸಲಾಯಿತು  ಜಿಲ್ಲೆಯ ಅನೇಕ ಕಡೆಗಳಲ್ಲಿ ಜೋಗಿ ಸಮುದಾಯಕ್ಕೆ ಇಲ್ಲಿಯೂ ಸಹ ಸಮುದಾಯ ಭವನ ವಿರುವುದಿಲ್ಲ ಸಮುದಾಯಕ್ಕೆ ಸ್ವಲ್ಪ ಜಾಗವಿಲ್ಲ ಸಮುದಾಯವು ಶಿಕ್ಷಣದಿಂದ ವಂಚಿತರಾಗಿದ್ದಾರೆ ನಮ್ಮ  ಸಮುದಾಯದವರು ಅರ್ಜಿ ಸಲ್ಲಿಸಿದರೂ ಸಹ ಕಿರುಸಾಲ ಗಂಗಾ ಕಲ್ಯಾಣ ಇತರೆ ಸೌಲಭ್ಯಗಳು ಸಿಕ್ಕಿರುವುದಿಲ್ಲ ಎಂದು ಅಧ್ಯಕ್ಷರಲ್ಲಿ ವಿನಂತಿಸಿಕೊಂಡ ಆಗ ನಾನು ಸಣ್ಣ ಸಣ್ಣ ಸಮುದಾಯಗಳಿಗೆ ಹೆಚ್ಚು ಒತ್ತುಕೊಟ್ಟು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜೋಗಿ ಮತ್ತು ಇತರ ಉಪಜಾತಿಯ  ಸಮುದಾಯ ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹರಿಸುತ್ತೇನೆ ಎಂದು ಆತ್ಮಸ್ಥೈರ್ಯವನ್ನು ತುಂಬಿ ನಿಮ್ಮ ಸಮಾಜಕ್ಕೆ ಹೆಚ್ಚು ಒತ್ತು ನೀಡಿ  ಮುಖ್ಯವಾಹಿನಿಗೆ ತರುವುದೇ ನಮ್ಮ ಗುರಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ .ಪ್ರತಾಪ್ ಜೋಗಿಿ, ರಮೇಶ್ ಜೋಗಿ, ಮದು ಜೋಗಿ, ಮಲ್ಲಿಕಾರ್ಜುನ ಜೋಗಿ, ಹುಲಗಪ್ಪ ಜೋಗಿ ಉಪಸ್ಥಿತರಿದ್ದರು